ಐ ಲವ್‌ ಯೂ ಟ್ರೇಲರ್‌ ಇಂದು ರಿಲೀಸ್‌

Team Udayavani, Dec 30, 2018, 5:49 AM IST

2019ರಲ್ಲಿ ನಿರೀಕ್ಷೆ ಹುಟ್ಟಿಸಿರುವ ಸ್ಟಾರ್‌ ಸಿನಿಮಾಗಳಲ್ಲಿ ಉಪೇಂದ್ರ ಅವರ “ಐ ಲವ್‌ ಯೂ’ ಚಿತ್ರ ಕೂಡಾ ಒಂದು. ಆರ್‌.ಚಂದ್ರು ನಿರ್ಮಾಣ, ನಿರ್ದೇಶನದ ಈ ಚಿತ್ರದ ಸ್ಟಿಲ್‌ಗ‌ಳು ಹಾಗೂ ಫ‌ಸ್ಟ್‌ಲುಕ್‌ ಟೀಸರ್‌ ಸಿನಿಮಾದ ಬಗೆಗಿನ ನಿರೀಕ್ಷೆಯನ್ನು ಹೆಚ್ಚಿಸಿರುವುದು ಸುಳ್ಳಲ್ಲ. ಆರ್‌.ಚಂದ್ರು ಅವರ ಸೆಂಟಿಮೆಂಟ್‌ ಜೊತೆಗೆ ಉಪೇಂದ್ರ ಶೈಲಿಯ ಸಿನಿಮಾ ಎಂದು ಈಗಾಗಲೇ ಬಿಂಬಿತವಾಗಿದೆ. ಸದ್ದಿಲ್ಲದೇ ಚಿತ್ರೀಕರಣ ಮುಗಿಸಿರುವ ಚಂದ್ರು, ಈಗ ಚಿತ್ರವನ್ನು ಬಿಡುಗಡೆಯ ಹಂತಕ್ಕೆ ತಂದಿದ್ದಾರೆ.

ಮೊದಲ ಹಂತವಾಗಿ ಇಂದು ಚಿತ್ರದ ಟ್ರೇಲರ್‌ ಬಿಡುಗಡೆಯಾಗುತ್ತಿದೆ. ನಗರದ ಅಶೋಕ ಹೋಟೆಲ್‌ನಲ್ಲಿ ಇಂದು ಸಂಜೆ ಚಿತ್ರದ ಟ್ರೇಲರ್‌ ಅದ್ಧೂರಿಯಾಗಿ ಬಿಡುಗಡೆಯಾಗುತ್ತಿದೆ. ಶಿವರಾಜಕುಮಾರ್‌ ಅವರು ಚಿತ್ರದ ಟ್ರೇಲರ್‌ ಬಿಡುಗಡೆ ಮಾಡಲಿದ್ದು, ಚಿತ್ರರಂಗದ ಅನೇಕ ಮಂದಿ ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಚಿತ್ರದ ಆಡಿಯೋ ಬಿಡುಗಡೆಯನ್ನು ಅದ್ಧೂರಿಯಾಗಿ ಮಾಡಲು ನಿರ್ದೇಶಕ ಆರ್‌.ಚಂದ್ರು ನಿರ್ಧರಿಸಿದ್ದು, ಜನವರಿ 12ರಂದು ದಾವಣಗೆರೆಯಲ್ಲಿ ಕಲರ್‌ಫ‌ುಲ್‌ ಆಗಿ ಚಿತ್ರದ ಆಡಿಯೋ ಬಿಡುಗಡೆಯಾಗಲಿದೆ.

ಸಂಗೀತ ರಸಮಂಜರಿ ಸೇರಿದಂತೆ ಹಲವು ಕಾರ್ಯಕ್ರಮಗಳು ನಡೆಯಲಿದೆ. ಚಿತ್ರ ಯಾವಾಗ ಬಿಡುಗಡೆ ಎಂದು ನೀವು ಕೇಳಬಹುದು. ಚಂದ್ರು ಈ ಬಾರಿ ಪಕ್ಕಾ ಪ್ಲ್ರಾನ್‌ ಮಾಡಿಕೊಂಡಿದ್ದು, ಫೆಬ್ರವರಿ 14 ರಂದು ಚಿತ್ರ ಬಿಡುಗಡೆಯಾಗಲಿದೆ. ಫೆಬ್ರವರಿ 14 ರಂದು ಚಿತ್ರ ಬಿಡುಗಡೆ ಮಾಡಲು ಒಂದು ಕಾರಣವಿದೆ. ಅದು ಚಿತ್ರದ ಕಥೆ. ಆರ್‌.ಚಂದ್ರು ಪ್ರೀತಿ-ಪ್ರೇಮ ಕುರಿತು ಚಿತ್ರದ ಕಥೆ ಸಾಗಲಿದ್ದು, ಈ ಚಿತ್ರ ಪ್ರೇಮಿಗಳಿಗೆ ಹೆಚ್ಚು ಇಷ್ಟವಾಗಲಿದೆಯಂತೆ.

ಆ ಕಾರಣದಿಂದ ಫೆಬ್ರವರಿ 14 ರಂದು ಚಿತ್ರ ಬಿಡುಗಡೆ ಮಾಡಲು ಚಿತ್ರತಂಡ ಮುಂದಾಗಿದೆ. ಚಿತ್ರದಲ್ಲಿ ರಚಿತಾ ರಾಮ್‌ ನಾಯಕಿಯಾಗಿ ನಟಿಸಿದ್ದು, ಪಾತ್ರಕ್ಕೆ ತಕ್ಕಂತೆ ಸಖತ್‌ ಬೋಲ್ಡ್‌ ಆಗಿ ಕಾಣಿಸಿಕೊಂಡಿದ್ದಾರೆ. ಅಂದಹಾಗೆ, ಉಪೇಂದ್ರ ಹಾಗೂ ಆರ್‌.ಚಂದ್ರು ಕಾಂಬಿನೇಶನ್‌ನಲ್ಲಿ ಈ ಹಿಂದೆ “ಬ್ರಹ್ಮ’ ಚಿತ್ರ ಬಂದಿದ್ದು, ಚಿತ್ರದ ಬಗ್ಗೆ ಮೆಚ್ಚುಗೆ ವ್ಯಕ್ತವಾಗಿತ್ತು. ಈಗ ಅವರಿಬ್ಬರ ಕಾಂಬಿನೇಶನ್‌ನಲ್ಲಿ ಬರುತ್ತಿರುವ “ಐ ಲವ್‌ ಯೂ’ ಚಿತ್ರ ಕೂಡಾ ನಿರೀಕ್ಷೆ ಹುಟ್ಟುಹಾಕಿದೆ. 

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ