ಉಪೇಂದ್ರ ಚಿತ್ರಕ್ಕೆ ಹರಿಪ್ರಿಯಾ ನಾಯಕಿ: ಶಶಾಂಕ್ ನಿರ್ದೇಶನದ ಹೊಸ ಚಿತ್ರ
Team Udayavani, Mar 20, 2021, 8:12 AM IST
ನಟಿ ಹರಿಪ್ರಿಯಾ ಅಕೌಂಟ್ಗೆ ಮತ್ತೂಂದು ಸಿನಿಮಾ ಸೇರ್ಪಡೆಯಾಗಿದೆ. ಅದು ಉಪೇಂದ್ರ ನಟನೆಯ ಸಿನಿಮಾ. ಹೌದು, ಉಪೇಂದ್ರ ಹಾಗೂ ನಿರ್ದೇಶಕ ಶಶಾಂಕ್ ಕಾಂಬಿನೇಶನ್ನಲ್ಲಿ ಸಿನಿಮಾವೊಂದು ಬರಲಿರುವ ವಿಚಾರ ನಿಮಗೆ ಗೊತ್ತೇ ಇದೆ. ಈಗ ಈ ಚಿತ್ರಕ್ಕೆ ನಾಯಕಿಯಾಗಿ ಹರಿಪ್ರಿಯಾ ಆಯ್ಕೆಯಾಗಿದ್ದಾರೆ.
ಈ ಕುರಿತು ಮಾತನಾಡುವ ಹರಿಪ್ರಿಯಾ, “ಉಪೇಂದ್ರ ಹಾಗೂ ಶಶಾಂಕ್ ಅವರ ಸಿನಿಮಾದಲ್ಲಿ ಕೆಲಸ ಮಾಡುವ ಅವಕಾಶ ಈಗ ಸಿಕ್ಕಿದೆ. ತುಂಬಾ ಸ್ಟ್ರಾಂಗ್ ಆಗಿರುವ ಪಾತ್ರ. ಶಶಾಂಕ್ ಅವರ ಚಿತ್ರಗಳಲ್ಲಿ ನಾಯಕಿಯರಿಗೆ ಹೆಚ್ಚಿನ ಪ್ರಾಮುಖ್ಯತೆ ಇರುತ್ತದೆ. ಇಲ್ಲೂ ನನ್ನ ಪಾತ್ರ ತುಂಬಾ ಚೆನ್ನಾಗಿದೆ. ಈ ಪ್ರಾಜೆಕ್ಟ್ ಬಗ್ಗೆ ನಾನು ಎಕ್ಸೆ„ಟ್ ಆಗಿದ್ದೇನೆ’ ಎನ್ನುವುದು ಹರಿಪ್ರಿಯಾ ಮಾತು.
ಸದ್ಯ ಹರಿಪ್ರಿಯಾ ಕೈಯಲ್ಲಿ ಒಂದಷ್ಟು ಚಿತ್ರಗಳಿವೆ. ಅವರು ನಟಿಸಿರುವ “ಪೆಟ್ರೋಮ್ಯಾಕ್ಸ್’ ಬಿಡುಗಡೆಯ ಹಂತಕ್ಕೆ ಬಂದಿದೆ. ಇದರ ಜೊತೆಗೆ ಗುರುನಂದನ್ ನಾಯಕರಾಗಿರುವ “ಹ್ಯಾಪಿ ಎಂಡಿಂಗ್’ ಕೂಡಾ ರೆಡಿ ಇದೆ. ದಿಗಂತ್ ನಾಯಕರಾಗಿರುವ “ಎವರು’ ರೀಮೇಕ್ ನಲ್ಲೂ ಹರಿಪ್ರಿಯಾ ನಾಯಕಿ. ಹೀಗೆ ಈ ವರ್ಷ ಹರಿಪ್ರಿಯಾ ಸಿಕ್ಕಾಪಟ್ಟೆ ಬಿಝಿ.