ಹೋಮ್ಲಿ ಮಯೂರಿ ಈಗ ಸಖತ್‌ ಬೋಲ್ಡ್‌!

ನನ್ನ ಪ್ರಕಾರದಲ್ಲಿ ಮಾಡರ್ನ್ ಹುಡುಗಿ

Team Udayavani, Jul 14, 2019, 3:04 AM IST

ಹುಬ್ಬಳ್ಳಿಯಿಂದ ಬಂದು ಹೋಮ್ಲಿ ಹುಡುಗಿ ಎಂಬ ಪಟ್ಟ ಪಡೆದಿದ್ದ ಮಯೂರಿ ಈಗ ಸಖತ್‌ ಬೋಲ್ಡ್‌ ಆಗಿದ್ದಾರೆ. ಹೋಮ್ಲಿ ಹುಡುಗಿ ಈಗ ಮಾಡರ್ನ್ ಹುಡುಗಿಯಾಗಿದ್ದಾರೆ. ಅದು ಯಾವ ಮಟ್ಟಿಗೆಂದರೆ ಪಾರ್ಟಿಗಳಲ್ಲಿ ಕಾಣಿಸಿಕೊಳ್ಳುತ್ತಾ, ಸಿಗರೇಟ್‌, ಹುಕ್ಕಾ ಸೇದುವ ಜೊತೆಗೆ ಮದ್ಯದ ನಶೆಯಲ್ಲಿ ತೇಲುವ ಮಟ್ಟಕ್ಕೆ! ಹೀಗೆಂದರೆ ನೀವು ಆಶ್ಚರ್ಯಪಡಬಹುದು.

ನಾವು ಇಲ್ಲಿ ಹೇಳುತ್ತಿರುವುದು ಮಯೂರಿ ಸಿನಿಮಾ ಕುರಿತು. “ನನ್ನ ಪ್ರಕಾರ’ ಎಂಬ ಸಿನಿಮಾವೊಂದು ಬರುತ್ತಿರುವ ವಿಚಾರ ನಿಮಗೆ ಗೊತ್ತಿರಬಹುದು. ಈ ಚಿತ್ರದಲ್ಲಿ ಮಯೂರಿ ಕೂಡಾ ನಟಿಸಿದ್ದಾರೆ. ಚಿತ್ರದ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿರುವ ಮಯೂರಿಗೆ ಈ ಹಿಂದೆ ಮಾಡಿರದಂತಹ ಪಾತ್ರ ಸಿಕ್ಕಿದೆ. ಅದು ಸಖತ್‌ ಬೋಲ್ಡ್‌ ಆಗಿರುವ ಪಾತ್ರ.

ಮಯೂರಿ ಕೂಡಾ ಈ ಪಾತ್ರವನ್ನು ಖುಷಿಯಿಂದಲೇ ಮಾಡಿದ್ದಾರೆ. ಈ ಪಾತ್ರದ ಬಗ್ಗೆ ಮಾತನಾಡುವ ಮಯೂರಿ, “ನನ್ನ ಪ್ರಕಾರ ಒಂದು ವಿಶಿಷ್ಟವಾದ ಪಾತ್ರ. ಇದನ್ನು ಮಲ್ಟಿಲೆಯರ್‌ ಸಿನಿಮಾ ಎಂದು ಕರೆಯಬಹುದು. ನನ್ನ ಪಾತ್ರ ಕಥೆಯ ಕೇಂದ್ರಬಿಂದು ಎಂದರೆ ತಪ್ಪಲ್ಲ. ನಾನಿಲ್ಲಿ ಸಖತ್‌ ಬೋಲ್ಡ್‌ ಹುಡುಗಿಯಾಗಿ ಕಾಣಿಸಿಕೊಂಡಿದ್ದೇನೆ.

ನನ್ನ ರಿಯಲ್‌ ಲೈಫ್ಗೆ ಸಂಪೂರ್ಣ ವಿರುದ್ಧವಾಗಿರುವ ಪಾತ್ರ. ಇಂಡಿಪೆಂಡೆಂಟ್‌ ಹುಡುಗಿಯಾಗಿರುವ ಆಕೆಯದ್ದೇ ಒಂದು ಲೈಫ್ಸ್ಟೈಲ್‌. ಪಾರ್ಟಿ, ಪಬ್‌, ಕುಡಿತ … ಇವೆಲ್ಲದಕ್ಕೆ ಅಂಟಿಕೊಂಡಿರುವ ಆಕೆ, ಅದರಿಂದ ಯಾವ ರೀತಿ ತೊಂದರೆ ಅನುಭವಿಸುತ್ತಾಳೆಂಬುದು ಕೂಡಾ ಸಿನಿಮಾದ ಹೈಲೈಟ್‌. ಚಿತ್ರದಲ್ಲಿ ಒಳ್ಳೆಯ ಸಂದೇಶವಿದೆ.

ನನ್ನ ಪಾತ್ರದ ಮೂಲಕವೂ ಯುವಜನತೆಗೊಂದು ಸಂದೇಶ ನೀಡಲಾಗಿದೆ. ಇತ್ತೀಚೆಗೆ ಬರುತ್ತಿರುವ ಹೊಸ ಬಗೆಯ ಸಿನಿಮಾಗಳನ್ನು ಪ್ರೇಕ್ಷಕರು ಇಷ್ಟಪಡುತ್ತಿದ್ದಾರೆ. “ನನ್ನ ಪ್ರಕಾರ’ ಕೂಡಾ ಬೇರೆ ಜಾನರ್‌ನ ಸಿನಿಮಾವಾಗಿ ಪ್ರೇಕ್ಷಕರಿಗೆ ಇಷ್ಟವಾಗುತ್ತದೆ ಎಂಬ ವಿಶ್ವಾಸವಿದೆ’ ಎನ್ನುತ್ತಾರೆ ಮಯೂರಿ. ಅಂದಹಾಗೆ, ಇತ್ತೀಚೆಗಷ್ಟೇ ಚಿತ್ರದ ಮೋಶನ್‌ ಪೋಸ್ಟರ್‌ ಬಿಡುಗಡೆಯಾಗಿದೆ.

ವಿನಯ್‌ ಎನ್ನುವವರು “ನನ್ನ ಪ್ರಕಾರ’ ಸಿನಿಮಾದ ನಿರ್ದೇಶಕರು. ಜಿವಿಕೆ ಕಂಬೈನ್ಸ್‌ ಹಾಗೂ ಗುರುರಾಜ್‌ ಈ ಚಿತ್ರದ ನಿರ್ಮಾಪಕರು.ಚಿತ್ರದಲ್ಲಿ ಕಿಶೋರ್‌, ಪ್ರಿಯಾಮಣಿ, ವೈಷ್ಣವಿ, ನಿರಂಜನ್‌ ಸೇರಿದಂತೆ ಅನೇಕರು ನಟಿಸಿದ್ದಾರೆ. ಇದೊಂದು ಸಸ್ಪೆನ್ಸ್‌ ಥ್ರಿಲ್ಲರ್‌ ಚಿತ್ರವಾಗಿದ್ದು, ಶೀಘ್ರದಲ್ಲಿ ಬಿಡುಗಡೆಯಾಗಲಿದೆ.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ