Udayavni Special

ಕುರುಕ್ಷೇತ್ರದ 2 ನೇ ಟ್ರೇಲರ್‌ಗೆ ಭರ್ಜರಿ ಮೆಚ್ಚುಗೆ

ದರ್ಶನ್‌ ದುರ್ಯೋಧನನ ಅವತಾರಕ್ಕೆ ಫ್ಯಾನ್ಸ್‌ ಫ‌ುಲ್‌ ಖುಷ್‌

Team Udayavani, Jul 25, 2019, 3:04 AM IST

KURUKSHETRA

ಕನ್ನಡದ ಈ ವರ್ಷದ ಬಹುನಿರೀಕ್ಷಿತ ಮೆಗಾ ಮೂವೀ ಎಂದೇ ಕರೆಸಿಕೊಳ್ಳುತ್ತಿರುವ “ಕುರುಕ್ಷೇತ್ರ’ ಚಿತ್ರ ತೆರೆಗೆ ಬರೋದಕ್ಕೆ ಮುಹೂರ್ತ ಫಿಕ್ಸ್‌ ಆಗಿದೆ. ಮತ್ತೂಂದೆಡೆ ಭರ್ಜರಿಯಾಗಿ “ಕುರುಕ್ಷೇತ್ರ’ದ ಪ್ರಮೋಶನ್‌ ಕಾರ್ಯಗಳನ್ನು ನಡೆಸುತ್ತಿರುವ ಚಿತ್ರತಂಡ, ಚಿತ್ರದ ಒಂದೊಂದೆ ಹಾಡುಗಳು, ಟ್ರೇಲರ್‌ ಅನ್ನು ರಿಲೀಸ್‌ ಮಾಡುತ್ತ ಸಿನಿಪ್ರಿಯರ ಗಮನ ಸೆಳೆಯುವ ಕಸರತ್ತು ಮಾಡುತ್ತಿದೆ.

ಕೆಲ ದಿನಗಳ ಹಿಂದೆ ಬಿಡುಗಡೆಯಾದ “ಕುರುಕ್ಷೇತ್ರ’ ಚಿತ್ರದ ಹಾಡುಗಳಿಗೆ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾದರೂ, ಟ್ರೇಲರ್‌ ಅದೇಕೊ ಪ್ರೇಕ್ಷಕರಿಗೆ ಅಷ್ಟಾಗಿ ರುಚಿಸಲಿಲ್ಲ. ಈ ಹಿಂದೆ ಚಿತ್ರತಂಡ ಬಿಡುಗಡೆ ಮಾಡಿದ್ದ ಟೀಸರ್‌ಗಳ ಒಂದಷ್ಟು ದೃಶ್ಯಕ್ಕೆ ಒಂದೇ ಒಂದು ಹೊಸ ದೃಶ್ಯ ಸೇರಿಸಿ ಟ್ರೇಲರ್‌ ಎಂದು ಚಿತ್ರತಂಡ ಬಿಡುಗಡೆ ಮಾಡಿದ್ದರಿಂದ, “ಕುರುಕ್ಷೇತ್ರ’ದ ಮೊದಲ ಟ್ರೇಲರ್‌ ಮೇಲೆ ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿದ್ದ ಅಭಿಮಾನಿಗಳಿಗೆ ನಿರಾಸೆ ಮೂಡುವಂತೆ ಮಾಡಿತ್ತು.

ಇನ್ನು ಯು-ಟ್ಯೂಬ್‌ನಲ್ಲಿ ಬಿಡುಗಡೆಯಾಗಿದ್ದ ಈ ಟ್ರೇಲರ್‌ ಹೊಗಳಿಕೆಗಿಂತ, ತೆಗಳಿಕೆ ಪಡೆದುಕೊಂಡಿದ್ದೇ ಹೆಚ್ಚು. ಅದರಲ್ಲೂ ಚಿತ್ರದ ಟ್ರೇಲರ್‌ ನೋಡಿದ ಚಾಲೆಂಜಿಂಗ್‌ ಸ್ಟಾರ್‌ ದರ್ಶನ್‌ ಅಭಿಮಾನಿಗಳಂತೂ, ಟ್ರೇಲರ್‌ ಬಗ್ಗೆ ತೀವ್ರ ಬೇಸರ ವ್ಯಕ್ತಪಡಿಸಿ, ಹೊಸ ಟ್ರೇಲರ್‌ ಬಿಡುಗಡೆ ಮಾಡುವಂತೆ ಸೋಶಿಯಲ್‌ ಮೀಡಿಯಾಗಳಲ್ಲಿ ದರ್ಶನ್‌ ಅವರಿಗೆ ಒತ್ತಾಯ ಮಾಡಿದ್ದರು. ಬಳಿಕ ಕೊನೆಗೂ ಅಭಿಮಾನಿಗಳ ಒತ್ತಾಯಕ್ಕೆ ಮಣಿದ ದರ್ಶನ್‌ ಹಾಗು ಚಿತ್ರತಂಡ, ಚಿತ್ರದ ಮತ್ತೂಂದು ಹೊಸ ಟ್ರೇಲರ್‌ ಬಿಡುಗಡೆ ಮಾಡುವುದಾಗಿ ಘೋಷಿಸಿತ್ತು.

ಅದರಂತೆ ಬುಧವಾರ (ಜು.24) ಮಧ್ಯಾಹ್ನ 2 ಗಂಟೆಗೆ ಅಧಿಕೃತವಾಗಿ ಲಹರಿ ಮತ್ತು ಟಿ-ಸಿರೀಸ್‌ನ ಯು-ಟ್ಯೂಬ್‌ ಚಾನೆಲ್‌ನಲ್ಲಿ “ಕುರುಕ್ಷೇತ್ರ’ದ ಎರಡನೇ ಟ್ರೇಲರ್‌ ಬಿಡುಗಡೆ ಮಾಡಲಾಗಿದೆ. ಸದ್ಯ ಬಿಡುಗಡೆಯಾಗಿರುವ “ಕುರುಕ್ಷೇತ್ರ’ದ ಎರಡನೇ ಟ್ರೇಲರ್‌ನಲ್ಲಿ ದುಯೋಧನನ ಗೆಟಪ್‌ನಲ್ಲಿರುವ ದರ್ಶನ್‌ ಅವರ ಅಬ್ಬರ ಜೋರಾಗಿದ್ದು, ದರ್ಶನ್‌ ಅಭಿಮಾನಿಗಳಂತೂ ಟ್ರೇಲರ್‌ ನೋಡಿ ಫ‌ುಲ್‌ ಖುಷ್‌ ಆಗಿದ್ದಾರೆ.

“ಕುರುಕ್ಷೇತ್ರ’ದ ಮೊದಲ ಟ್ರೇಲರ್‌ಗಿಂತ, ಎರಡನೇ ಟ್ರೇಲರ್‌ಗೆ ಹೆಚ್ಚು ಮೆಚ್ಚುಗೆ ವ್ಯಕ್ತವಾಗುತ್ತಿದ್ದು, ಚಿತ್ರತಂಡ ಕೂಡ ಸಮಾಧಾನದ ನಿಟ್ಟುಸಿರು ಬಿಟ್ಟಿದೆ. ಇನ್ನು “ಕುರುಕ್ಷೇತ್ರ’ ಇದೇ ಆಗಸ್ಟ್‌ 2 ರಂದು ಬಿಡುಗಡೆಯಾಗುತ್ತಿದ್ದು, ಚಿತ್ರದಲ್ಲಿ ಅಂಬರೀಶ್‌, ರವಿಚಂದ್ರನ್‌, ಅರ್ಜುನ್‌ ಸರ್ಜಾ, ರವಿಶಂಕರ್‌, ಸೋನುಸೂದ್‌, ಮೇಘನಾ ರಾಜ್‌, ಸ್ನೇಹಾ, ಮೇಘನಾ ರಾಜ್‌, ಶ್ರೀನಿವಾಸ ಮೂರ್ತಿ, ಶ್ರೀನಾಥ್‌ ಸೇರಿದಂತೆ ಬಹುದೊಡ್ಡ ಕಲಾವಿದರ ದಂಡೇ ಚಿತ್ರದಲ್ಲಿದೆ.

ಭಾರತದಲ್ಲಿ ಮೊದಲ ಬಾರಿಗೆ 2ಡಿ ಹಾಗೂ 3ಡಿಯಲ್ಲಿ ಬಿಡುಗಡೆಯಾಗುತ್ತಿರುವ ಪೌರಾಣಿಕ ಚಿತ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ “ಕುರುಕ್ಷೇತ್ರ’ ಚಿತ್ರವನ್ನು ನಾಗಣ್ಣ ನಿರ್ದೇಶನ ಮಾಡಿದ್ದಾರೆ. ಚಿತ್ರದ ಹಾಡುಗಳಿಗೆ ಹರಿಕೃಷ್ಣ ಸಂಗೀತ ಸಂಯೋಜನೆ ಮಾಡಿದ್ದು, ಡಾ ವಿ. ನಾಗೇಂದ್ರ ಪ್ರಸಾದ್‌, ಕೆ.ಕಲ್ಯಾಣ್‌ ಸಾಹಿತ್ಯ ರಚಿಸಿದ್ದಾರೆ. ಮುನಿರತ್ನ ಅದ್ದೂರಿ ವೆಚ್ಚದಲ್ಲಿ “ಕುರುಕ್ಷೇತ್ರ’ ಚಿತ್ರವನ್ನು ನಿರ್ಮಿಸಿದ್ದಾರೆ. ಪಂಚ ಭಾಷೆಗಳಲ್ಲಿ ಬರುತ್ತಿರುವ ಈ ಚಿತ್ರ ಬಾಕ್ಸಾಫೀಸ್‌ನಲ್ಲಿ ಎಷ್ಟರಮಟ್ಟಿಗೆ ಸದ್ದು ಮಾಡಲಿದೆ ಅನ್ನೋದು ಚಿತ್ರ ಬಿಡುಗಡೆಯಾದ ಮೇಲಷ್ಟೇ ಗೊತ್ತಾಗಲಿದೆ.

ಉದಯವಾಣಿ ಸುದ್ದಿ ಈಗ ಟೆಲಿಗ್ರಾಂನಲ್ಲೂ ಲಭ್ಯ; ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್ ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

Good News:ಕೇಂದ್ರ ಸರ್ಕಾರಿ ನೌಕರರಿಗೆ ಬೋನಸ್ ಘೋಷಣೆ, 30 ಲಕ್ಷ ಉದ್ಯೋಗಿಗಳಿಗೆ ದಸರಾ ಗಿಫ್ಟ್

Good News:ಕೇಂದ್ರ ಸರ್ಕಾರಿ ನೌಕರರಿಗೆ ಬೋನಸ್ ಘೋಷಣೆ, 30 ಲಕ್ಷ ಉದ್ಯೋಗಿಗಳಿಗೆ ದಸರಾ ಗಿಫ್ಟ್

ಯತ್ನಾಳ್ ಅವರ ಅನಿಸಿಕೆ ಬಿಜೆಪಿಯ ಅನಿಸಿಕೆಯಲ್ಲ: ಸಿಎಂ ಬದಲಾವಣೆಯಿಲ್ಲ: ಎಚ್.ವಿಶ್ವನಾಥ್

ಯತ್ನಾಳ್ ಅವರ ಅನಿಸಿಕೆ ಬಿಜೆಪಿಯ ಅನಿಸಿಕೆಯಲ್ಲ: ಸಿಎಂ ಬದಲಾವಣೆಯಿಲ್ಲ: ಎಚ್.ವಿಶ್ವನಾಥ್

ಕೋವಿಡ್ ಎಫೆಕ್ಟ್:ಆಂಧ್ರಪ್ರದೇಶದಲ್ಲಿ 27 ವಿದ್ಯಾರ್ಥಿಗಳಿಗೆ ಸೋಂಕು ದೃಢ, 4 ಶಾಲೆ ಮತ್ತೆ ಬಂದ್

ಕೋವಿಡ್ ಎಫೆಕ್ಟ್:ಆಂಧ್ರಪ್ರದೇಶದಲ್ಲಿ 27 ವಿದ್ಯಾರ್ಥಿಗಳಿಗೆ ಸೋಂಕು ದೃಢ, 4 ಶಾಲೆ ಮತ್ತೆ ಬಂದ್

ಸಿಎಂ ವಿರುದ್ಧ ಹೇಳಿಕೆ : ಯತ್ನಾಳರನ್ನ ಪಕ್ಷದಿಂದ ಹೊರಹಾಕುವಂತೆ ಪ್ರಾರ್ಥಿಸುವೆ : ಈಶ್ವರಪ್ಪ

ಸಿಎಂ ವಿರುದ್ಧ ಹೇಳಿಕೆ : ಯತ್ನಾಳರನ್ನ ಪಕ್ಷದಿಂದ ಹೊರಹಾಕುವಂತೆ ಪ್ರಾರ್ಥಿಸುವೆ : ಈಶ್ವರಪ್ಪ

ಪುತ್ರ ವ್ಯಾಮೋಹ ಬಿಟ್ಟು ಪ್ರವಾಹ ಸಂತ್ರಸ್ತರಿಗೆ ನೇರವಾಗಿ! ಸಿಎಂ ವಿರುದ್ಧ ಸಿಡಿದ ಯತ್ನಾಳ್

ಪುತ್ರ ವ್ಯಾಮೋಹ ಬಿಟ್ಟು ಪ್ರವಾಹ ಸಂತ್ರಸ್ತರಿಗೆ ನೆರವಾಗಿ! ಸಿಎಂ ವಿರುದ್ಧ ಸಿಡಿದ ಯತ್ನಾಳ್

ಮಹಾರಾಷ್ಟ್ರದಲ್ಲಿ ಬಿಜೆಪಿಗೆ ಭಾರೀ ಹಿನ್ನಡೆ: ಏಕ್ ನಾಥ್ ಬಿಜೆಪಿಗೆ ಗುಡ್ ಬೈ, NCPಗೆ ಸೇರ್ಪಡೆ

ಮಹಾರಾಷ್ಟ್ರದಲ್ಲಿ ಬಿಜೆಪಿಗೆ ಭಾರೀ ಹಿನ್ನಡೆ: ಏಕ್ ನಾಥ್ ಬಿಜೆಪಿಗೆ ಗುಡ್ ಬೈ, NCPಗೆ ಸೇರ್ಪಡೆ

ಕಲಬುರ್ಗಿ ವಿಮಾನ ನಿಲ್ದಾಣ ಮುಂದೆ ಬಿಜೆಪಿ ಎಂಎಲ್ಸಿ – ಪೊಲೀಸರ ನಡುವೆ ಚಕಮಕಿ

ಕಲಬುರ್ಗಿ ವಿಮಾನ ನಿಲ್ದಾಣದ ಮುಂದೆ ಬಿಜೆಪಿ ಎಂಎಲ್ ಸಿ – ಪೊಲೀಸರ ನಡುವೆ ಮಾತಿನ ಚಕಮಕಿ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

cinema-tdy-3

ಚಿರು ಮಗುವಿಗಾಗಿ ಬೆಳ್ಳಿತೊಟ್ಟಿಲು ಖರೀದಿಸಿದ ಧ್ರುವ ಸರ್ಜಾ

ನಾನು ಹೀರೋ ಆಗ್ತಿರೋದಕ್ಕೆ ಎಲ್ಲ ಸ್ಟಾರ್ ಖುಷಿಯಾಗಿದ್ದಾರೆ…

ನಾನು ಹೀರೋ ಆಗ್ತಿರೋದಕ್ಕೆ ಎಲ್ಲ ಸ್ಟಾರ್ ಖುಷಿಯಾಗಿದ್ದಾರೆ…

cinema-tdy-1

ರಾಬರ್ಟ್‌ ಬಿಡುಗಡೆಗೆ ಆತುರವಿಲ್ಲ

ಸ್ಯಾಂಡಲ್‌ವುಡ್‌ ಡ್ರಗ್ಸ್‌ ಪ್ರಕರಣ: ಬಿಗ್‌ಬಾಸ್‌ ಸ್ಪರ್ಧಿ ಆದಂ ಪಾಷಾ ಬಂಧನ

ಸ್ಯಾಂಡಲ್‌ವುಡ್‌ ಡ್ರಗ್ಸ್‌ ಪ್ರಕರಣ: ಬಿಗ್‌ಬಾಸ್‌ ಸ್ಪರ್ಧಿ ಆದಂ ಪಾಷಾ ಬಂಧನ

cinema-tdy

ಬ್ರೇಕ್‌ ಕೆ ಬಾದ್‌… 50 ದಿನದ ಸಂತಸ

MUST WATCH

udayavani youtube

ಮಂಗಳೂರು: ಡ್ರಗ್ಸ್ ಜಾಗೃತಿ ಬರಹದಿಂದ ಗಮನಸೆಳೆಯುತ್ತಿದೆ ಸಿಟಿ ಬಸ್

udayavani youtube

ನವರಾತ್ರಿ – Navratri ಹಬ್ಬದ ವೈಶಿಷ್ಟ್ಯವೇನು? | Udayavani

udayavani youtube

Mudipu‌ illegal quarrying allegations ವಿಚಾರ; ನನಗೆ ಯಾವುದೇ ಸಂಬಂದ ಇಲ್ಲ:Rajesh Naik

udayavani youtube

ಹಡಿಲು ಗದ್ದೆಯಲ್ಲಿ ಭತ್ತ ಬೆಳೆದು ಯಶಸ್ವಿಯಾದ ಕೃಷಿ !

udayavani youtube

ಕೃಷಿಯಲ್ಲಿ ಲಾಭಗಳಿಸಬೇಕಾದರೆ ಸಮಗ್ರ ಕೃಷಿ ಪದ್ಧತಿಯನ್ನು ಪಾಲಿಸಿ | Udayavaniಹೊಸ ಸೇರ್ಪಡೆ

ಕೆಐಡಿಬಿ ಸಹಾಯಕ ಕಾರ್ಯದರ್ಶಿ ಮನೆ, ಕಚೇರಿ ಮೇಲೆ ಎಸಿಬಿ ದಾಳಿ

ಕೆಐಡಿಬಿ ಸಹಾಯಕ ಕಾರ್ಯದರ್ಶಿ ಮನೆ, ಕಚೇರಿ ಮೇಲೆ ಎಸಿಬಿ ದಾಳಿ

tk-tdy-1

ನೆಮ್ಮದಿ ಬದುಕಿಗೆ ನರೇಗಾ ಯೋಜನೆ ಸಹಕಾರಿ

Good News:ಕೇಂದ್ರ ಸರ್ಕಾರಿ ನೌಕರರಿಗೆ ಬೋನಸ್ ಘೋಷಣೆ, 30 ಲಕ್ಷ ಉದ್ಯೋಗಿಗಳಿಗೆ ದಸರಾ ಗಿಫ್ಟ್

Good News:ಕೇಂದ್ರ ಸರ್ಕಾರಿ ನೌಕರರಿಗೆ ಬೋನಸ್ ಘೋಷಣೆ, 30 ಲಕ್ಷ ಉದ್ಯೋಗಿಗಳಿಗೆ ದಸರಾ ಗಿಫ್ಟ್

hasan-tdy-2

ಅಂಗನವಾಡಿ ಕಾರ್ಯಕರ್ತೆಯರ ಸೇವೆ ಕಾಯಂ ಮಾಡಿ

ಯತ್ನಾಳ್ ಅವರ ಅನಿಸಿಕೆ ಬಿಜೆಪಿಯ ಅನಿಸಿಕೆಯಲ್ಲ: ಸಿಎಂ ಬದಲಾವಣೆಯಿಲ್ಲ: ಎಚ್.ವಿಶ್ವನಾಥ್

ಯತ್ನಾಳ್ ಅವರ ಅನಿಸಿಕೆ ಬಿಜೆಪಿಯ ಅನಿಸಿಕೆಯಲ್ಲ: ಸಿಎಂ ಬದಲಾವಣೆಯಿಲ್ಲ: ಎಚ್.ವಿಶ್ವನಾಥ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.