“ಖಾಕಿ’ ಮೇಲೆ ಹೋಪ್‌

ಗೆಲುವಿನ ನಿರೀಕ್ಷೆಯಲ್ಲಿ ತಾನ್ಯಾ

Team Udayavani, Jan 15, 2020, 7:04 AM IST

“ಬಸಣ್ಣಿ ಬಾ… ಬಸಣ್ಣಿ ಬಾ…’ ಈ ಹಾಡಿನ ಮೂಲಕ ಪಡ್ಡೆಗಳ ನಿದ್ದೆಗೆಡಿಸಿದ ನಟಿ ತಾನ್ಯಾ ಹೋಪ್‌. “ಯಜಮಾನ’ ಚಿತ್ರದಲ್ಲಿ ದರ್ಶನ್‌ ಜೊತೆ ಕುಣಿದು ಕುಪ್ಪಳಿಸಿದ್ದ ತಾನ್ಯಾಹೋಪ್‌, “ಖಾಕಿ’ ಚಿತ್ರದ ನಾಯಕಿ. ಈ ಚಿತ್ರ ಜನವರಿ 24 ರಂದು ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ಈ ಚಿತ್ರದ ಮೇಲೆ ತಾನ್ಯಾ ಹೋಪ್‌ ಅವರಿಗೆ ಸಾಕಷ್ಟು ನಿರೀಕ್ಷೆ ಇದೆ. ಅದಕ್ಕೆ ಕಾರಣ, ಚಿತ್ರದ ಕಥೆ ಹಾಗು ಪಾತ್ರ.

ಆ ಕುರಿತು ಹೇಳಿಕೊಳ್ಳುವ ತಾನ್ಯಾ ಹೋಪ್‌, “ನನಗೆ “ಖಾಕಿ’ ಮೇಲೆ ತುಂಬಾನೇ ನಿರೀಕ್ಷೆ ಇದೆ. ನಾನಷ್ಟೇ ಅಲ್ಲ, ಇಡೀ ಚಿತ್ರತಂಡ ಎಕ್ಸೈಟ್‌ ಆಗಿದ್ದೇವೆ. ಪ್ರೇಕ್ಷಕರು ನಮ್ಮ ಚಿತ್ರಕ್ಕೆ ಹೇಗೆ ಪ್ರತಿಕ್ರಿಯಿಸುತ್ತಾರೆ ಎಂಬ ಕಾತುರವೂ ಇದೆ. ಎಲ್ಲರೂ ಕಷ್ಟಪಟ್ಟು, ಇಷ್ಟಪಟ್ಟು ಮಾಡಿದ ಚಿತ್ರವಿದು. ನಿರ್ದೇಶಕ ನವೀನ್‌, ನಿರ್ಮಾಪಕ ತರುಣ್‌ ಶಿವಪ್ಪ ಅವರು ಒಳ್ಳೆಯ ಅವಕಾಶ ಕೊಟ್ಟಿದ್ದಾರೆ. ಅದನ್ನು ಸರಿಯಾಗಿ ಬಳಸಿಕೊಂಡ ಖುಷಿ ನನ್ನದು.

ಇನ್ನು, ಚಿರು ಜೊತೆ ಮೊದಲ ಚಿತ್ರವಿದು. ಅವರೊಂದಿಗೆ ಕೆಲಸ ಮಾಡಿದ್ದು ಮರೆಯದ ಅನುಭವ. ಸದಾ ಸೆಟ್‌ನಲ್ಲಿ ಎಲ್ಲರನ್ನೂ ನಗಿಸುತ್ತಲೇ, ಕೆಲಸ ಮಾಡುತ್ತಿದ್ದರು. ನನಗೂ ಸಹ ಈ ಚಿತ್ರದಲ್ಲಿ ಸಾಕಷ್ಟು ವಿಷಯಗಳನ್ನು ಕಲಿಯೋಕೆ ಸಾಧ್ಯವಾಗಿದೆ. ಇನ್ನು, ಇದೊಂದು ಸರ್ಕಾರ ಹಾಗು ಭ್ರಷ್ಟಾಚಾರ ಕುರಿತಾದ ಕಥೆ ಹೊಂದಿರುವ ಸಿನಿಮಾ. ಭ್ರಷ್ಟಾಚಾರದ ವಿರುದ್ಧ ಒಬ್ಬ ಕಾಮನ್‌ ಮ್ಯಾನ್‌ ಹೇಗೆ ಹೋರಾಡಿ, ನ್ಯಾಯ ಪಡೆಯುತ್ತಾನೆ,

ಭ್ರಷ್ಟರನ್ನು ಹೇಗೆ ಮಟ್ಟ ಹಾಕುತ್ತಾನೆ ಅನ್ನೋದು ಕಥೆ. ನಾನು ಈ ಚಿತ್ರದಲ್ಲಿ ಒಬ್ಬ ಸ್ಟ್ರಾಂಗ್‌ ಹುಡುಗಿಯಾಗಿ ನಟಿಸಿದ್ದೇನೆ. ನಾಯಕನಿಗೆ ಸಹಾಯ ಮಾಡುವಂತಹ ಪಾತ್ರವದು. ಅದು ಹೇಗೆ ಅನ್ನುವುದನ್ನು ಚಿತ್ರದಲ್ಲೇ ನೋಡಬೇಕು. ಇಲ್ಲಿ ಎಲ್ಲಾ ಅಂಶಗಳೂ ಇವೆ. ಪಕ್ಕಾ ಕಮರ್ಷಿಯಲ್‌ ಆಗಿರುವ ಚಿತ್ರದಲ್ಲಿ ಎಲ್ಲಾ ವರ್ಗದ ವರಿಗೆ ಇಷ್ಟವಾ ಗುವ ಅಂಶ ಗಳಿವೆ. “ಖಾಕಿ’ ಮನರಂಜನೆಗೆ ಮೋಸ ಮಾಡುವುದಿಲ್ಲ’ ಎನ್ನುತ್ತಾರೆ ತಾನ್ಯಾ ಹೋಪ್‌.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ

  • ರಂಗದ ಮೇಲೆ ಮಿಂಚಿನ ಬಳ್ಳಿಯೊಂದು ಝಳಪಿಸಿದಂತೆ ಅದಮ್ಯ ಚೈತನ್ಯದಿಂದ ಲೀಲಾಜಾಲವಾಗಿ ನರ್ತಿಸಿದವಳು ಭರತನಾಟ್ಯ ಕಲಾವಿದೆ ಹರ್ಷಿತಾ ಜಗದೀಶ್‌. ಅದು ಅವಳ ಮೊದಲ ರಂಗಾರ್ಪಣೆ...

  • ಕುರಿಗಾಹಿಯೊಬ್ಬನಿಗೆ ಭೀಮಾ ನದಿಯಲ್ಲಿ ಗಾಜಿನ ರೂಪದ ಕಂಬದಲ್ಲಿದ್ದ ದೇವಿ ಕಾಣಿಸಿಕೊಳ್ಳುತ್ತಾಳೆ. ಆ ದೇವಿಯನ್ನು ಒಂದು ಸರ್ಪವು ಕಾಯುತ್ತಿತ್ತು... ಭೀಮಾ ನದಿಯಲ್ಲಿ...

  • "ಅದೊಂದು ವಟವೃಕ್ಷ. ಅಲ್ಲೊಂದು ವಿಚಿತ್ರವಾದ ಸನ್ನಿವೇಶ. ಗುರುವನ್ನು ಸುತ್ತುವರಿದು ಶಿಷ್ಯರೆಲ್ಲ ಕುಳಿತಿದ್ದಾರೆ. ಶಿಷ್ಯರೆಲ್ಲರೂ ವೃದ್ಧರು. ಗುರುವಾದರೋ ಯುವಕ....

  • ಎಷ್ಟು ಬಗೆಯಲ್ಲಿ ಇಡ್ಲಿ ಮಾಡಬಹುದು ಅಂದುಕೊಂಡಿದ್ದೀರಿ? ಹೆಚ್ಚೆಂದರೆ ಹತ್ತಿಪ್ಪತ್ತು ವೆರೈಟಿ ಅಂತೀರಾ? ಇಲ್ಲ, 55 ವೆರೈಟಿಯ ಇಡ್ಲಿ ಮಾಡಬಹುದು ಅನ್ನುತ್ತಿದೆ...

  • ಕ್ರಿಕೆಟಿಗರ ಮಕ್ಕಳು ಅಪ್ಪನ ಸರಿಸಮಾನವಾಗಿ ಬೆಳೆದ ಉದಾಹರಣೆಗಳು ಸಿಗುವುದು ಕಡಿಮೆ. ಕ್ರಿಕೆಟ್‌ ದಿಗ್ಗಜ ಸಚಿನ್‌ ತೆಂಡುಲ್ಕರ್‌ ಅವರ ಮಗ ಅರ್ಜುನ್‌ ತೆಂಡುಲ್ಕರ್‌...