ತಮಿಳಿನತ್ತ “ಐ ಲವ್‌ ಯು’

Team Udayavani, Jun 19, 2019, 3:00 AM IST

ಆರ್‌. ಚಂದ್ರು ನಿರ್ಮಾಣ, ನಿರ್ದೇಶನದ ಉಪೇಂದ್ರ ನಾಯಕರಾಗಿರುವ “ಐ ಲವ್‌ ಯು’ ಚಿತ್ರ ಕಳೆದ ವಾರ ಬಿಡುಗಡೆಯಾಗಿ ಪ್ರೇಕ್ಷಕರಿಂದ ಮೆಚ್ಚುಗೆ ಪಡೆದುಕೊಂಡಿದೆ. ಉಪ್ಪಿ ಕಂಬ್ಯಾಕ್‌ ಸಿನಿಮಾ ಎಂದು ಹೇಳಲಾಗುತ್ತಿರುವ ಈ ಸಿನಿಮಾವನ್ನು ಉಪ್ಪಿ ಅಭಿಮಾನಿಗಳು ಸ್ವಲ್ಪ ಹೆಚ್ಚೇ ಇಷ್ಟಪಟ್ಟಿದ್ದಾರೆ.

ಕನ್ನಡವಷ್ಟೇ ಅಲ್ಲದೇ, ತೆಲುಗಿನಲ್ಲೂ ಚಿತ್ರ ಬಿಡುಗಡೆಯಾಗಿದೆ. ಈಗ ಬಂದಿರುವ ಸುದ್ದಿ ಪ್ರಕಾರ, ಚಿತ್ರ ತಮಿಳು ಚಿತ್ರರಂಗದ ಗಮನವನ್ನು ಸೆಳೆದಿದೆ. ಅಲ್ಲಿನ ನಿರ್ಮಾಪಕರಲ್ಲೊಬ್ಬರಾದ ಲಾಲ್‌ವಾನಿ ಎನ್ನುವವರು ನಿರ್ದೇಶಕ ಆರ್‌.ಚಂದ್ರು ಅವರನ್ನು ಕರೆಸಿಕೊಂಡು ಈಗಾಗಲೇ ಮಾತುಕತೆ ನಡೆಸಿದ್ದು, ಚಿತ್ರ ತಮಿಳಿಗೆ ರೀಮೇಕ್‌ ಆಗುವ ಸಾಧ್ಯತೆಗಳಿವೆ.

ಎಲ್ಲಾ ಓಕೆ, ಚಿತ್ರ ತಮಿಳಿಗೆ ರೀಮೇಕ್‌ ಆದರೆ, ಯಾರು ನಟಿಸುತ್ತಾರೆಂಬ ಪ್ರಶ್ನೆ ಸಹಜವಾಗಿಯೇ ಬರುತ್ತದೆ. ತಮಿಳಿನ ಖ್ಯಾತ ನಟರಾದ ಕಾರ್ತಿ ಅಥವಾ ವಿಜಯ್‌ ಸೇತುಪತಿ ಈ ಚಿತ್ರದಲ್ಲಿ ನಟಿಸುವ ಸಾಧ್ಯತೆ ಇದೆ ಎನ್ನಲಾಗಿದೆ. ಈಗಾಗಲೇ “ಚಾರ್‌ಮಿನಾರ್‌’ ಚಿತ್ರವನ್ನು ತೆಲುಗಿನಲ್ಲಿ ರೀಮೇಕ್‌ ಮಾಡಿರುವ ಚಂದ್ರು, ಈಗ ತಮಿಳಿನಲ್ಲೂ ನಿರ್ದೇಶನ ಮಾಡುವ ಸಾಧ್ಯತೆ ಇದೆ ಎನ್ನಲಾಗಿದೆ.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ