ಹಿಂದಿ “ಬೆಲ್‌ ಬಾಟಮ್‌’

ಕನ್ನಡದ ರೀಮೇಕ್‌ ಅಲ್ಲ ಎಂದ ಅಕ್ಷಯ್‌ ಕುಮಾರ್‌

Team Udayavani, Nov 12, 2019, 6:05 AM IST

ರಿಷಭ್‌ ಶೆಟ್ಟಿ ನಾಯಕರಾಗಿ ನಟಿಸಿದ “ಬೆಲ್‌ ಬಾಟಮ್‌’ ಚಿತ್ರ ಹಿಟ್‌ಲಿಸ್ಟ್‌ ಸೇರಿದ್ದು ನಿಮಗೆ ಗೊತ್ತೇ ಇದೆ. ಇದರ ಜೊತೆಗೆ ಚಿತ್ರದ ಡಬ್ಬಿಂಗ್‌, ರೀಮೇಕ್‌ ರೈಟ್ಸ್‌ ಬೇರೆ ಬೇರೆ ಭಾಷೆಗಳಿಗೂ ಮಾರಾಟವಾಗುವ ಮೂಲಕ ಚಿತ್ರತಂಡ ಖುಷಿಯಾಗಿತ್ತು. ಇನ್ನು, ಚಿತ್ರ ಹಿಂದಿಗೂ ರೀಮೇಕ್‌ ಆಗುತ್ತಿದ್ದು, ಈ ಚಿತ್ರದಲ್ಲಿ ಅಕ್ಷಯ್‌ ಕುಮಾರ್‌ ನಟಿಸುತ್ತಾರೆಂಬ ಸುದ್ದಿ ಜೋರಾಗಿ ಹಬ್ಬಿತ್ತು. ಅದಕ್ಕೆ ಕಾರಣ ಅಕ್ಷಯ್‌ ಕುಮಾರ್‌ ಮಾಡುತ್ತಿರುವ “ಬೆಲ್‌ ಬಾಟಮ್‌’ ಚಿತ್ರ.

ಹೌದು, ಸಿನಿಮಾ ಮೇಲೆ ಸಿನಿಮಾ ಮಾಡುತ್ತಾ, ಒಂದರ ಹಿಂದೊಂದರಂತೆ ಹಿಟ್‌ ಸಿನಿಮಾಗಳನ್ನು ಕೊಡುತ್ತಿರುವ ಅಕ್ಷಯ್‌ ಕುಮಾರ್‌ “ಬೆಲ್‌ ಬಾಟಮ್‌’ ಎಂಬ ಚಿತ್ರ ಮಾಡುತ್ತಿದ್ದಾರೆ. ಇತ್ತೀಚೆಗೆ ಈ ಚಿತ್ರದ ಫ‌ಸ್ಟ್‌ಲುಕ್‌ ಪೋಸ್ಟರ್‌ ಅನ್ನು ಅಕ್ಷಯ್‌ ಕುಮಾರ್‌ ಹಂಚಿಕೊಂಡಿದ್ದರು. ಇದನ್ನು ನೋಡಿದ ಅನೇಕರು ಇದು ಕನ್ನಡ ರೀಮೇಕ್‌ ಎಂದೇ ಭಾವಿಸಿದ್ದರು. ಈಗ ಈ ಗೊಂದಲಕ್ಕೆ ಸ್ವತಃ ಅಕ್ಷಯ್‌ ಕುಮಾರ್‌ ತೆರೆ ಎಳೆದಿದ್ದಾರೆ.

ಪೋಸ್ಟರ್‌ ನೋಡಿ ಸಾಕಷ್ಟು ಮಂದಿ ಅಕ್ಷಯ್‌ ಕುಮಾರ್‌ ಕಾಮೆಂಟ್‌ ಮಾಡಿದ್ದು, ಅದರಲ್ಲೊಬ್ಬರು, “ಇದು ಕನ್ನಡ ಚಿತ್ರ ಬೆಲ್‌ ಬಾಟಮ್‌ನ ರೀಮೇಕಾ’ ಎಂದು ಪ್ರಶ್ನೆ ಮಾಡಿದ್ದಾರೆ. ಇದಕ್ಕೆ ಉತ್ತರಿಸಿದ ಅಕ್ಷಯ್‌ ಕುಮಾರ್‌, “ಇದು ಯಾವುದೇ ಚಿತ್ರದ ರೀಮೇಕ್‌ ಅಲ್ಲ. ಪಕ್ಕಾ ಸ್ವಮೇಕ್‌ ಸಿನಿಮಾ. ನೈಜ ಘಟನೆಯನ್ನಾಧರಿಸಿದ ಸಿನಿಮಾ’ ಎನ್ನುವ ಮೂಲಕ ಕನ್ನಡ ಬೆಲ್‌ ಬಾಟಮ್‌ಗೂ ಈ ಚಿತ್ರಕ್ಕೂ ಯಾವುದೇ ಸಂಬಂಧವಿಲ್ಲ ಎಂದಿದ್ದಾರೆ.

ಅಂದಹಾಗೆ, ಅಕ್ಷಯ್‌ ಕುಮಾರ್‌ ನಟನೆಯ “ಬೆಲ್‌ ಬಾಟಮ್‌’ ಚಿತ್ರ ಕೂಡಾ 80ರ ದಶಕದ ಕಥೆಯನ್ನು ಹೊಂದಿದ್ದು, ಹೊಸ ಬಗೆಯ ಪಾತ್ರದಲ್ಲಿ ಅಕ್ಷಯ್‌ ಕಾಣಿಸಿಕೊಳ್ಳುತ್ತಿದ್ದಾರಂತೆ.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ