ಲಾಕ್‌ಡೌನ್‌ ಗ್ಯಾಪ್‌ನಲ್ಲಿ ಗುರುಪ್ರಸಾದ್‌ ಹೊಸ ಚಿತ್ರಕ್ಕೆ ಸಿದ್ಧತೆ


Team Udayavani, Apr 15, 2020, 9:48 AM IST

ಲಾಕ್‌ಡೌನ್‌ ಗ್ಯಾಪ್‌ನಲ್ಲಿ ಗುರುಪ್ರಸಾದ್‌ ಹೊಸ ಚಿತ್ರಕ್ಕೆ ಸಿದ್ಧತೆ

ಮಠ, ಎದ್ದೇಳು ಮಂಜನಾಥ, ಡೈರೆಕ್ಟರ್‌ ಸ್ಪೆಷಲ್‌, ಎರಡನೇ ಸಲ ಚಿತ್ರಗಳನ್ನು ನಿರ್ದೇಶಿಸಿರುವ ನಿರ್ದೇಶಕ ಗುರುಪ್ರಸಾದ್‌ ಸದ್ಯ ಕೋವಿಡ್ 19 ಲಾಕ್‌ ಡೌನ್‌ ಮಧ್ಯೆಯೇ ಕಾಮಿಡಿ ಕಥಾಹಂದರದ ಕಥೆಯೊಂದನ್ನು ತೆರೆಗೆ ತರುವ ಪ್ಲಾನ್‌ ನಲ್ಲಿದ್ದಾರೆ.

ಹೌದು, ಸದ್ಯ ಹೊರಗಡೆ ಎಲ್ಲೂ ಹೋಗದಂತ ಪರಿಸ್ಥಿತಿ ಇರುವುದರಿಂದ, ಇಂಥ ಸಂದರ್ಭದಲ್ಲಿ ಸಂಪೂರ್ಣ ಇನ್‌ ಡೋರ್‌ನಲ್ಲಿಯೇ, ಸಾಮಾಜಿಕ ಅಂತರ ಕಾಪಾಡಿಕೊಂಡು ಅತಿ ಕಡಿಮೆ ಕಲಾವಿದರು, ತಂತ್ರಜ್ಞರನ್ನು ಬಳಸಿಕೊಂಡು ಚಿತ್ರೀಕರಣ ಆರಂಭಿಸುವ ಯೋಚನೆಯಲ್ಲಿದ್ದಾರಂತೆ ಗುರುಪ್ರಸಾದ್‌.

ಈಗಾಗಲೇ ಕಥೆಯೊಂದನ್ನು ಪೂರ್ಣಗೊಳಿಸಿದ್ದು, ಚಿತ್ರದ ಬಗ್ಗೆ ನಿರ್ಮಾಪಕರೊಂದಿಗೆ ಒಪ್ಪಂದ ಬಾಕಿಯಿದೆಯಂತೆ. ಅಂದಹಾಗೆ, ಗುರುಪ್ರಸಾದ್‌ ಈ ಚಿತ್ರವನ್ನು ತಮ್ಮ ಅಧಿಕೃತ ಆಪ್‌ನಲ್ಲಿ ಬಿಡುಗಡೆ ಮಾಡಲಿದ್ದು, ಈ ಇದರ ವಿನ್ಯಾಸ ಕಾರ್ಯ ಪ್ರಗತಿಯಲ್ಲಿದೆ ಎಂದು ಮಾಹಿತಿ ಕೊಡುತ್ತಾರೆ.

ಒಟ್ಟಾರೆ ಲಾಕ್‌ ಡೌನ್‌ ಮಧ್ಯೆ ಕಾಮಿಡಿ ಚಿತ್ರವೊಂದರ ತಯಾರಿಕೆಯಲ್ಲಿ ನಿರ್ದೇಶಕ ಗುರುಪ್ರಸಾದ್‌ ತೊಡಗಿಸಿಕೊಂಡಿರುವುದು ಸಿನಿಪ್ರಿಯರಲ್ಲಿ ಒಂದಷ್ಟು ಕುತೂಹಲ ಮೂಡಿಸಿದ್ದು, ಚಿತ್ರ ಹೇಗಿರಲಿದೆ ಅನ್ನೊ ಕುತೂಹಲಕ್ಕೆ ಚಿತ್ರ ಬಿಡುಗಡೆಯಾದ ಮೇಲಷ್ಟೇ ಉತ್ತರ ಸಿಗಲಿದೆ.

ಈ ಬಗ್ಗೆ ಮಾತನಾಡುವ ಗುರುಪ್ರಸಾದ್‌, ಒಬ್ಬ ರಂಜಕನಾಗಿ ಯಾವುದೇ ಕಲಾವಿದರ ಅಗತ್ಯವಿಲ್ಲ, ನಾನೇ ಎಲ್ಲರನ್ನು ನಗಿಸುತ್ತೇನೆ. ಪ್ರತಿದಿನ ಫೇಸ್‌ ಬುಕ್‌ ಲೈವ್‌ ಮೂಲಕ ಜನರನ್ನು ತಲುಪುತ್ತಿದ್ದೇನೆ. ಪರಿಸ್ಥಿತಿ ಸುಧಾರಿಸಿದರೆ ನಟ ಜಗ್ಗೇಶ್‌ ಅವರೊಂದಿಗೆ ರಂಗನಾಯಕ ಚಿತ್ರವನ್ನು ಮುಂದುವರೆಸುತ್ತೇನೆ. ಆದರೆ ಅಲ್ಲಿಯವರೆಗೆ ಲಾಕ್‌ ಡೌನ್‌ ಅವಧಿಯಲ್ಲಿ ಒಂದು ಸಿನಿಮಾ ಮಾಡಬಹು ಅನ್ನೊದನ್ನ ಸಾಬೀತುಪಡಿಸುವ ಪ್ರಯತ್ನ ಮಾಡುತ್ತಿದ್ದೇನೆ. ಇದು ಅಪರೂಪದ ಪ್ರಯೋಗವಾಗಿದೆ ಎಂದು ಹೇಳುತ್ತಾರೆ.

ಚಿತ್ರದ ಕಥೆಯನ್ನು ಬಗ್ಗೆ ಗುಟ್ಟು ಬಿಟ್ಟುಕೊಡಲು ನಿರಾಕರಿಸಿರುವ ಗುರುಪ್ರಸಾದ್‌, ಇದು ಎರಡೂವರೆ ಗಂಟೆಗಳ ಹಾಸ್ಯದ ರಣದೌತಣ ಉಣಬಡಿಸಲಿದೆ. ಸೀಮಿತ ಬಜೆಟ್‌ ನಲ್ಲಿ ಚಿತ್ರವನ್ನು ತಯಾರಿಸಲಿದ್ದು, ಬಿಡುಗಡೆಯ ತಂತ್ರಗಳು ಕುತೂಹಲಕವಾಗಿರಲಿವೆ. ವೀಕ್ಷಕರು 100 ರೂ. ಪಾವತಿಸುವ ಮೂಲಕ ಆಪ್‌ ನಲ್ಲಿ ಸಿನಿಮಾವನ್ನು ವೀಕ್ಷಿಸಬಹುದಾಗಿದೆ ಎಂದು ತಿಳಿಸುತ್ತಾರೆ.

ಟಾಪ್ ನ್ಯೂಸ್

2-hunsur

Hunsur: ನಾಗರಹೊಳೆಯಲ್ಲಿ ದುಷ್ಕರ್ಮಿಗಳ ಗುಂಡೇಟಿಗೆ ಕಾಡುಕೋಣ ಬಲಿ

1-24-friday

Daily Horoscope: ಉದ್ಯೋಗದಲ್ಲಿ ಪ್ರತಿಭೆಗೆ ಗೌರವ, ದೇವತಾರಾಧನೆಯ ಮೂಲಕ ವಿಘ್ನ ನಿವಾರಣೆ

1-wewqwq

Loksabha Election; ದೇಶದಲ್ಲಿ ಹಂತ-1: ಮತ ಇಂದು

musk

Tesla; ಭಾರತದಲ್ಲಿ ಎಲಾನ್‌ ಮಸ್ಕ್ 25,000 ಕೋಟಿ ಹೂಡಿಕೆ?

voter

EVM ಯಾವ ಗುಂಡಿ ಒತ್ತಿದರೂ ಬಿಜೆಪಿಗೆ ಮತ: ಭಾರೀ ಚರ್ಚೆ

LSG vs CSK: ಲಕ್ನೋದಲ್ಲೂ ಚೆನ್ನೈ  ಫೇವರಿಟ್‌

LSG vs CSK: ಲಕ್ನೋದಲ್ಲೂ ಚೆನ್ನೈ  ಫೇವರಿಟ್‌

1-qwewqeqwe

Cerelac ಶಿಶು ಆಹಾರದಲ್ಲಿ ಹೆಚ್ಚುವರಿ ಸಕ್ಕರೆ ಬೆರೆತಿದೆ: ಗಂಭೀರ ಆರೋಪ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಸೂಪರ್ ಸ್ಟಾರ್‌ ಮೋಹನ್‌ ಲಾಲ್‌ ಭೇಟಿಯಾದ ರಿಷಬ್‌: ʼಕಾಂತಾರʼ ಕ್ಕೆ ಸ್ವಾಗತ ಎಂದ ನೆಟ್ಟಿಗರು.!

ಸೂಪರ್ ಸ್ಟಾರ್‌ ಮೋಹನ್‌ ಲಾಲ್‌ ಭೇಟಿಯಾದ ರಿಷಬ್‌: ʼಕಾಂತಾರʼ ಕ್ಕೆ ಸ್ವಾಗತ ಎಂದ ನೆಟ್ಟಿಗರು.!

Actor Dwarakish: ಸಕಲ ಗೌರವಗಳೊಂದಿಗೆ ನಟ ದ್ವಾರಕೀಶ್‌ ಅಂತ್ಯಕ್ರಿಯೆ

Actor Dwarakish: ಸಕಲ ಗೌರವಗಳೊಂದಿಗೆ ನಟ ದ್ವಾರಕೀಶ್‌ ಅಂತ್ಯಕ್ರಿಯೆ

choo mantar kannada movie

Sharan; ಮೇ 10ಕ್ಕೆ ‘ಛೂ ಮಂತರ್‌’ ತೆರೆಗೆ ಸಿದ್ಧ

aditya;s kangaroo movie

Aditya; ಟ್ರೇಲರ್ ನಲ್ಲಿ ‘ಕಾಂಗರೂ’ ದರ್ಶನ; ಮೇ.3ರಂದು ತೆರೆಗೆ

Dwarakish: ಕನ್ನಡದ ಹಿರಿಯ ನಟ, ನಿರ್ಮಾಪಕ ದ್ವಾರಕೀಶ್‌ ವಿಧಿವಶ

Dwarakish: ಕನ್ನಡದ ಹಿರಿಯ ನಟ, ನಿರ್ಮಾಪಕ ದ್ವಾರಕೀಶ್‌ ವಿಧಿವಶ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

2-hunsur

Hunsur: ನಾಗರಹೊಳೆಯಲ್ಲಿ ದುಷ್ಕರ್ಮಿಗಳ ಗುಂಡೇಟಿಗೆ ಕಾಡುಕೋಣ ಬಲಿ

1-24-friday

Daily Horoscope: ಉದ್ಯೋಗದಲ್ಲಿ ಪ್ರತಿಭೆಗೆ ಗೌರವ, ದೇವತಾರಾಧನೆಯ ಮೂಲಕ ವಿಘ್ನ ನಿವಾರಣೆ

Srirangapatna: ಐಸ್‌ ಕ್ರೀಂನಲ್ಲಿ ವಿಷ ಬೆರೆಸಿ ಮಕ್ಕಳ ಕೊಂದ ತಾಯಿ

Srirangapatna: ಐಸ್‌ ಕ್ರೀಂನಲ್ಲಿ ವಿಷ ಬೆರೆಸಿ ಮಕ್ಕಳ ಕೊಂದ ತಾಯಿ

1-wewqwq

Loksabha Election; ದೇಶದಲ್ಲಿ ಹಂತ-1: ಮತ ಇಂದು

Ls Polls: ಕಾಂಗ್ರೆಸ್‌ ಗೆಲ್ಲಿಸದಿದ್ದರೆ ಸಿದ್ದು ಸ್ಥಾನಕ್ಕೆ ಕಂಟಕ; ಸಚಿವ ಬೈರತಿ ಸುರೇಶ್‌

Ls Polls: ಕಾಂಗ್ರೆಸ್‌ ಗೆಲ್ಲಿಸದಿದ್ದರೆ ಸಿದ್ದು ಸ್ಥಾನಕ್ಕೆ ಕಂಟಕ; ಸಚಿವ ಬೈರತಿ ಸುರೇಶ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.