ಐ ಲವ್‌ ಯು ಆಡಿಯೋ ಬಿಡುಗಡೆ ಮುಂದಕ್ಕೆ 

Team Udayavani, Jan 19, 2019, 5:33 AM IST

ಎಲ್ಲವೂ ಅಂದುಕೊಂಡಂತೆ ಆಗಿದ್ದರೆ ಉಪೇಂದ್ರ ನಾಯಕರಾಗಿರುವ, ಆರ್‌.ಚಂದ್ರು ನಿರ್ದೇಶನದ “ಐ ಲವ್‌ ಯು’ ಚಿತ್ರದ ಆಡಿಯೋ ಬಿಡುಗಡೆಯ ಇಂದು ಸಂಜೆ (ಜ.19) ದಾವಣಗೆರೆಯಲ್ಲಿ ನಡೆಯಬೇಕಿತ್ತು. ಚಿತ್ರತಂಡ ಅದಕ್ಕೆ ಬೇಕಾದ ತಯಾರಿ ಕೂಡಾ ನಡೆಸಿತ್ತು. ಆದರೆ, ಈಗ ಚಿತ್ರತಂಡ ಆಡಿಯೋ ಬಿಡುಗಡೆಯನ್ನು ಮುಂದೂಡಿದೆ.

ಸಿದ್ದಗಂಗ ಮಠದ ಶ್ರೀಶಿವಕುಮಾರ ಸ್ವಾಮಿಗಳು ಅನಾರೋಗ್ಯದಲ್ಲಿರುವಾಗ ಹಾಡು ಬಿಡುಗಡೆ ಮಾಡಿ ಕುಣಿದು ಕುಪ್ಪಳಿಸುವುದು ಸರಿಯಲ್ಲ ಎಂಬ ಕಾರಣಕ್ಕೆ ಆಡಿಯೋ ಬಿಡುಗಡೆ ಕಾರ್ಯಕ್ರಮವನ್ನು ಮುಂದೂಡಿದೆ. ಈ ವಿಚಾರವನ್ನು ನಿರ್ದೇಶಕ ಉಪೇಂದ್ರ ಹಾಗೂ ಆರ್‌.ಚಂದ್ರು ಹೇಳಿಕೊಂಡಿದ್ದಾರೆ.

“ನಡೆದಾಡುವ ದೇವರು ಶ್ರೀ ಸಿದ್ದಗಂಗ ಮಹಾಸ್ವಾಮಿಯವರು ಅನಾರೋಗ್ಯದಲ್ಲಿರುವಾಗ ನಮ್ಮ “ಐ ಲವ್‌ ಯು’ ಚಿತ್ರದ ಹಾಡುಗಳನ್ನು ಬಿಡುಗಡೆ ಮಾಡಿ ಸಂಭ್ರಮಿಸುವುದು ಸೂಕ್ತವಲ್ಲ. ಹಾಗಾಗಿ 19ನೇ ತಾರೀಕು ಶನಿವಾರ ಸಂಜೆ ದಾವಣಗೆರೆಯಲ್ಲಿ ನಡೆಯಬೇಕಾಗಿದ್ದ ಹಾಡುಗಳ ಬಿಡುಗಡೆ ಕಾರ್ಯಕ್ರಮವನ್ನು ಮುಂದೂಡಿದ್ದೇವೆ.

ಶ್ರೀಗಳು ಆದಷ್ಟು ಬೇಗ ಚೇತರಿಸಿಕೊಳ್ಳಲಿ ಎಂದು ಆ ದೇವರಲ್ಲಿ ಪ್ರಾರ್ಥಿಸೋಣ’ ಎಂದು ಚಿತ್ರತಂಡ ಹೇಳಿದೆ. “ಐ ಲವ್‌ ಯು’ ಚಿತ್ರದ ಟ್ರೇಲರ್‌ ಈಗಾಗಲೇ ಬಿಡುಗಡೆಯಾಗಿದ್ದು, ಚಿತ್ರತಂಡ ಈಗ ಚಿತ್ರದ ಬಿಡುಗಡೆಗೆ ಸಿದ್ಧತೆ ಮಾಡಿಕೊಳ್ಳುತ್ತಿದೆ. ಚಿತ್ರದಲ್ಲಿ ರಚಿತಾ ರಾಮ್‌ ನಾಯಕಿಯಾಗಿ ನಟಿಸಿದ್ದಾರೆ. ಚಿತ್ರಕ್ಕೆ ಕಿರಣ್‌ ಸಂಗೀತ, ಸುಜ್ಞಾನ್‌ ಛಾಯಾಗ್ರಹಣವಿದೆ. 

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ