“ಪಂಥ’ದಲ್ಲಿ ನಾನು ನಟಿಸುತ್ತಿಲ್ಲ: ರಚಿತಾ ರಾಮ್‌

Team Udayavani, Nov 13, 2019, 6:03 AM IST

ನಟಿ ರಚಿತಾ ರಾಮ್‌ ಸಿನಿಮಾ ಮೇಲೆ ಸಿನಿಮಾ ಮಾಡುತ್ತಿರುವುದು ನಿಮಗೆ ಗೊತ್ತೇ ಇದೆ. ಅನೇಕ ಸಿನಿಮಾಗಳಲ್ಲಿ ಅವರ ಹೆಸರು ಕೇಳಿ ಬರುತ್ತಲೇ ಇರುತ್ತದೆ. ಹಾಗೆ “ಪಂಥ’ ಎಂಬ ಸಿನಿಮಾದಲ್ಲೂ ರಚಿತಾ ರಾಮ್‌ ನಾಯಕಿ ಎಂದು ಹೇಳಲಾಗಿತ್ತು. ವಿ.ನಾಗೇಂದ್ರ ಪ್ರಸಾದ್‌ ನಿರ್ದೇಶನದಲ್ಲಿ ವಸಿಷ್ಠ ಸಿಂಹ ನಾಯಕರಾಗಿರುವ ಈ ಚಿತ್ರದಲ್ಲಿ ರಚಿತಾ ಹೆಸರು ಕೂಡಾ ಕೇಳಿಬಂದಿತ್ತು.

ಆದರೆ, ಈಗ ಆ ಚಿತ್ರದಲ್ಲಿ ತಾನು ನಟಿಸುತ್ತಿಲ್ಲ ಎಂದು ಸ್ವತಃ ರಚಿತಾ ಹೇಳಿದ್ದಾರೆ. “100′ ಚಿತ್ರದ ಪತ್ರಿಕಾಗೋಷ್ಠಿ ಬಳಿಕ ಪತ್ರಕರ್ತರ ಜೊತೆ ಮಾತನಾಡಿದ ರಚಿತಾ, ತಾವು “ಪಂಥ’ ಚಿತ್ರದಲ್ಲಿ ನಟಿಸುತ್ತಿಲ್ಲ. ಆರಂಭದಲ್ಲಿ ಕಥೆ ಕೇಳಿದ್ದು ನಿಜ. ಆದರೆ ಈಗಲೂ ಆ ಚಿತ್ರದಲ್ಲಿ ನನ್ನ ಹೆಸರು ಕೇಳಿಬರುತ್ತಿದೆ’ ಎನ್ನುವ ಮೂಲಕ ತಾವು ಆ ಚಿತ್ರದಲ್ಲಿಲ್ಲ ಎನ್ನುತ್ತಾರೆ.

ಈ ನಡುವೆಯೇ ರಚಿತಾ ತೆಲುಗು ಚಿತ್ರರಂಗದತ್ತ ಮುಖ ಮಾಡಿದ್ದು, ಬಾಲಯ್ಯ ಚಿತ್ರದಲ್ಲಿ ನಾಯಕಿಯಾಗಿ ನಟಿಸುತ್ತಾರೆಂಬ ಸುದ್ದಿ ಹಬ್ಬಿದೆ. ಆದರೆ, ರಚಿತಾ ಮಾತ್ರ ಈ ಬಗ್ಗೆ ಏನನ್ನೂ ಹೇಳಲು ತಯಾರಿಲ್ಲ. “ಸದ್ಯಕ್ಕೆ ಏನೂ ಹೇಳುವುದಿಲ್ಲ. ಮೂರು ದಿನ ಬಿಟ್ಟು ಎಲ್ಲಾ ವಿಚಾರದ ಬಗ್ಗೆ ಮಾತನಾಡುತ್ತೇನೆ’ ಎನ್ನುತ್ತಾರೆ. “ಆಯುಷ್ಮಾನ್‌ ಭವ’ ಚಿತ್ರದ ಪ್ರಚಾರದಿಂದ ದೂರ ಉಳಿದ ಬಗ್ಗೆ ಪ್ರಶ್ನಿಸಿದರೆ ಆ ಬಗ್ಗೆ ಹೆಚ್ಚು ಮಾತನಾಡುವ ಆಸಕ್ತಿ ತೋರಿಸಲಿಲ್ಲ.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ