ಹೊಸಬರ ಇನ್ಸ್ಟಂಟ್ ಕರ್ಮ ರಿಲೀಸ್‌ಗೆ ರೆಡಿ
Team Udayavani, Jan 25, 2022, 11:25 AM IST
ಯಾವುದೇ ಒಳ್ಳೆಯ ಕೆಲಸ ಅಥವಾ ಕೆಟ್ಟ ಕೆಲಸ ಮಾಡಿದರೂ, ಅದರ ಕರ್ಮಫಲ ಹಿಂಬಾಲಿಸುತ್ತದೆ ಅನ್ನೋ ವಾಕ್ಯವನ್ನು ನೀವು ಕೇಳಿರಬಹುದು. ಈಗ ಇದೇ ಸಾಲುಗಳನ್ನು ಇಟ್ಟುಕೊಂಡು ಇಲ್ಲೊಂದು ತಂಡ “ಇನ್ಸ್ಟಂಟ್ ಕರ್ಮ’ ಎಂಬ ಹೆಸರಿನಲ್ಲಿ ಗ್ಯಾಂಗ್‌ಸ್ಟರ್ ಕ್ರೈಂ-ಥ್ರಿಲ್ಲರ್ ಚಿತ್ರವೊಂದನ್ನು ತೆರೆಗೆ ತರಲು ತಯಾರಾಗುತ್ತಿದೆ.
ಹೌದು, ಈ ಹಿಂದೆ “ಡಿ.ಕೆ ಬೋಸ್’ ಎಂಬ ಚಿತ್ರವನ್ನು ನಿರ್ದೇಶಿಸಿದ್ದ ಸಂದೀಪ್ ಮಹಾಂತೇಶ್, ಇಂಥದ್ದೊಂದು ಚಿತ್ರಕ್ಕೆ ಆ್ಯಕ್ಷನ್-ಕಟ್ ಹೇಳಿದ್ದಾರೆ.
ಇನ್ನು ” ಇನ್ಸ್ಟಂಟ್ ಕರ್ಮ ಚಿತ್ರದಲ್ಲಿ ಯಶ್ ಶೆಟ್ಟಿ, “ಸಲಗ’ ಖ್ಯಾತಿಯ ಕೆಂಡ ಶ್ರೇಷ್ಠ, ಅಂಜನ್ ದೇವ್, ಪ್ರಜ್ವಲ್ ಶೆಟ್ಟಿ, ಹರಿ ಮೊದಲಾದವರು ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ.
” ಇನ್ಸ್ಟಂಟ್ ಕರ್ಮ ಚಿತ್ರಕ್ಕೆ ಭಾಸ್ಕರ್ ರೆಡ್ಡಿ ಛಾಯಾಗ್ರಹಣ, ಸುರೇಶ್ ಆರ್ಮುಗಂ ಸಂಕಲನವಿದೆ. ಚಿತ್ರದ ಹಾಡುಗಳಿಗೆ ಸೂರಜ್ ಜೋಯಿಸ್ ಸಂಗೀತ ಸಂಯೋಜಿಸಿದ್ದಾರೆ. “ಬ್ರೇಕ್‌ಫ್ರೀ ಸಿನಿಮಾಸ್’ ಬ್ಯಾನರ್ ಅಡಿಯಲ್ಲಿ ಸಂತೋಷ್ ಮಹಾಂತೇಶ್ ” ಇನ್ಸ್ಟಂಟ್ ಕರ್ಮ ಚಿತ್ರಕ್ಕೆ ಬಂಡವಾಳ ಹೂಡಿ ನಿರ್ಮಿಸಿದ್ದಾರೆ.
ಸದ್ಯ ನಿಧಾನವಾಗಿ ” ಇನ್ಸ್ಟಂಟ್ ಕರ್ಮ” ಚಿತ್ರದ ಪ್ರಚಾರ ಕಾರ್ಯಗಳಿಗೆ ಚಾಲನೆ ನೀಡಿರುವ ಚಿತ್ರತಂಡ, ಇದೇ ಜನವರಿ 28 ರಂದು ಚಿತ್ರದ ಫಸ್ಟ್‌ಲುಕ್ ಪೋಸ್ಟರ್ ಬಿಡುಗಡೆ ಮಾಡುವ ಯೋಜನೆಯಲ್ಲಿದೆ. ಅದಾದ ಬಳಿಕ ಚಿತ್ರದ ಪ್ರಮೋಷನಲ್ ಹಾಡು, ಟ್ರೇಲರ್ ಬಿಡುಗಡೆಯಾಗಲಿದ್ದು, ಎಲ್ಲ ಅಂದುಕೊಂಡಂತೆ ನಡೆದರೆ, ಇದೇ ಮಾರ್ಚ್ ವೇಳೆಗೆ ” ಇನ್ಸ್ಟಂಟ್ ಕರ್ಮ” ತೆರೆಗೆ ಬರುವ ಸಾಧ್ಯತೆ ಇದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
‘ಕಟ್ಟಿಂಗ್ ಶಾಪ್’ನಲ್ಲಿ ರ್ಯಾಪ್ ಸಾಂಗ್!
ಥಿಯೇಟರ್ ನಲ್ಲಿ ‘ಟ್ವೆಂಟಿ ಒನ್ ಹವರ್ಸ್’; ಡಾಲಿ ಅಭಿನಯದ ಚಿತ್ರ ಮೇ.20ಕ್ಕೆ ರಿಲೀಸ್
ಗರುಡ ಜೊತೆ ಐಂದ್ರಿತಾ ಎಂಟ್ರಿ; ಮೇ 20ಕ್ಕೆ ಚಿತ್ರ ತೆರೆಗೆ
ತಾ ಮುಂದು, ನಾ ಮುಂದು ಎನ್ನುತ್ತಿರುವ ಹೊಸಬರು; ಈ ವಾರ ಹತ್ತು ಚಿತ್ರಗಳು ತೆರೆಗೆ?
‘ವೀಲ್ ಚೇರ್’ ನಲ್ಲಿ ರಾಮ್ ಚೇತನ್; ಚೊಚ್ಚಲ ಚಿತ್ರದ ಬಗ್ಗೆ ರೋಮಿಯೋ ನಿರೀಕ್ಷೆಯ ಮಾತು…