ಐಫೋನ್‌ ಸಿನಿಮಾ

Team Udayavani, Oct 31, 2017, 10:35 AM IST

ಸಂದೀಪ್‌ ಮಲಾನಿ ಅವರು “ಮಾ ಹೇ ಸಿನಿಮಾ ಹೈ’ ಎಂಬ ಹಿಂದಿ ಸಿನಿಮಾವೊಂದನ್ನು ಸದ್ದಿಲ್ಲದೇ ಮಾಡಿದ್ದಾರೆ. ಈ ಸಿನಿಮಾದ ವಿಶೇಷವೆಂದರೆ ಇಡೀ ಸಿನಿಮಾವನ್ನು ಐಫೋನ್‌ ನಲ್ಲಿ ಶೂಟ್‌ ಮಾಡಿರುವುದು. ಈ ಚಿತ್ರದಲ್ಲಿ 100 ಕಲಾವಿದರು ಅಭಿನಯಿಸಿದ್ದಾರೆ.

ಚಿತ್ರದಲ್ಲಿ ತಾಯಿ ಮಮತೆ, ವಾತ್ಸಲ್ಯ, ಮಹಿಳಾ ಸಬಲೀಕರಣ  ಸೇರಿದಂತೆ  ಬಾಲ್ಯವಿವಾಹ, ವಿಚ್ಚೇದನ, ವರದಕ್ಷಿಣೆ, ಅತ್ಯಾಚಾರ, ಲೈಂಗಿಕ ಕಿರುಕುಳ, ಮಕ್ಕಳ ಕಳ್ಳ ಸಾಗಾಣಿಕೆ, ಹೆಣ್ಣು ಮಗುವಿಗೆ ವಿದ್ಯಾಭ್ಯಾಸದ ಅರಿವು ಮೂಡಿಸುವ ಅಂಶಗಳನ್ನು ಅಳವಡಿಸಲಾಗಿದೆಯಂತೆ. ತಾಯಿ ಪಾತ್ರದಲ್ಲಿ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

ಚಿತ್ರದಲ್ಲಿ ರಂಜೀತ್‌ ಜಾ, ಭರತ್‌ ಲಕ್ಷೀಕಾಂತ್‌, ಮಹೇಂದ್ರ ಪಾಂಡೆ, ವಿಶಾಲಿಗಾನಿ, ಮಹೇಶ್‌, ಆಕಾಶ್‌ ಅರೋರ, ಶಿವಂಕಟಾರಿಯಾ, ಸಂಜುಕ್ತಾ ಘೋಷ್‌, ಶುಭರಕ್ಷಾ, ಶರಣ್ಯ ಕೌರ್‌, ರೇಷ್ಮಾ ಮಲಾನಿ, ಅನಿತಾ, ವರ್ಷಾ ಆಚಾರ್ಯ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ.

ಇವರೊಂದಿಗೆ ಹರ್ಷಿಕಾ ಪೂಣತ್ಛ, ಕಲ್ಪನಾ ಪಂಡಿತ್‌, ಸಿಲ್ವ ಮಲಾನಿ, ಮೀನಾ ಮಲಾನಿ  ನಟಿಸಿದ್ದಾರೆ. ಕನ್ನಡ, ತುಳು, ಕೊಂಕಣಿ, ರಂಗಭೂಮಿಯ ಕಲಾವಿದರು ಇಲ್ಲಿ ಕಾಣಿಸಿಕೊಂಡಿದ್ದಾರೆ. ರಂಜೀತ್‌ ಜಾ, ಸಂತೋಷ್‌ ಚಾವ್ಲಾ ಹಾಗೂ ಸಂದೀಪ್‌ ಮಲಾನಿ ಸೇರಿಕೊಂಡು ನಿರ್ಮಾಣ ಮಾಡಿದ್ದಾರೆ. ಬೆಂಗಳೂರು, ಮುಂಬೈ, ಮಂಗಳೂರಿನಲ್ಲಿ ಚಿತ್ರೀಕರಣ ಮಾಡಲಾಗಿದೆ. 

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ