ನಾನು ನಿರ್ದೇಶಿಸುತ್ತಿರೋದು ಸ್ವಮೇಕ್‌ ಸಿನಿಮಾ: ಸುದೀಪ್‌

ಅಂತೆ-ಕಂತೆಗಳಿಗೆ ತೆರೆಎಳೆದ ಕಿಚ್ಚ

Team Udayavani, Nov 19, 2019, 6:04 AM IST

ಸುದೀಪ್‌ ನಟನೆ ಜೊತೆಗೆ ನಿರ್ದೇಶನದಲ್ಲೂ ತೊಡಗಿರೋದು ನಿಮಗೆ ಗೊತ್ತೇ ಇದೆ. ಈಗಾಗಲೇ ತಮಗೆ ಇಷ್ಟವಾದ ಕಥೆಗಳನ್ನು ಸಿನಿಮಾ ಮಾಡಿದ್ದಾರೆ. ಆದರೆ, ಇತ್ತೀಚೆಗೆ ನಿರ್ದೇಶನದಿಂದ ಸುದೀಪ್‌ ಬ್ರೇಕ್‌ ತೆಗೆದುಕೊಂಡು ನಟನೆಯಲ್ಲಿ ಬಿಝಿಯಾಗಿದ್ದರು. ಸುದೀಪ್‌ ಯಾವುದೇ ಸಂದರ್ಶನ ಕೊಟ್ಟರೂ ಅವರಿಗೆ ಎದುರಾಗುತ್ತಿದ್ದ ಪ್ರಶ್ನೆಯಲ್ಲಿ “ಮತ್ತೆ ಯಾವಾಗ ನಿರ್ದೇಶನ’ ಕೂಡಾ ಒಂದಾಗಿತ್ತು.

ಅದಕ್ಕೆ ಸುದೀಪ್‌ ಕೂಡಾ “ಇವತ್ತು ನನಗಾಗಿ, ನನ್ನನ್ನು ಬೇರೆ ಬೇರೆ ಗೆಟಪ್‌ಗಳಲ್ಲಿ ಕಲ್ಪಿಸಿಕೊಂಡು ಸಾಕಷ್ಟು ಮಂದಿ ಕಥೆ ಬರೆಯುತ್ತಿದ್ದಾರೆ. ತುಂಬಾ ಪ್ರೀತಿಸಿ, ಕಥೆ ರೆಡಿ ಮಾಡುತ್ತಿದ್ದಾರೆ. ಅವರಿಗೆ ಅವಕಾಶ ಕೊಡಬೇಕು’ ಎನ್ನುತ್ತಿದ್ದರು. ಅದೇ ಕಾರಣದಿಂದ ಬೇರೆ ಬೇರೆ ನಿರ್ದೇಶಕರ ಸಿನಿಮಾಗಳಲ್ಲಿ ಬಿಝಿಯಾಗಿದ್ದ ಸುದೀಪ್‌, ಈಗ ಸ್ವತಃ ನಿರ್ದೇಶನಕ್ಕೆ ಮರಳುತ್ತಿದ್ದಾರೆ. ಹೌದು, ಸುದೀಪ್‌ ಹೊಸ ಸಿನಿಮಾವೊಂದನ್ನು ನಿರ್ದೇಶಿಸಲು ಅಣಿಯಾಗಿದ್ದಾರೆ.

ಶೀಘ್ರದಲ್ಲೇ ಈ ಸಿನಿಮಾ ಸೆಟ್ಟೇರಲಿದೆ ಕೂಡಾ. ಆದರೆ, ಸುದೀಪ್‌ ಸಿನಿಮಾ ನಿರ್ದೇಶನ ಮಾಡುತ್ತಾರೆಂಬ ಸುದ್ದಿಯ ಜೊತೆಗೆ ಇದು ರೀಮೇಕ್‌ ಸಿನಿಮಾ ಎಂಬ ಸುದ್ದಿಯೂ ಜೋರಾಗಿ ಹರಿದಾಡಿತ್ತು. ಅದಕ್ಕೆ ಕಾರಣ ಸುದೀಪ್‌ ಈ ಹಿಂದೆ ನಿರ್ದೇಶನ ಮಾಡಿರುವ ಕೆಲವು ರೀಮೇಕ್‌ ಚಿತ್ರಗಳು. ಹಾಗಾಗಿ, ಈ ಬಾರಿಯೂ ರೀಮೇಕ್‌ ಸಿನಿಮಾವನ್ನೇ ನಿರ್ದೇಶನ ಮಾಡುತ್ತಾರೆಂದುಕೊಂಡು ಈ ತರಹದ ಸುದ್ದಿ ಓಡಾಡುತ್ತಿತ್ತು.

ಆದರೆ, ಈಗ ಸ್ವತಃ ಸುದೀಪ್‌ ತಾನು ಈ ಬಾರಿ ನಿರ್ದೇಶನ ಮಾಡುತ್ತಿರೋದು ಸ್ವಮೇಕ್‌ ಸಿನಿಮಾ ಎಂದು ಹೇಳಿಕೊಂಡಿದ್ದಾರೆ. ಈ ಬಗ್ಗೆ ಟ್ವೀಟ್‌ ಮಾಡಿರುವ ಸುದೀಪ್‌, “ರೀಮೇಕ್‌ ಸಿನಿಮಾ ಮಾಡುತ್ತಿದ್ದೇನೆಂದು ಸುದ್ದಿಯಾಗುತ್ತಿದೆ. ಆದರೆ, ನಾನು ಮಾಡುತ್ತಿರೋದು ಸ್ವಮೇಕ್‌ ಸಿನಿಮಾ. ಈ ಬಗ್ಗೆ ನಾನು ಹಾಗೂ ನನ್ನ ತಂಡ ಎಕ್ಸೆ„ಟ್‌ ಆಗಿದ್ದೇವೆ. ಶೀಘ್ರದಲ್ಲೇ ಚಿತ್ರ ಆರಂಭವಾಗಲಿದೆ’ ಎಂದಿದ್ದಾರೆ.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ