ವೈವಾಹಿಕ ಜೀವನಕ್ಕೆ ಕಾಲಿಟ್ಟ ಹಿತಾ-ಕಿರಣ್‌

Team Udayavani, Dec 2, 2019, 10:57 AM IST

ಇತ್ತೀಚೆಗಷ್ಟೆ ನಟ ಧ್ರುವ ಸರ್ಜಾ, ರಿಷಿ ಗೃಹಸ್ಥಾಶ್ರಮಕ್ಕೆ ಕಾಲಿಟ್ಟಿದ್ದರು. ಈಗ ಇದೇ ಸಾಲಿಗೆ ನಟಿ ಹಿತಾ ಚಂದ್ರಶೇಖರ್‌ ಮತ್ತು ನಟ ಕಿರಣ್‌ ಶ್ರೀನಿವಾಸ್‌ ಜೋಡಿ ಸೇರ್ಪಡೆಯಾಗಿದೆ.

ಹೌದು, ಹಿರಿಯ ಕಲಾವಿದರಾದ ಸಿಹಿಕಹಿ ಚಂದ್ರು ಮತ್ತು ಸಿಹಿಕಹಿ ಗೀತಾ ದಂಪತಿ ಪುತ್ರಿ ನಟಿ ಹಿತಾ ಚಂದ್ರಶೇಖರ್‌ ಮತ್ತು “ಹಾಗೇ ಸುಮ್ಮನೆ’ ಚಿತ್ರದ ಮೂಲಕ ನಾಯಕ ನಟನಾಗಿ ಕನ್ನಡಚಿತ್ರ ರಂಗಕ್ಕೆ ಪರಿಚಯವಾಗಿದ್ದ ನಟ ಕಿರಣ್‌ ಶ್ರೀನಿವಾಸ್‌ ಭಾನುವಾರ (ಡಿ. 1) ನಡೆದ ವಿವಾಹದಲ್ಲಿ ವೈವಾಹಿಕ ಜೀವನಕ್ಕೆ ಅಡಿ ಇಟ್ಟರು.

ಶಾಸ್ತ್ರೋಕ್ತವಾಗಿ ನಡೆದ ವಿವಾಹ ಸಮಾರಂಭದಲ್ಲಿ, ಹಿತಾ ಚಂದ್ರಶೇಖರ್‌
ಮತ್ತು ಕಿರಣ್‌ ಶ್ರೀನಿವಾಸ್‌ ವಿವಾಹ ಸಮಾರಂಭದಲ್ಲಿ ಕುಟುಂಬಸ್ಥರು, ಸ್ನೇಹಿತರು ಮತ್ತು ಚಿತ್ರರಂಗದ ಅನೇಕರು ಪಾಲ್ಗೊಂಡು ನವ ವಧುವರರಿಗೆ ಶುಭ ಕೋರಿದರು. ಈ ಹಿಂದೆ “ಒಂಥರಾ ಬಣ್ಣಗಳು’ ಚಿತ್ರದಲ್ಲಿ ಒಟ್ಟಾಗಿ ಅಭಿನಯಿಸಿದ್ದ ಹಿತಾ ಚಂದ್ರಶೇಖರ್‌ ಮತ್ತು ಕಿರಣ್‌ ಶ್ರೀನಿವಾಸ್‌ ಚಿತ್ರ ಬಿಡುಗಡೆಯ ನಂತರ ನಿಶ್ಚಿತಾರ್ಥವಾಗಿದ್ದ ಈಜೋಡಿ ಈಗ ಮದುವೆಯಾಗುವ ಮೂಲಕ ನಿಜ ಜೀವನದಲ್ಲೂ ಜಂಟಿ ಆಗಿದೆ.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ