ಹಂಡ್ರೆಡ್‌ ಪರ್ಸೆಂಟ್‌ “ಬ್ರಹ್ಮಚಾರಿ’ಯ ಟೀಸರ್‌ ಹೊರಬಂತು

ಪಕ್ಕಾ ಹಾಸ್ಯಮಯ ಚಿತ್ರದಲ್ಲಿ ಸತೀಶ್‌ ನೀನಾಸಂ ನಟನೆ

Team Udayavani, Jun 24, 2019, 3:00 AM IST

ಕೆಲ ದಿನಗಳ ಹಿಂದಷ್ಟೇ ನಟ ನೀನಾಸಂ ಸತೀಶ್‌ ಅವರು, ನಿರ್ಮಾಪಕ ಉದಯ್‌ ಮೆಹ್ತಾ ನಿರ್ಮಾಣದ “ಬ್ರಹ್ಮಚಾರಿ’ ಚಿತ್ರದಲ್ಲಿ ಅಭಿನಯಿಸುತ್ತಿದ್ದಾರೆ ಎಂಬ ಸುದ್ದಿ ಕುರಿತು ಹೇಳಲಾಗಿತ್ತು. ಅದಾದ ಬಳಿಕ ಆ ಚಿತ್ರದಲ್ಲಿ ನೀನಾಸಂ ಸತೀಶ್‌ ಅವರಿಗೆ ಜೋಡಿಯಾಗಿ ಅದಿತಿ ಪ್ರಭುದೇವ ಕಾಣಿಸಿಕೊಳ್ಳಲಿದ್ದಾರೆ ಎಂಬ ಸುದ್ದಿ ಕೂಡ ಹೊರಬಿದ್ದಿತ್ತು.

ಈಗ ಹೊಸ ಸುದ್ದಿಯೆಂದರೆ, “ಬ್ರಹ್ಮಚಾರಿ’ ಚಿತ್ರದ ಟೀಸರ್‌ ಹೊರಬಂದಿದೆ. ಹೌದು, ಇತ್ತೀಚೆಗೆ ಚಿತ್ರದ ಟೀಸರ್‌ ಬಿಡುಗಡೆಯಾಗಿದ್ದು, ಹಿರಿಯ ಕಲಾವಿದ ದತ್ತಣ್ಣ ಅವರು ಚಿತ್ರದ ಟೀಸರ್‌ ಬಿಡುಗಡೆ ಮಾಡಿ, ಚಿತ್ರದ ಕುತೂಹಲ ಮತ್ತು ಆ ಪಾತ್ರದೊಳಗೆ ಸಾಕಷ್ಟು ಮಜ ಇರುವ ಬಗ್ಗೆ ಹೇಳಿಕೊಂಡರು. ಇನ್ನು, “ಬ್ರಹ್ಮಚಾರಿ’ ಚಿತ್ರದ ಟೀಸರ್‌ ಬಿಡುಗಡೆಗೆ ಕಾರಣವೂ ಇತ್ತು.

ನೀನಾಸಂ ಸತೀಶ್‌ ಅವರ ಹುಟ್ಟುಹಬ್ಬ ಕೂಡ ಇದ್ದುದರಿಂದ ಅಂದೇ, ನಿರ್ಮಾಪಕ ಉದಯ್‌ ಕೆ.ಮೆಹ್ತಾ ಅವರು “ಬ್ರಹ್ಮಚಾರಿ’ ಚಿತ್ರದ ಟೀಸರ್‌ ಲಾಂಚ್‌ ಮಾಡುವ ಯೋಚನೆ ಮಾಡಿದ್ದರು. ಹಾಗಾಗಿ, ಅಂದು ಅದ್ಧೂರಿಯಾಗಿಯೇ ಚಿತ್ರದ ಟೀಸರ್‌ ಹೊರಬಂದಿದೆ. ಈ ಚಿತ್ರದ ಶೀರ್ಷಿಕೆ ಎಷ್ಟು ಕುತೂಹಲ ಕೆರಳಿಸಿದೆಯೋ, ಅಷ್ಟೇ ಕುತೂಹಲ ಚಿತ್ರದ ಅಡಿಬರಹದಲ್ಲೂ ಇದೆ.

ಅದೇನೆಂದರೆ, “100% ವರ್ಜಿನ್‌’ ಎಂಬುದು. ಇಲ್ಲೊಂದು ವಿಶೇಷ ಮನರಂಜನೆ ಪ್ಯಾಕೇಜ್‌ ಇದೆ ಎಂಬುದನ್ನು ನಿರ್ದೇಶಕ ಚಂದ್ರಮೋಹನ್‌ ಅವರು ಹೇಳಿಬಿಟ್ಟಿದ್ದಾರೆ. ಇಲ್ಲೂ ಸಹ ತರಹೇವಾರಿ ಪಾತ್ರಗಳು ಕಾಣಿಸಿಕೊಳ್ಳಲಿವೆ. ಸದ್ಯಕ್ಕೆ ಟೀಸರ್‌ ಹೊಸದೊಂದು ಕುತೂಹಲ ಹುಟ್ಟುಹಾಕಿದ್ದು, ಚಿತ್ರದಲ್ಲೂ ನಾನಾ ವಿಶೇಷಗಳು ತುಂಬಿರಲಿವೆ ಎಂಬುದನ್ನು ಚಿತ್ರತಂಡ ಹೆಮ್ಮೆಯಿಂದ ಹೇಳಿಕೊಂಡಿದೆ.

ನಿರ್ಮಾಪಕ ಉದಯ್‌ ಕೆ. ಮೆಹ್ತಾ ಅವರು ಈಗಾಗಲೇ ಚಿರಂಜೀವಿ ಸರ್ಜಾ ಅಭಿನಯದ “ಸಿಂಗ’ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಆ ಚಿತ್ರದಲ್ಲೂ ಅದಿತಿ ಪ್ರಭುದೇವ ಅವರೇ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಈಗ “ಬ್ರಹ್ಮಚಾರಿ’ ಚಿತ್ರದಲ್ಲೂ ಅವರು ನಾಯಕಿ. ಇನ್ನು, ಇದೇ ಮೊದಲ ಬಾರಿಗೆ ಸತೀಶ್‌ ನೀನಾಸಂ ಹಾಗು ಅದಿತಿ ಪ್ರಭುದೇವ ಅವರು ತೆರೆ ಹಂಚಿಕೊಳ್ಳುತ್ತಿದ್ದಾರೆ. ಅದೇನೆ ಇರಲಿದ, “ಬ್ರಹ್ಮಚಾರಿ’ ಚಿತ್ರದಲ್ಲಿ ಹಾಸ್ಯವೇ ಪ್ರಧಾನ ಎಂಬುದು ನಿರ್ದೇಶಕರ ಮಾತು.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ

  • ಬೀಜಿಂಗ್‌/ಹೊಸದಿಲ್ಲಿ: ಚೀನದಲ್ಲಿ ಉದ್ಭವಿಸಿದ ಕೊರೊನಾ ವೈರಸ್‌ ಸೋಂಕಿನ ಪರಿಣಾಮ ಈಗ ಜಾಗತಿಕವಾಗಿ ಗೋಚರಿಸಲಾರಂಭಿಸಿದೆ. ಆರು ದಿನಗಳಿಂದ ಜಗತ್ತಿನ ನಾನಾ ಷೇರು...

  • ಇಂದ್ರಾಣಿ ನದಿಯ ಇಂದಿನ ಕುರೂಪಕ್ಕೆ ನಗರಸಭೆಯನ್ನು ಎಷ್ಟು ದೂರಿದರೂ ಸಾಲದು ಎನ್ನುತ್ತವೆ ದಾಖಲೆಗಳು. ಸುದಿನ ಅಧ್ಯಯನ ತಂಡ ಸಂಗ್ರಹಿಸಿದ ಹಲವು ದಾಖಲೆಗಳು ಸಾಬೀತು...

  • ಕಾಸರಗೋಡು: ರಾಜ್ಯ ಸರಕಾರ ಮುಂಗಡಪತ್ರದಲ್ಲಿ ಘೋಷಿಸಿರುವ "ಹಸಿವು ರಹಿತ ರಾಜ್ಯ ಯೋಜನೆ'ಯ ಅಂಗವಾಗಿ ಇನ್ನು ಮುಂದೆ ಕಾಸರಗೋಡಿನಲ್ಲೂ 25 ರೂ.ಗೆ ಮಧ್ಯಾಹ್ನ ಭೋಜನ ಲಭಿಸಲಿದೆ. ಜಿಲ್ಲಾಧಿಕಾರಿ...

  • ಬೆಂಗಳೂರು: ಆಶ್ರಯ ಮನೆ ನಿರ್ಮಾಣ ಅಕ್ರಮದ ಬಗ್ಗೆ ತನಿಖೆಗೆ ರಾಜ್ಯ ಸರಕಾರ ಆರಂಭಿಸಿರುವ ವಿಜಿಲ್‌ ಮೊಬೈಲ್‌ ಆ್ಯಪ್‌ನ ಗೊಂದಲ ಇನ್ನೂ ನಿವಾರಣೆ ಆಗಿಲ್ಲ. ಆ್ಯಪ್‌...

  • ಮನೋ ಚಿಕಿತ್ಸಾ ಕೇಂದ್ರಗಳ ಕುರಿತಾಗಿ ನಮ್ಮ ನಡುವೆ ಅನೇಕ ತಪ್ಪು ಕಲ್ಪನೆಗಳಿವೆ. "ಹುಚ್ಚಾಸ್ಪತ್ರೆ' ಎಂಬ ಪದಪ್ರಯೋಗವೇ ನಮ್ಮ ನಡುವೆ ಕೆಟ್ಟ ಭಾವವನ್ನು ಹೊಮ್ಮಿಸುತ್ತದೆ....