Udayavni Special

ನಾನು ಹೀರೋ ಮೆಟಿರೀಯಲ್‌ ಅಲ್ಲ


Team Udayavani, Jun 12, 2018, 10:59 AM IST

danish-sait.jpg

ದಾನಿಶ್‌ ಸೇಠ್ ಮತ್ತೆ ಬಂದಿದ್ದಾರೆ!  ಹೌದು, “ಹಂಬಲ್‌ ಪೊಲಿಟಿಷಿಯನ್‌ ನೋಗ್‌ರಾಜ್‌’ ಬಳಿಕ ದಾನಿಶ್‌ ಸೇಠ್ ಸೀದಾ ವಿದೇಶಕ್ಕೆ ಹಾರಿದ್ದರು. ಅಲ್ಲಿಗೆ ಹೋಗಿದ್ದು ಒಂದಷ್ಟು ಕಲಿಕೆಗಾಗಿ. ಈಗ ಪುನಃ ಹಿಂದಿರುಗಿರುವ ದಾನಿಶ್‌ ಸೇಠ್, ಹೊಸ ಚಿತ್ರವೊಂದರಲ್ಲಿ ನಟಿಸುತ್ತಿದ್ದಾರೆ. ಆ ಚಿತ್ರಕ್ಕೆ “ಸೋಲ್ಡ್‌’ ಎಂದು ಹೆಸರಿಡಲಾಗಿದೆ. ಪ್ರೇರಣ ಈ ಚಿತ್ರದ ನಿರ್ದೇಶಕರು. ಇನ್ನು, ಅಗರ್‌ವಾಲ್‌ ಮತ್ತು ದೀಪಂ ಕೋಯ್ಲಿ ಸಿನಿಮಾವನ್ನು ನಿರ್ಮಿಸುತ್ತಿದ್ದಾರೆ. ಇದು ಇವರ ಮೊದಲ ಚಿತ್ರ.

ನ್ಯೂಯಾರ್ಕ್‌ನಲ್ಲಿ ಓದಿದ್ದ ಇವರು ಕನ್ನಡದಲ್ಲಿ ಒಂದೊಳ್ಳೆಯ ಚಿತ್ರ ಮಾಡಬೇಕು ಎಂಬ ಉತ್ಸಾಹದಿಂದ “ಸೋಲ್ಡ್‌’ ಚಿತ್ರಕ್ಕೆ ಅಣಿಯಾಗಿದ್ದಾರೆ. ದಾನಿಶ್‌ ಸೇಠ್ ಅವರ ಪ್ರಕಾರ, ಇದೊಂದು ತುಂಬಾ ಗಂಭೀರವಾಗಿರುವ ಸಿನಿಮಾವಂತೆ. ಅವರೇ ಹೇಳುವಂತೆ, “ನಾನು ನನ್ನ ಲೈಫ‌ಲ್ಲಿ ಸದಾ ಹಾಸ್ಯಪ್ರಜ್ಜೆ ಇಟ್ಟುಕೊಂಡವನು. ಆದರೆ, ಈ ಚಿತ್ರದಲ್ಲಿ ತುಂಬಾನೇ ಗಂಭೀರವಾಗಿರುವಂತಹ ಪಾತ್ರವಿದೆ. ನನಗೆ ಇದೊಂದು ಅನುಭವ ಅಂದುಕೊಂಡಿದ್ದೇನೆ.

ಮೊದಲ ಚಿತ್ರ ಬೇರೆ ಜಾನರ್‌ನಲ್ಲಿತ್ತು. ಅಲ್ಲಿ ಕಾಮಿಡಿಯಾಗಿ ವಕೌìಟ್‌ ಆಗಿತ್ತು. ಆದರೆ, ಇದು ಬೇರೆ ರೀತಿಯ ಚಿತ್ರವಾದ್ದರಿಂದ ನನಗೊಂದು ಹೊಸ ಪ್ರಯೋಗ ಅಂದುಕೊಂಡು ಮಾಡುತ್ತಿದ್ದೇನೆ’ ಎಂದು ಹೇಳುತ್ತಾರೆ ಅವರು. ಈ ಚಿತ್ರಕ್ಕೆ ಕಾವ್ಯಾಶೆಟ್ಟಿ ನಾಯಕಿ. ಎಲ್ಲವೂ ಹೊಸದಾಗಿರಲಿದೆ ಎಂದು ವಿವರ ಕೊಡುವ ದಾನಿಶ್‌ ಸೇಠ್, “ಕಳೆದ ನಾಲ್ಕು ವರ್ಷಗಳಿಂದ ಸೂಕ್ಷ್ಮವಾಗಿ ಗಮನಿಸಿದರೆ, ಕನ್ನಡದಲ್ಲಿ ಹೊಸಬಗೆಯ ಚಿತ್ರಗಳು ಬರುತ್ತಿವೆ.

ಆದರೆ, ಎಲ್ಲವೂ ಕಮರ್ಷಿಯಲ್‌ ಚಿತ್ರಗಳಾಗಿಯೇ ಇರಬೇಕೆಂದಿಲ್ಲ. ಆ ನಿಟ್ಟಿನಲ್ಲಿ ಸಾಗುವ ಚಿತ್ರವಿದು. ಇಲ್ಲಿ ಥ್ರಿಲ್ಲಿಂಗ್‌ ಅಂಶಗಳು ಇರಲಿವೆ. ಇಲ್ಲಿ ಎಲ್ಲವೂ ಕಾವ್ಯಾ ಶೆಟ್ಟಿಯದ್ದೇ. ನಾನು ಕೇವಲ ಅವರೊಂದಿಗಿರುತ್ತೇನಷ್ಟೇ. ಹಾಗಂತ ನಾನಿಲ್ಲಿ ಹೀರೋ ಅಲ್ಲ. ಹೀರೋ ಮೆಟಿರೀಯಲ್‌ ಕೂಡ ಅಲ್ಲ. ಆ ಕ್ವಾಲಿಟಿ ನನ್ನಲಿದೆಯೋ ಗೊತ್ತಿಲ್ಲ. ರೆಗ್ಯುಲರ್‌ ಸಿನಿಮಾಗಿಂತ ಕೊಂಚ ವಿಭಿನ್ನವಾಗಿರುವ “ಸೋಲ್ಡ್‌’ ಚಿತ್ರ ಕನ್ನಡಿಗರಿಗೆ ಖಂಡಿತ ಇಷ್ಟವಾಗುತ್ತೆ ಎಂದುಕೊಂಡಿದ್ದೇನೆ’ ಎನ್ನುತ್ತಾರೆ ದಾನಿಶ್‌.

ಹಾಗೆ ನೋಡಿದರೆ, “ಹಂಬಲ್‌…’ ಚಿತ್ರದ ನಂತರ ಸಾಕಷ್ಟು ಕಾಮಿಡಿ ಕಥೆಗಳು ಬಂದವಂತೆ. ಆದರೆ, ದಾನಿಶ್‌ ಮಾತ್ರ ಹೊಸದೇನನ್ನೋ ಬಯಸುತ್ತಿದ್ದರಂತೆ. “ಸೋಲ್ಡ್‌’ ಅಂಥದ್ದೊಂದು ಹೊಸತನ ಹೊಂದಿದೆ. ಇನ್ನು, ಪನ್ನಗಭರಣ ಜೊತೆಗೊಂದು ಮಾತುಕತೆ ನಡೆಯುತ್ತಿದೆ. ನನ್ನ ಚಿತ್ರ ಬಂದು ಒಂದು ವರ್ಷವೂ ಆಗಿಲ್ಲ. ಆಗಲೇ, ಇನ್ನೊಂದು ಸಿನಿಮಾ ಮಾಡುತ್ತಿದ್ದೇನೆ.

ನನಗೆ ಹೀರೋ ಆಗಬೇಕು, ಸೆಲೆಬ್ರೆಟಿ ಅನಿಸಿಕೊಳ್ಳಬೇಕೆಂಬ ಆಸೆ ಇಲ್ಲ. ಈ ರೀತಿಯ ಕಥೆ ಇದ್ದರೆ ಮಾತ್ರ ಆಯ್ಕೆ ಮಾಡಿಕೊಳ್ತೀನಿ. ಆದರೂ, ಇಲ್ಲಿ ಗಂಭೀರವಾದ ಕಥೆ, ಪಾತ್ರ ಇದೆ. ಜನರು ಹೇಗೆ ಸ್ವೀಕರಿಸುತ್ತಾರೋ ಎಂಬ ಬಗ್ಗೆ ಕುತೂಹಲವೂ ಇದೆ. ಈಗಾಗಲೇ ಚಿತ್ರೀಕರಣ ಶುರುವಾಗಿದೆ. ಬೆಂಗಳೂರು ಸುತ್ತಮುತ್ತ ಸುಮಾರು 40 ದಿನಗಳ ಕಾಲ ಚಿತ್ರೀಕರಣ ನಡೆಯಲಿದೆ’ ಎಂದು ಮಾಹಿತಿ ಕೊಡುತ್ತಾರೆ ದಾನಿಶ್‌ ಸೇಠ್.

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

ಮಾರಕ ವೈರಸ್ ಸೃಷ್ಟಿಸಿ ಚೀನಾಗೆ ಮಾರಿದರೇ ಹಾರ್ವರ್ಡ್‌ ವಿ.ವಿ. ಪ್ರೊಫೆಸರ್?

ಮಾರಕ ವೈರಸ್ ಸೃಷ್ಟಿಸಿ ಚೀನಾಗೆ ಮಾರಿದರೇ ಹಾರ್ವರ್ಡ್‌ ವಿ.ವಿ. ಪ್ರೊಫೆಸರ್?

ಮೃಗಾಲಯದಲ್ಲಿದ್ದ ಹುಲಿಯನ್ನೂ ಬಿಡದ ಮಹಾಮಾರಿ ಕೋವಿಡ್!

ಮೃಗಾಲಯದಲ್ಲಿದ್ದ ಹುಲಿಯನ್ನೂ ಬಿಡದ ಮಹಾಮಾರಿ ಕೋವಿಡ್!

ತಮಿಳುನಾಡಿನಲ್ಲಿ ಒಂದೇ ದಿನ 63 ಕೋವಿಡ್ 19 ಪ್ರಕರಣ ಪತ್ತೆ, ಸಾವಿನ ಸಂಖ್ಯೆ 7ಕ್ಕೆ ಏರಿಕೆ

ತಮಿಳುನಾಡಿನಲ್ಲಿ ಒಂದೇ ದಿನ 63 ಕೋವಿಡ್ 19 ಪ್ರಕರಣ ಪತ್ತೆ, ಸಾವಿನ ಸಂಖ್ಯೆ 7ಕ್ಕೆ ಏರಿಕೆ

ಚೀನದಲ್ಲಿ ಎರಡನೇ ಹಂತದ ಸೋಂಕು? ; ಪತ್ತೆಯಾಯ್ತು 39 ಹೊಸ ಪ್ರಕರಣಗಳು

ಚೀನದಲ್ಲಿ ಎರಡನೇ ಹಂತದ ಸೋಂಕು? ; ಪತ್ತೆಯಾಯ್ತು 39 ಹೊಸ ಪ್ರಕರಣಗಳು

ಕೋವಿಡ್ 19 ವೈರಸ್: ನ್ಯೂಯಾರ್ಕ್ ನಲ್ಲಿ ಒಂದೇ ದಿನ 731 ಸಾವು, ರೋಗಿಗಳ ಸಂಖ್ಯೆ ಇಳಿಮುಖ

ಕೋವಿಡ್ 19 ವೈರಸ್: ನ್ಯೂಯಾರ್ಕ್ ನಲ್ಲಿ ಒಂದೇ ದಿನ 731 ಸಾವು, ರೋಗಿಗಳ ಸಂಖ್ಯೆ ಇಳಿಮುಖ

ಮಹಾರಾಷ್ಟ್ರ: ಒಂದು ಸಾವಿರ ದಾಟಿದ ಕೋವಿಡ್ 19 ವೈರಸ್ ಸೋಂಕಿತರ ಸಂಖ್ಯೆ, 40 ಮಂದಿ ಸಾವು

ಮಹಾರಾಷ್ಟ್ರ: ಒಂದು ಸಾವಿರ ದಾಟಿದ ಕೋವಿಡ್ 19 ವೈರಸ್ ಸೋಂಕಿತರ ಸಂಖ್ಯೆ, 40 ಮಂದಿ ಸಾವು

ಜಮ್ಮು-ಕಾಶ್ಮೀರ: ಉಗ್ರರ ಗ್ರೆನೇಡ್ ದಾಳಿ ಸಿಆರ್ ಪಿಎಫ್ ಯೋಧ ಹುತಾತ್ಮ, ಸೇನೆಯಿಂದ ಪ್ರತಿದಾಳಿ

ಜಮ್ಮು-ಕಾಶ್ಮೀರ: ಉಗ್ರರ ಗ್ರೆನೇಡ್ ದಾಳಿ ಸಿಆರ್ ಪಿಎಫ್ ಯೋಧ ಹುತಾತ್ಮ, ಸೇನೆಯಿಂದ ಪ್ರತಿದಾಳಿ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ವಿಷ್ಣು ಪ್ರಿಯ ಫ‌ಸ್ಟ್‌ ಲುಕ್‌ ರಿಲೀಸ್‌

ವಿಷ್ಣು ಪ್ರಿಯ ಫ‌ಸ್ಟ್‌ ಲುಕ್‌ ರಿಲೀಸ್‌

ಕಣ್ಸನ್ನೆ ಹುಡುಗಿಯ ಕನ್ನಡ ಮಾತು

ಕಣ್ಸನ್ನೆ ಹುಡುಗಿಯ ಕನ್ನಡ ಮಾತು

ಬಿಟ್‌ಸಾಂಗ್‌ನಲ್ಲೇ ಲವ್‌, ಮದುವೆ, ಮಕ್ಕಳು…

ಬಿಟ್‌ಸಾಂಗ್‌ನಲ್ಲೇ ಲವ್‌, ಮದುವೆ, ಮಕ್ಕಳು…

ಸುಳ್ಳು ಸುದ್ದಿಗೆ ಗರಂ

ಸುಳ್ಳು ಸುದ್ದಿಗೆ ಗರಂ

ಡಾ. ರಾಜ್‌ ಸಿನಿ ಸಂಭ್ರಮ

ಡಾ. ರಾಜ್‌ ಸಿನಿ ಸಂಭ್ರಮ

MUST WATCH

udayavani youtube

Kundapura: ಖಾಲಿ ರಸ್ತೆಯಲ್ಲೂ ಅಪಘಾತ! CCTVಯಲ್ಲಿ ದಾಖಲಾಯ್ತು ಅಪಘಾತದ ದೃಶ್ಯ

udayavani youtube

Shivamogga ಜ್ವರದಿಂದ ಬಳಲುತ್ತಿದ್ದರೂ ಆದೇಶ ಉಲ್ಲಂಘಿಸಿ ನಮಾಜ್ ನಲ್ಲಿ ಭಾಗಿಯಾದರು

udayavani youtube

Covid 19 ಸೋಂಕು ತಡೆಗೆ ಕಾಗಿನೆಲೆ ಕನಕ ಗುರುಪೀಠದ ಶ್ರೀ ನಿರಂಜನಾನಂದ ಪುರಿ ಸ್ವಾಮೀಜಿ ಸಂದೇಶ

udayavani youtube

Udyavara Jamia Masjid ಮೈಕ್ ನಲ್ಲಿ ಮೊಳಗುತ್ತಿದೆ ಕೋವಿಡ್ ಮಹಾಮಾರಿ ಜಾಗೃತಿ ಸಂದೇಶ

udayavani youtube

ಒಂದೆರಡು ದಿನಗಳಲ್ಲಿ ರೈತರ ಎಲ್ಲಾ ಸಮಸ್ಯೆ ಸರಿಹೋಗಲಿದೆ : ಕೃಷಿ ಸಚಿವರಿಂದ ರೈತರಿಗೆ ಅಭಯ

ಹೊಸ ಸೇರ್ಪಡೆ

ಗಂಡನ ಬೈಕ್‌ ಸುತ್ತಾಟ: ಪತ್ನಿಯ ದೂರು

ಗಂಡನ ಬೈಕ್‌ ಸುತ್ತಾಟ: ಪತ್ನಿಯ ದೂರು

ಮಾನಸಿಕ ಸಮಸ್ಯೆ ಹೆಚ್ಚಿಸಿದ ಕೋವಿಡ್ 19 ವೈರಸ್

ಮಾನಸಿಕ ಸಮಸ್ಯೆ ಹೆಚ್ಚಿಸಿದ ಕೋವಿಡ್ 19 ವೈರಸ್

ಜರ್ಮನಿ, ದ. ಕೊರಿಯಾ ಮಾದರಿಯಾಗಲಿ ; ವ್ಯಾಪಕ ಪರೀಕ್ಷೆ, ಕಟ್ಟು ನಿಟ್ಟಿನ ಕ್ರಮ

ಜರ್ಮನಿ, ದ. ಕೊರಿಯಾ ಮಾದರಿಯಾಗಲಿ ; ವ್ಯಾಪಕ ಪರೀಕ್ಷೆ, ಕಟ್ಟು ನಿಟ್ಟಿನ ಕ್ರಮ

ಮಾರಕ ವೈರಸ್ ಸೃಷ್ಟಿಸಿ ಚೀನಾಗೆ ಮಾರಿದರೇ ಹಾರ್ವರ್ಡ್‌ ವಿ.ವಿ. ಪ್ರೊಫೆಸರ್?

ಮಾರಕ ವೈರಸ್ ಸೃಷ್ಟಿಸಿ ಚೀನಾಗೆ ಮಾರಿದರೇ ಹಾರ್ವರ್ಡ್‌ ವಿ.ವಿ. ಪ್ರೊಫೆಸರ್?

PCRಗಿಂತ ಆ್ಯಂಟಿ ಬಾಡಿ ರ್ಯಾಪಿಡ್ ಟೆಸ್ಟ್ ಯಾಕೆ ಬೆಸ್ಟ್?

ಕೋವಿಡ್ ವೈರಸ್ ಸೋಂಕು ಪತ್ತೆಯಲ್ಲಿ PCRಗಿಂತ ಆ್ಯಂಟಿ ಬಾಡಿ ರ್ಯಾಪಿಡ್ ಟೆಸ್ಟ್ ಯಾಕೆ ಬೆಸ್ಟ್?