ಹೃದಯ ಬಡಿತ

Team Udayavani, Aug 30, 2018, 11:20 AM IST

ಪ್ರಶಾಂತ್‌ ರಾಜ್‌ ಅಭಿನಯದ “ಒರಟ ಐ ಲವ್‌ ಯೂ’ ಚಿತ್ರ ನೆನಪಿರಬಹುದು. 11 ವರ್ಷಗಳ ಹಿಂದೆ ಈ ಚಿತ್ರ ಬಿಡುಗಡೆಯಾಗಿತ್ತು. ಈ ಚಿತ್ರದ ಮೂಲಕ ಸೌಮ್ಯ ನಾಯಕಿಯಾಗಿದ್ದರು. ಆ ಚಿತ್ರ ಯಶಸ್ವಿಯಾದರೂ, ಸೌಮ್ಯ ಮಾತ್ರ ಇನ್ನೊಂದು ಚಿತ್ರದಲ್ಲಿ ನಟಿಸಿರಲಿಲ್ಲ. ಈಗ 11 ವರ್ಷಗಳ ನಂತರ ಸೌಮ್ಯ, ಹೃದಯ ಎಂಬ ಹೆಸರಿನಲ್ಲಿ ಎರಡನೆಯ ಇನ್ನಿಂಗ್ಸ್‌ ಪ್ರಾರಂಭಿಸುವುದಕ್ಕೆ ತಯಾರಾಗಿದ್ದಾರೆ.

ಈಗಾಗಲೇ ಅವರು ಶಿವಗಣೇಶ್‌ ನಿರ್ದೇಶನದ “ತ್ರಾಟಕ’ ಎಂಬ ಚಿತ್ರದಲ್ಲಿ ನಟಿಸಿದ್ದು, ಚಿತ್ರ ನಾಳೆ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ಎಲ್ಲಾ ಸರಿ, ಸೌಮ್ಯ ಅಲಿಯಾಸ್‌ ಹೃದಯ ಇಷ್ಟು ವರ್ಷಗಳ ಯಾಕೆ ನಟಿಸಲಿಲ್ಲ ಎಂಬ ಪ್ರಶ್ನೆ ಬರಬಹುದು. ಈ ಪ್ರಶ್ನೆಗೆ, “ಆ ಸಂದರ್ಭದಲ್ಲಿ ನಾನು ಅಷ್ಟೊಂದು ಸೀರಿಯಸ್‌ ಆಗಿರಲಿಲ್ಲ’ ಎಂಬ ಉತ್ತರ ಅವರಿಂದ ಬರುತ್ತದೆ. “ನಾನು “ಒರಟ’ ಚಿತ್ರದಲ್ಲಿ ನಟಿಸುವಾಗ ಹತ್ತನೇ ಕ್ಲಾಸಿನಲ್ಲಿದ್ದೆ.

ಅದಾದ ನಂತರ ತೆಲುಗಿನಲ್ಲಿ “ದಮ್ಮುನೋಡು’ ಎಂಬ ಚಿತ್ರದಲ್ಲಿ ನಟಿಸಿದೆ. ಆಗ ನಟನೆಯ ಬಗ್ಗೆ ನನಗೆ ಅಷೊಂದು ಸೀರಿಯಸ್‌ ಇರಲಿಲ್ಲ. ಆ ನಂತರ ಅವಕಾಶಗಳು ಬಂದವು. ನಾನೇ ದೂರ ಉಳಿದೆ. ಒಂದು ಬ್ರೇಕ್‌ ತೆಗೆದುಕೊಂಡು ಓದು ಮುಂದುವರೆಸಿದೆ. ನಂತರ ಇಂಜಿನಿಯರಿಂಗ್‌ ಮುಗಿಸಿದೆ. ಓದು ಮುಗಿದ ಮೇಲೆ ಚಿತ್ರರಂಗದಲ್ಲಿ ಮುಂದುವರೆಯಬೇಕು ಎಂದನಿಸಿತು.

ಆದರೆ, ನನಗೆ ಸುಮ್ಮನೆ ಬರುವುದಕ್ಕೆ ಇಷ್ಟ ಇರಲಿಲ್ಲ. ಒಂದಿಷ್ಟು ತಯಾರಿ ಮಾಡಿಕೊಂಡೆ. ಜಿಮ್‌ಗೆ ಹೋದೆ. ಡ್ಯಾನ್ಸ್‌ ಕಲಿತೆ. ಓಕೆ ಅನಿಸಿದ ನಂತರ ಚಿತ್ರರಂಗಕ್ಕೆ ವಾಪಸ್ಸು ಬಂದೆ’ ಎನ್ನುತ್ತಾರೆ ಹೃದಯ. “ತ್ರಾಟಕ’ ಚಿತ್ರದಲ್ಲಿ ಸೈಕ್ಯಾಟ್ರಿಸ್ಟ್‌ ಪಾತ್ರ ನಿರ್ವಹಿಸಿರುವ ಹೃದಯಗೆ, ಒಂದು ಗಟ್ಟಿ ಪಾತ್ರ ಸಿಕ್ಕಿದೆಯಂತೆ. “ಇಲ್ಲಿ ನಾನು ಸೈಕ್ಯಾಟ್ರಿಸ್ಟ್‌ ಪಾತ್ರ ಮಾಡಿದ್ದೇನೆ.

ನಾಯಕ ಮಾನಸಿಕ ಒತ್ತಡದಿಂದ ಬಳಲುತ್ತಿರುತ್ತಾನೆ. ಅದರಿಂದ ಅವನನ್ನು ಹೇಗೆ ಆಚೆಗೆ ತರುತ್ತೀನಿ ಮತ್ತು ಆ ನಂತರ ನಾಯಕ ಹೇಗೆ ಒಂದು ಕ್ಲಿಷ್ಟವಾದ ಕೇಸ್‌ ಹೇಗೆ ಬಗೆಹರಿಸುತ್ತಾನೆ ಎನ್ನುವುದೇ ಚಿತ್ರದ ಕಥೆ’ ಎನ್ನುತ್ತಾರೆ ಹೃದಯ. ಈಗ ತಮಗೆ ಸೀರಿಯಸ್‌ನೆಸ್‌ ಬಂದಿದೆ ಎನ್ನುವ ಹೃದಯ, ಮುಂದಿನ ದಿನಗಳಲ್ಲಿ ಇನ್ನೊಂದಿಷ್ಟು ಚಿತ್ರಗಳಲ್ಲಿ, ಒಳ್ಳೆಯ ಪಾತ್ರಗಳನ್ನು ಮಾಡುವ ನಿರೀಕ್ಷೆಯಲ್ಲಿದ್ದಾರೆ.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ