ಲಂಡನ್‌ನಲ್ಲೇ ಹ್ಯಾಟ್ರಿಕ್‌ ಹೀರೋ 57ನೇ ಬರ್ತ್‌ಡೇ

ಶಿವಣ್ಣ ಅನುಪಸ್ಥಿತಿಯಲ್ಲೇ ಫ್ಯಾನ್ಸ್‌ ಬರ್ತ್‌ಡೇ ಸೆಲೆಬ್ರೇಷನ್‌

Team Udayavani, Jul 13, 2019, 3:03 AM IST

ಶುಕ್ರವಾರ (ಜುಲೈ. 12) ನಟ ಶಿವರಾಜಕುಮಾರ್‌ 57ನೇ ವಸಂತಕ್ಕೆ ಕಾಲಿಟ್ಟರು. ಇನ್ನು ಈ ಬಾರಿಯ ಹುಟ್ಟುಹಬ್ಬದ ದಿನದಂದು ಶಿವಣ್ಣ ವಿದೇಶದಲ್ಲಿದ್ದರೂ, ಅಭಿಮಾನಿಗಳು ಎಂದಿನಂತೆ ತಮ್ಮ ನೆಚ್ಚಿನ ನಟನ ಬರ್ತ್‌ಡೇಯನ್ನು ಅದ್ಧೂರಿಯಾಗಿಯೇ ಆಚರಿಸಿದ್ದಾರೆ. ಪ್ರತಿವರ್ಷ ಅಭಿಮಾನಿಗಳ ಜೊತೆ ಸೇರಿ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದ ಶಿವಣ್ಣ ಅವರನ್ನು ನೋಡಲು ಬರ್ತ್‌ಡೇ ಹಿಂದಿನ ದಿನ ರಾತ್ರಿಯಿಂದಲೇ ಮನೆ ಮುಂದೆ ಅಭಿಮಾನಿಗಳು ಜಮಾಯಿಸುತ್ತಿದ್ದರು.

ಆದರೆ ಈ ಬಾರಿ ಶಿವಣ್ಣ ಚಿಕಿತ್ಸೆಯ ಪ್ರಯುಕ್ತ ಲಂಡನ್‌ನಲ್ಲಿದ್ದರೂ, ಅಭಿಮಾನಿಗಳು ಶಿವಣ್ಣ ಅವರ ಅನುಪಸ್ಥಿತಿಯಲ್ಲೇ ಅವರ ಹುಟ್ಟುಹಬ್ಬವನ್ನು ಆಚರಿಸಿದ್ದಾರೆ. ಆಸ್ಪತ್ರೆಗಳಿಗೆ ತೆರಳಿ ಹಣ್ಣು ವಿತರಿಸಿದರು. ಬರ್ತ್‌ಡೇ ಪ್ರಯುಕ್ತ ಶಿವಣ್ಣ ಅಭಿನಯದ ಚಿತ್ರಗಳ ಒಂದಿಷ್ಟು ಇಂಟೆಸ್ಟಿಂಗ್‌ ಪೋಸ್ಟರ್ ರಿಲೀಸ್‌ ಆಗಿವೆ.

ಇದರ ಜೊತೆಗೆ ಅಭಿಮಾನಿಗಳು ಶಿವಣ್ಣ ಬಗ್ಗೆ ಬರೆದಿರುವ ವಿಶೇಷವಾದ ಹಾಡೊಂದನ್ನು ಮಾಡಿ ರಿಲೀಸ್‌ ಮಾಡಿ ಬರ್ತ್‌ಡೇಗೆ ಗಿಫ್ಟ್ ಆಗಿ ನೀಡಿದ್ದಾರೆ. ಇನ್ನು ಚಿತ್ರರಂಗದಿಂದಲೂ ಶಿವರಾಜಕುಮಾರ್‌ ಬರ್ತ್‌ಡೇಗೆ ಶುಭಾಶಯಗಳ ಮಹಾಪೂರವೆ ಹರಿದು ಬಂದಿದೆ. ಕನ್ನಡ ಚಿತ್ರರಂಗದ ಅನೇಕ ಕಲಾವಿದರು, ತಂತ್ರಜ್ಞರು, ನಿರ್ಮಾಪಕರು, ನಿರ್ದೇಶಕರು ಶಿವಣ್ಣ ಅವರ ಜನ್ಮದಿನಕ್ಕೆ ಶುಭ ಕೋರಿದ್ದಾರೆ.

ಸೋಶಿಯಲ್‌ ಮೀಡಿಯಾದಲ್ಲಿ ಅಭಿಮಾನಿಗಳಿಗೆ ದರ್ಶನ: ಇನ್ನು ಈ ಬಾರಿ ಬರ್ತ್‌ಡೇಗೆ ಶಿವಣ್ಣ ಅವರ ಅನುಪಸ್ಥಿತಿಯ ಬೇಸರ ಅಭಿಮಾನಿಗಳಲ್ಲಿದ್ದರೂ, ಶಿವಣ್ಣ ಲಂಡನ್‌ನಿಂದಲೇ ಫೇಸ್‌ಬುಕ್‌ ಲೈವ್‌ ಮೂಲಕ ಅಭಿಮಾನಿಗಳ ಜೊತೆ ಮಾತನಾಡಿದ್ದಾರೆ. ಲಂಡನ್‌ ನಿಂದ ಫೇಸ್‌ ಬುಕ್‌ ಲೈವ್‌ ಮೂಲಕ ಮಾತನಾಡಿರುವ ಶಿವಣ್ಣ “ಅಭಿಮಾನಿಗಳು ಎಷ್ಟು ಮಿಸ್‌ ಮಾಡಿಕೊಳ್ಳುತ್ತಿದ್ದೀರೊ ನಾನು ಕೂಡ ಅಭಿಮಾನಿಗಳನ್ನು ಅಷ್ಟೆ ಮಿಸ್‌ ಮಾಡಿಕೊಳ್ಳುತ್ತಿದ್ದೀನಿ.

ಅಲ್ಲದೆ ನಿಮ್ಮ ಈ ಪ್ರೀತಿ, ವಿಶ್ವಾಸಕ್ಕೆ ಬೆಲೆ ಕಟ್ಟಲು ಸಾಧ್ಯವಿಲ್ಲ. ಬೇಗ ಗುಣಮುಖರಾಗಲಿ ಎಂದು ಪೂಜೆ ಮಾಡಿದ್ದೀರಾ ಇದಕ್ಕೆ ಎಷ್ಟೇ ಧನ್ಯವಾದ ಹೇಳಿದ್ರು ಸಾಲದು ಎಂದು ಹೇಳಿದ್ದಾರೆ. ಲಂಡನ್‌ ನಿಂದ ಬಂದ ಬಳಿಕ ಎಲ್ಲರನ್ನು ಭೇಟಿಯಾಗುವೆೆ’ ಎಂದು ಹೇಳುವ ಮೂಲಕ ಅಭಿಮಾನಿಗಳಿಗೆ ಸಿಹಿಸುದ್ದಿ ನೀಡಿದ್ದಾರೆ ಎಂದು ಹೇಳಿದ್ದಾರೆ.

ಲಂಡನ್‌ನಲ್ಲೇ ಬರ್ತ್‌ಡೇ: ಎರಡು ದಿನಗಳ ಹಿಂದಷ್ಟೇ ಲಂಡನ್‌ನಲ್ಲಿ ಶಿವಣ್ಣಗೆ ಯಶಸ್ವಿಯಾಗಿ ಶಸ್ತ್ರ ಚಿಕಿತ್ಸೆ ನಡೆಸಲಾಗಿದೆ. ಸದ್ಯ ಸರ್ಜರಿ ಮಾಡಿಸಿಕೊಂಡು ಇನ್ನು ಹತ್ತು ದಿನಗಳ ಕಾಲ ಲಂಡನ್‌ನಲ್ಲಿ ವಿಶ್ರಾಂತಿ ಪಡೆಯಲಿರುವ ಶಿವಣ್ಣ, ವಿಶ್ರಾಂತಿಯ ನಡುವೆಯೇ ಲಂಡನ್‌ನಲ್ಲಿ ತಮ್ಮ ಕುಟುಂಬ ಸದಸ್ಯರು ಮತ್ತು ಸ್ನೇಹಿತರ ಜೊತೆ ಸರಳವಾಗಿ ಹುಟ್ಟುಹಬ್ಬವನ್ನು ಆಚರಿಸಿಕೊಂಡರು.

ಕೈಗೆ ಬ್ಯಾಂಡೇಜ್‌ ಹಾಕಿಕೊಂಡಿದ್ದರೂ, ಅದನ್ನು ಬಿಚ್ಚಿಟ್ಟು ಬಲಗೈಯಲ್ಲೆ ಕೇಕ್‌ ಕತ್ತರಿಸಿದರು. ಈ ವೇಳೆ ಪತ್ನಿ ಗೀತಾ, ಮಗಳು ನಿವೇದಿತಾ ಮತ್ತು ಪವರ್‌ಸ್ಟಾರ್‌ ಪುನೀತ್‌ ರಾಜಕುಮಾರ್‌ ಸೇರಿದಂತೆ ಕೆಲ ಆಪ್ತರು ಶಿವಣ್ಣಗೆ ಸಾಥ್‌ ನೀಡಿದರು.

ಬರ್ತ್‌ಡೇಗಾಗಿ ಅಭಿಮಾನಿಗಳ ಸ್ಪೆಷಲ್‌ ಸಾಂಗ್‌: ಇನ್ನು ತಮ್ಮ ನೆಚ್ಚಿನ ಬರ್ತ್‌ಡೇಗಾಗಿ ಅಭಿಮಾನಿಗಳು ಶಿವಣ್ಣ ಅವರ ಬಗ್ಗೆ ಸ್ಪೆಷಲ್‌ ಹಾಡೊಂದನ್ನು ಬಿಡುಗಡೆ ಮಾಡಿದ್ದಾರೆ. ಆಥಮ್‌ ಸಾಂಗ್‌ ಎನ್ನುವ ಹೆಸರಿನಲ್ಲಿ ಈ ಹಾಡನ್ನು ಪಿಆರ್‌ಕೆ ಯು ಟ್ಯೂಬ್‌ ಚಾನೆಲ್‌ ನಲ್ಲಿ ರಿಲೀಸ್‌ ಮಾಡಲಾಗದೆ.

“ಕರುನಾಡ ಮನೆ ಮಗನು, ಕರುಣೆಯಲಿ ರಾಜನ ಮಗನು…’ ಎನ್ನುವ ಸಾಲುಗಳಿಂದ ಪ್ರಾರಂಭವಾಗುವ ಈ ಹಾಡಿಗೆ ಚೇತನ್‌ ಕೃಷ್ಣ ಧ್ವನಿಯಾಗಿದ್ದು, ಪ್ರಮೋದ್‌ ಜೋಯಿಸ್‌ ಸಾಹಿತ್ಯ ಬರೆದಿದ್ದಾರೆ. ಶಿವಣ್ಣ ಕೂಡ ಈ ಹಾಡನ್ನು ಕೇಳಿ ಇಷ್ಟಪಟ್ಟಿದ್ದು, ಸೋಶಿಯಲ್‌ ಮೀಡಿಯಾಗಳಲ್ಲೂ ಈ ಹಾಡು ಉತ್ತಮ ಪ್ರತಿಕ್ರಿಯೆ ಕೂಡ ಪಡೆದುಕೊಳ್ಳುತ್ತಿದೆ.

ಹೊಸ ಚಿತ್ರಗಳ ಟೈಟಲ್‌, ಪೋಸ್ಟರ್‌ ರಿಲೀಸ್‌: ಇನ್ನು ಶಿವಣ್ಣ ಹುಟ್ಟುಹಬ್ಬದ ಪ್ರಯುಕ್ತ ಸಾಕಷ್ಟು ಚಿತ್ರಗಳ ಟೈಟಲ್‌ ಮತ್ತು ಪೋಸ್ಟರ್ ಬಿಡುಗಡೆಯಾಗಿವೆ. “ಭಜರಂಗಿ-2′, “ಆಯೂಷ್ಮಾನ್‌ ಭವ’ ಸೇರಿದಂತೆ ಕೆಲ ಚಿತ್ರಗಳ ಪೋಸ್ಟರ್ ಮತ್ತು ಟೈಟಲ್‌ ಅನೌನ್ಸ್‌ ಆಗಿವೆ. ಪಿ. ವಾಸು ನಿರ್ದೇಶನದ ಶಿವರಾಜ್‌ ಕುಮಾರ್‌ ನಟನೆಯ ಹೊಸ ಚಿತ್ರಕ್ಕೆ “ಆಯುಷ್ಮಾನ್‌ ಭವ’ ಎನ್ನುವ ಟೈಟಲ್‌ ಇಡಲಾಗಿದೆ.

ಸರಳ ಪೋಸ್ಟರ್‌ ಮೂಲಕ ಶೀರ್ಷಿಕೆಯನ್ನು ತಿಳಿಸಲಾಗಿದೆ. ಈ ಹಿಂದೆ ಸಿನಿಮಾಗೆ “ಆನಂದ್‌’ ಎಂಬ ಹೆಸರು ನಿಗದಿಯಾಗಿದೆ ಎನ್ನುವ ಸುದ್ದಿ ಇತ್ತು. ಆದರೆ, “ಆಯುಷ್ಮಾನ್‌ ಭವ’ ಟೈಟಲ್‌ ಅಂತಿಮವಾಗಿದೆ. ಈ ಹಿಂದೆ “ಶಿವಲಿಂಗ’ ಚಿತ್ರ ನಿರ್ದೇಶಿಸಿದ್ದ ಪಿ. ವಾಸು ಈ ಚಿತ್ರಕ್ಕೆ ಆ್ಯಕ್ಷನ್‌-ಕಟ್‌ ಹೇಳುತ್ತಿದ್ದಾರೆ. ದ್ವಾರಕೀಶ್‌ ನಿರ್ಮಾಣದಲ್ಲಿ ಮೂಡಿ ಬರುತ್ತಿರುವ ಈ ಚಿತ್ರಕ್ಕೆ ಗುರುಕಿರಣ್‌ ಚಿತ್ರಕ್ಕೆ ಸಂಗೀತ ನೀಡಲಿದ್ದಾರೆ.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ