ಇನ್ಸ್ಪೆಕ್ಟರ್ ವಿಕ್ರಂ ಜಪದಲ್ಲಿ ಪ್ರಜ್ವಲ್
Team Udayavani, May 6, 2020, 12:48 PM IST
ಈ ವರ್ಷದ ಆರಂಭದಲ್ಲಿ ತೆರೆಮೇಲೆ ಜಂಟಲ್ ಮನ್ ಗೆಟಪ್ ನಲ್ಲಿ ಸಿನಿ ಪ್ರೇಕ್ಷಕರ ಮುಂದೆ ಹಾಜರಾಗಿದ್ದವರು ನಟ ಪ್ರಜ್ವಲ್ ದೇವರಾಜ್. ಜಂಟಲ್ ಮನ್ ಚಿತ್ರದ ಬಗ್ಗೆ ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿದ್ದರು. ಆದರೆ ಅದೇನಾಯ್ತೋ ಏನೋ, ಜಂಟಲ್ ಮನ್ ಚಿತ್ರಕ್ಕೆ ಚಿತ್ರರಂಗದವರಿಂದ ಮತ್ತು ವಿಮರ್ಶಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾದರೂ, ಚಿತ್ರ ಬಾಕ್ಸಾ ಫೀಸ್ ನಲ್ಲಿ ಅಂದುಕೊಂಡ ಮಟ್ಟಗೆ ಸದ್ದು ಮಾಡಲಿಲ್ಲ. ಈಗ ನಟ ಪ್ರಜ್ವಲ್ ದೇವರಾಜ್, ಜಂಟಲ್ ಮನ್ ಗುಂಗಿನಿಂದ ಹೊರಬಂದು ಖಾಕಿ ಖದರ್ ನಲ್ಲಿ ಖಡಕ್ ಎಂಟ್ರಿಕೊಡೋದಕ್ಕೆ ರೆಡಿಯಾಗಿದ್ದಾರೆ.
ಹೌದು, ಸದ್ಯ ಪ್ರಜ್ವಲ್ ದೇವರಾಜ್ ಇನ್ಸ್ ಪೆಕ್ಟರ್ ವಿಕ್ರಂ ಚಿತ್ರದ ಮೂಲಕ ಮತ್ತೂಂದು ಮಾಸ್ ಎಂಟ್ರಿ ಕೊಡೋದಕ್ಕೆ ರೆಡಿಯಾಗುತ್ತಿದ್ದಾರೆ. ಈಗಾಗಲೇ ತನ್ನ ಬಹುತೇಕ ಕೆಲಸ ಪೂರ್ಣಗೊಳಿಸಿರುವ ಇನ್ಸ್ ಪೆಕ್ಟರ್ ವಿಕ್ರಂ ಇಷ್ಟೊತ್ತಿಗಾಗಲೇ ತೆರೆಗೆ ಬರಬೇಕಿತ್ತು. ಆದರೆ, ಕೋವಿಡ್ ಲಾಕ್ ಡೌನ್ ಅದೆಲ್ಲದಕ್ಕೂ ಬ್ರೇಕ್ ಹಾಕಿದೆ.