ಗರ್ಭಿಣಿ ಯಾರು? ಅವಳಲ್ಲ, ಅವನು!!


Team Udayavani, Nov 16, 2017, 1:03 PM IST

I-am-Pregnent_(135).jpg

ಕನ್ನಡ ಚಿತ್ರರಂಗದಲ್ಲಿ ಪ್ರಯೋಗಾತ್ಮಕ ಚಿತ್ರಗಳ ಸಂಖ್ಯೆ ಜಾಸ್ತಿಯಾಗುತ್ತಿದೆ. ಆ ಸಾಲಿಗೆ ಈಗ “ಐ ಯಾಮ್‌ ಪ್ರಗ್ನೆಂಟ್‌’ ಎಂಬ ಹೊಸಬರ ಚಿತ್ರವೂ ಸೇರಿದೆ. “ಬಟ್‌ ಐ ಯಾಮ್‌ ನಾಟ್‌ ಫೀಮೇಲ್‌’ ಎಂಬ ಅಡಿಬರಹ ಈ ಚಿತ್ರಕ್ಕಿದೆ. ಅಲ್ಲಿಗೆ ಇದೊಂದು ಮತ್ತೂಂದು ವಿಭಿನ್ನ ಪ್ರಯೋಗಾತ್ಮಕ ಸಿನಿಮಾ ಅಂತ ಪ್ರತ್ಯೇಕವಾಗಿ ಹೇಳುವಂತಿಲ್ಲ.

“ನಾನು ಗರ್ಭಿಣಿ’, “ನಾನು ಹೆಂಗಸಲ್ಲ …’ ಅಂತ ಹೇಳಿದರೆ ಹೇಗಾಗಬೇಡ. ಇಲ್ಲಿ ಅತೀ ಭಾವನಾತ್ಮಕ ಅಂಶಗಳನ್ನು ಸೇರಿಸಿ ಹೀಗೊಂದು ಸಿನಿಮಾಗೆ ಕೈ ಹಾಕಿದ್ದಾರೆ ಸಂಜಯ್‌. ಕಳೆದ ಒಂದು ದಶಕದಿಂದಲೂ ಚಿತ್ರರಂಗದಲ್ಲಿರುವ ಸಂಜಯ್‌ಗೆ, ಹೊಸ ಬಗೆಯ ಕಥೆ ಮಾಡಿ, ಜನರ ಮುಂದಿಡಬೇಕೆಂಬ ಬಯಕೆ, “ಗರ್ಭಿಣಿ’ ಮೂಲಕ ಈಡೇರುತ್ತಿದೆ. ಅಂದಹಾಗೆ, ಸಂಜಯ್‌ ಈ ಕಥೆಗಾಗಿ ಸಾಕಷ್ಟು ಮಾಹಿತಿ ಕಲೆಹಾಕಿದ್ದಾರೆ. ಕೆಲ ವರ್ಷಗಳ ಹಿಂದೆ ಫ್ರಾನ್ಸ್‌ನಲ್ಲಿ 10ರ ಬಾಲಕ ಒಂದು ಮಗುವಿಗೆ ಜನ್ಮ ನೀಡಿದ್ದಾನೆ, ಅಲ್ಲದೆ ಆಸ್ಟ್ರೇಲಿಯಾದಲ್ಲಿ 52 ವರ್ಷದ ಗಂಡಸು ಗರ್ಭಿಣಿಯಾಗಿದ್ದಾರೆ ಎಂಬ ಮಾಹಿತಿಯನ್ನು ಕಲೆಹಾಕಿದ ಸಂಜಯ್‌, ಅಂತಹ ಸೂಕ್ಷ ವಿಷಯಗಳ ಕುರಿತ ಸಿನಿಮಾ ಏಕೆ ಮಾಡಬಾರದು ಅಂತಂದುಕೊಂಡು ಈ ಚಿತ್ರಕ್ಕೆ ಕೈ ಹಾಕಿದ್ದಾರೆ. ಇತ್ತೀಚೆಗೆ ಚಿತ್ರಕ್ಕೆ ಮುಹೂರ್ತ ನೆರವೇರಿದೆ. ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಸಾ.ರಾ. ಗೋವಿಂದು ಚಿತ್ರಕ್ಕೆ ಚಾಲನೆ ನೀಡಿದ್ದಾರೆ.

ಅಂದಹಾಗೆ, ಚಿತ್ರದ ಬಗ್ಗೆ ಹೆಚ್ಚು ಮಾಹಿತಿ ಹೊರಹಾಕದ ಸಂಜಯ್‌, ಸಿನಿಮಾದಲ್ಲೇ ಎಲ್ಲವನ್ನೂ ನೋಡಬೇಕು ಎಂದು ಜಾರಿಕೊಳ್ಳುತ್ತಾರೆ. ಈ ಚಿತ್ರಕ್ಕೆ  ಪ್ರತಾಪ್‌ ನಾರಾಯಣ್‌ ನಾಯಕರಾಗಿದ್ದಾರೆ. ಅವರಿಲ್ಲಿ ಕುಂಚಕಲಾವಿದರಾಗಿ ನಟಿಸುತ್ತಿದ್ದಾರೆ. ಅರ್ಪಿತಾ ಗೌಡ ನಾಯಕಿ. ಉಳಿದಂತೆ ಮಾಸ್ಟರ್‌ ವಿನಯ್‌ ಕೂಡ ಪ್ರಮುಖ ಪಾತ್ರ ನಿರ್ವಹಿಸುತ್ತಿದ್ದಾರೆ. ಚಿಕ್ಕಮಗಳೂರು, ಮಹಾಬಲೇಶ್ವರ, ಮೈಸೂರು, ಬೆಂಗಳೂರು ಸುತ್ತಮುತ್ತ ಒಂದೇ ಹಂತದಲ್ಲಿ 60 ದಿನಗಳ ಕಾಲ ಚಿತ್ರೀಕರಣ ನಡೆಯಲಿದೆ. ನಾಲ್ಕು ಹಾಡುಗಳಿಗೆ ಎಸ್‌. ಪ್ರದೀಪ್‌ ವರ್ಮಾ ಸಂಗೀತ ನೀಡುತ್ತಿದ್ದಾರೆ. ಅರಿವುಪುಗಳ್‌ ಛಾಯಾಗ್ರಹಣ ಮಾಡುತ್ತಿದ್ದಾರೆ. ಅಮೇರಿಕಾದ ಕನ್ನಡತಿ ಡಾ.ಟಿ.ಅಕ್ಷತಾ ರಾಮಚಂದ್ರ ರಾವ್‌ ನಿರ್ಮಾಪಕರು. ಅವರಿಗೆ ಹೆಚ್‌.ಟಿ.ಪಾರ್ವತಿ ನಿರ್ಮಾಣದಲ್ಲಿ ಸಾಥ್‌ ಕೊಡುತ್ತಿದ್ದಾರೆ.

ಟಾಪ್ ನ್ಯೂಸ್

Dr surendra kumar jain

ಮಳಲಿ ಮಸೀದಿಯ ಸರ್ವೇ ನಡೆಯಬೇಕು, ಜನರು ಸತ್ಯ ತಿಳಿಯಲಿ: ಡಾ ಸುರೇಂದ್ರ ಕುಮಾರ್ ಜೈನ್

2shootout

ಕುಂದಾಪುರದ ಉದ್ಯಮಿ ಕಟ್ಟೆ ಭೋಜಣ್ಣ ಗುಂಡು ಹಾರಿಸಿಕೊಂಡು ಆತ್ಮಹತ್ಯೆ

1exam

ಸಾಮೂಹಿಕ ನಕಲು; ಬೀದರ್‌ ಪರೀಕ್ಷಾ ಕೇಂದ್ರ ರದ್ದು

ಕಾಶ್ಮೀರಿ ನಟಿಯ ಮನೆಯ ಮೇಲೆ ದಾಳಿ ಮಾಡಿ ಲಷ್ಕರ್ ಉಗ್ರರು; ನಟಿ ಸಾವು!

ಕಾಶ್ಮೀರಿ ನಟಿಯ ಮನೆಯ ಮೇಲೆ ದಾಳಿ ಮಾಡಿದ ಲಷ್ಕರ್ ಉಗ್ರರು; ನಟಿ ಸಾವು!

another student seen with rifle outside Texas school

ಟೆಕ್ಸಾಸ್ ಶೂಟೌಟ್ ಮರುದಿನವೇ ರೈಫಲ್ ಹಿಡಿದು ಶಾಲೆಗೆ ಬಂದ ಮತ್ತೋರ್ವ ವಿದ್ಯಾರ್ಥಿ

thumb 2

ವಿಜಯೇಂದ್ರ ಮುಂದೇನು? ಶುರುವಾಗಿದೆ ಲೆಕ್ಕಾಚಾರ ,ಸಿಗಲಿದೆಯೇ ಪ್ರ.ಕಾರ್ಯದರ್ಶಿ ಹುದ್ದೆ ?

ಬೋಟ್‌ ಆ್ಯಂಬುಲೆನ್ಸ್‌ ಪ್ರಸ್ತಾವನೆಯಲ್ಲೇ ಬಾಕಿ

ಬೋಟ್‌ ಆ್ಯಂಬುಲೆನ್ಸ್‌ ಪ್ರಸ್ತಾವನೆಯಲ್ಲೇ ಬಾಕಿಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Untitled-1

ಅಕಟಕಟ ತಂಡಕ್ಕೆ ಶ್ವೇತಾ ಎಂಟ್ರಿ

Untitled-1

ಸಾರಾ ವಜ್ರಕ್ಕೆ ಮೆಚ್ಚುಗೆ

ನಲಿದೇ ಬಿಟ್ಟಳು ವಾಸಂತಿ!

ನಲಿದೇ ಬಿಟ್ಟಳು ವಾಸಂತಿ!

ಲವ್‌ ಬರ್ಡ್ಸ್‌ನಲ್ಲಿ ಲವ್‌ ಮಾಕ್ಟೇಲ್‌ ಜೋಡಿ: ಹೊಸ ಚಿತ್ರದಲ್ಲಿ ಕೃಷ್ಣ-ಮಿಲನಾ

ಲವ್‌ ಬರ್ಡ್ಸ್‌ನಲ್ಲಿ ಲವ್‌ ಮಾಕ್ಟೇಲ್‌ ಜೋಡಿ: ಹೊಸ ಚಿತ್ರದಲ್ಲಿ ಕೃಷ್ಣ-ಮಿಲನಾ

ಥಿಯೇಟರ್‌ಗೆ ಬರ್ತಿದ್ದಾನೆ “ಕಿರಿಕ್‌ ಶಂಕರ್‌ “

ಥಿಯೇಟರ್‌ಗೆ ಬರ್ತಿದ್ದಾನೆ “ಕಿರಿಕ್‌ ಶಂಕರ್‌ “

MUST WATCH

udayavani youtube

ಮಣಿಪಾಲ : ಡಿವೈಡರ್ ಗೆ ಬೈಕ್ ಢಿಕ್ಕಿ, ವಿದ್ಯಾರ್ಥಿ ಸಾವು… ಇನ್ನೋರ್ವ ಗಂಭೀರ

udayavani youtube

IPL ಬೆಟ್ಟಿಂಗ್ ಗಾಗಿ ಠೇವಣಿದಾರರ ಹಣವನ್ನೇ ಬಳಸಿಕೊಂಡ ಪೋಸ್ಟ್ ಮಾಸ್ಟರ್

udayavani youtube

Wheel Chair Romeo actor exclusive interview | RELEASING ON MAY 27TH

udayavani youtube

ಶಿರಸಿ : ಬಲೆಯಲ್ಲಿ ಸಿಲುಕಿ ಒದ್ದಾಡುತ್ತಿದ್ದ ನಾಗರ ಹಾವಿನ ರಕ್ಷಣೆ

udayavani youtube

ಪುತ್ರನಿಗೆ ತಪ್ಪಿದ ಪರಿಷತ್ ಟಿಕೆಟ್ : ಬಿಎಸ್ ವೈ ಹೇಳಿದ್ದೇನು?

ಹೊಸ ಸೇರ್ಪಡೆ

Dr surendra kumar jain

ಮಳಲಿ ಮಸೀದಿಯ ಸರ್ವೇ ನಡೆಯಬೇಕು, ಜನರು ಸತ್ಯ ತಿಳಿಯಲಿ: ಡಾ ಸುರೇಂದ್ರ ಕುಮಾರ್ ಜೈನ್

2shootout

ಕುಂದಾಪುರದ ಉದ್ಯಮಿ ಕಟ್ಟೆ ಭೋಜಣ್ಣ ಗುಂಡು ಹಾರಿಸಿಕೊಂಡು ಆತ್ಮಹತ್ಯೆ

librery

ಪೆರ್ಮುದೆಯಲ್ಲಿ ಜಿಲ್ಲೆಯ ಪ್ರಥಮ ಬೀಕನ್‌ ಲೈಬ್ರೆರಿ

1

ಪಶ್ಚಿಮ ಶಿಕ್ಷಕರ ಕ್ಷೇತ್ರ ಪ್ರಭುತ್ವಕ್ಕೆ ಅಖಾಡ ಸಜ್ಜು

1exam

ಸಾಮೂಹಿಕ ನಕಲು; ಬೀದರ್‌ ಪರೀಕ್ಷಾ ಕೇಂದ್ರ ರದ್ದು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.