ಹೊರಬಂತು ‘ಹೀರೋ’ ಮೊದಲ ಹಾಡು
Team Udayavani, Feb 24, 2021, 8:38 AM IST
ರಿಷಭ್ ಶೆಟ್ಟಿ ಅಭಿನಯದ “ಹೀರೋ’ ಚಿತ್ರ ಇದೇ ಮಾರ್ಚ್ 5ರಂದು ತೆರೆಗೆ ಬರುತ್ತಿದೆ. ಇದರ ನಡುವೆಯೇ ಚಿತ್ರದ ಪ್ರಚಾರ ಕಾರ್ಯಗಳಿಗೆ ಚಾಲನೆ ನೀಡಿರುವ ಚಿತ್ರತಂಡ, ಸದ್ಯ “ಹೀರೋ’ನನ್ನು ಪ್ರೇಕ್ಷಕರಿಗೆ ತಲುಪಿಸುವ ಕೊನೆ ಹಂತದ ಕಸರತ್ತಿನಲ್ಲಿ ನಿರತವಾಗಿದೆ. ಇದೀಗ ಪ್ರಚಾರದ ಭಾಗವಾಗಿ “ಹೀರೋ’ ಚಿತ್ರದ ಮೊದಲ ಹಾಡು ಬಿಡುಗಡೆಯಾಗಿದೆ. “ನೆನಪಿನ ಹುಡುಗಿಯೇ…’ ಎಂಬ ಈ ಲಿರಿಕಲ್ ವಿಡಿಯೋ ಹಾಡಿಗೆ ಯೋಗರಾಜ್ ಭಟ್ ಸಾಹಿತ್ಯವಿದ್ದು, ವಿಜಯ ಪ್ರಕಾಶ್ ಈ ಹಾಡಿಗೆ ಧ್ವನಿಯಾಗಿದ್ದಾರೆ. ಅಜನೀಶ್ ಲೋಕನಾಥ್ ಹಾಡಿಗೆ ಸಂಗೀತ ಸಂಯೋಜಿಸಿದ್ದಾರೆ.
ಇನ್ನು ಬಿಡುಗಡೆಯಾಗಿರುವ ಈ ಹಾಡಿಗೆ ಸೋಶಿಯಲ್ ಮೀಡಿಯಾದಲ್ಲಿ ಕೇಳುಗರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಈ ಬಗ್ಗೆ ಮಾತನಾಡುವ ಚಿತ್ರದ ನಾಯಕ ನಟ ಕಂ ನಿರ್ಮಾಪಕ ರಿಷಭ್ ಶೆಟ್ಟಿ, “ಚಿತ್ರದ ಪ್ರಮೋಶನ್ ಭಾಗವಾಗಿ ಸದ್ಯ ಮೊದಲ ಹಾಡನ್ನು ರಿಲೀಸ್ ಮಾಡಿದ್ದೇವೆ. ಈ ಹಾಡಿಗೆ ನಾವು ನಿರೀಕ್ಷಿಸಿದ್ದಕ್ಕಿಂತ ಹೆಚ್ಚಾಗಿ ಒಳ್ಳೆಯ ರೆಸ್ಪಾನ್ಸ್ ಸಿಗುತ್ತಿದೆ. ಮೊದಲ ಸಲ ಹಾಡು ಕೇಳಿದಾಗ ಓ.ಕೆ ಅನಿಸುತ್ತಿದೆ. ಅದೇ ಹಾಡನ್ನ ಎರಡು -ಮೂರು ಸಲ ಕೇಳಿದಾಗ ಅಡಿಕ್ಷನ್ ಆಗುತ್ತದೆ ಎಂದು ಹಾಡನ್ನು ಕೇಳಿದವರು ಹೇಳುತ್ತಿದ್ದಾರೆ. ಒಂದೊಳ್ಳೆ ಹಾಡನ್ನು ಕೊಟ್ಟಿರುವುದಕ್ಕೆ ಖುಷಿಯಾಗುತ್ತಿದೆ’ ಎನ್ನುತ್ತಾರೆ.
ಇದನ್ನೂ ಓದಿ:‘ಗ್ಯಾಂಗ್ ರೇಪ್’ ಬೆದರಿಕೆ ಎದುರಿಸಿದ್ದರಂತೆ ನಟಿ ಪ್ರಿಯಾಂಕಾ…!
“ಸಿನಿಮಾದ ಹಾಡಿನಲ್ಲಿ ಕಥೆ ಎಳೆ ಇರುವುದರಿಂದ ಹಾಡುಗಳನ್ನು ಮೊದಲೇ ಬಿಡುಗಡೆ ಮಾಡಬೇಕೋ, ಬೇಡವೋ ಎಂಬ ಗೊಂದಲದಲ್ಲಿದ್ದೆವು. ಕೊನೆಗೆ ಸಿನಿಮಾ ಬಿಡುಗಡೆಯ ಸಂದರ್ಭದಲ್ಲಿ ಒಂದರ ಹಿಂದೊಂದು ಹಾಡುಗಳನ್ನು ಬಿಡುಗಡೆ ಮಾಡುವ ನಿಧಾರಕ್ಕೆ ಬಂದೆವು. ಒಟ್ಟು “ಹೀರೋ’ ಸಿನಿಮಾದಲ್ಲಿ ನಾಲ್ಕು ಹಾಡುಗಳಿದ್ದು, ಈಗ ಒಂದು ಲಿರಿಕಲ್ ವಿಡಿಯೋ ಹಾಡು ರಿಲೀಸ್ ಮಾಡಿದ್ದೇವೆ. ಬಾಕಿ ಉಳಿದ ಹಾಡುಗಳನ್ನು ಒಂದರ ಹಿಂದೊಂದರಂತೆ ಬಿಡುಗಡೆ ಮಾಡುವ ಯೋಚನೆ ಇದೆ’ ಎಂದಿದ್ದಾರೆ ರಿಷಭ್ ಶೆಟ್ಟಿ.
“ರಿಷಭ್ ಶೆಟ್ಟಿ ಫಿಲಂಸ್’ ಬ್ಯಾನರ್ನಲ್ಲಿ ನಿರ್ಮಾಣವಾಗಿರುವ “ಹೀರೋ’ ಚಿತ್ರದಲ್ಲಿ ರಿಷಭ್ ಶೆಟ್ಟಿ ಅವರಿಗೆ ಗಾನವಿ ಲಕ್ಷ್ಮಣ್ ನಾಯಕಿಯಾಗಿ ಜೋಡಿಯಾಗಿದ್ದಾರೆ. ಭರತ್ ರಾಜ್ ಈ ಚಿತ್ರಕ್ಕೆ ನಿರ್ದೇಶನ ಮಾಡಿದ್ದಾರೆ. ಸದ್ಯ ಹಾಡುಗಳ ಮೂಲಕ ಸಿನಿ ಪ್ರಿಯರ ಗಮನ ಸೆಳೆಯುತ್ತಿರುವ “ಹೀರೋ’ ಹೇಗಿರಲಿದ್ದಾನೆ ಅನ್ನೋದು ಮಾರ್ಚ್ ಮೊದಲ ವಾರ ಗೊತ್ತಾಗಲಿದೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Jayaprakash Hegde “ಉತ್ತಮ ಕೆಲಸ ಮಾಡಿಸಿಕೊಳ್ಳಬೇಕಾದ ಅವಶ್ಯಕತೆ ಮತದಾರರಿಗಿದೆ’
Kundapura “ಪ್ರವಾಸೋದ್ಯಮ ಅಭಿವೃದ್ಧಿಗಾಗಿ ಗೆಲ್ಲಿಸಿ’: ಜಯಪ್ರಕಾಶ್ ಹೆಗ್ಡೆ
Malpe ಮೀನುಗಾರಿಕೆ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ: ಜೆ.ಪಿ. ಹೆಗ್ಡೆ
Subramanya ಏನೆಕಲ್ಲು: ಕಾರಿಗೆ ಗೂಡ್ಸ್ ಆಟೋ ಢಿಕ್ಕಿ
Rahul Gandhi: ಜಾತಿಗಣತಿಯನ್ನು ಯಾವ ಶಕ್ತಿಯೂ ತಡೆಯಲಾರದು: ರಾಹುಲ್ ಗಾಂಧಿ