ಪದ್ಮಿನಿ ಕಾರಲ್ಲಿ ಜಗ್ಗೇಶ್‌ ಸುತ್ತಾಟ

ಏ.26 ರಿಂದ ಪ್ರೀಮಿಯರ್‌ ಶೋ

Team Udayavani, Apr 17, 2019, 3:00 AM IST

ಕಾರು, ಬೈಕ್‌ ಹೆಸರಿಟ್ಟುಕೊಂಡು ಈಗಾಗಲೇ ಅನೇಕ ಸಿನಿಮಾಗಳು ಬಂದಿವೆ. ಈಗ ಆ ಸಾಲಿಗೆ ಮತ್ತೂಂದು ಸಿನಿಮಾ ಸೇರುತ್ತಿದೆ. ಅದು “ಪ್ರೀಮಿಯರ್‌ ಪದ್ಮಿನಿ’. ಜಗ್ಗೇಶ್‌ ನಾಯಕರಾಗಿರುವ “ಪ್ರೀಮಿಯರ್‌ ಪದ್ಮಿನಿ’ ಚಿತ್ರ ಈಗ ಬಿಡುಗಡೆಯ ಹಂತಕ್ಕೆ ಬಂದಿದ್ದು, ಏಪ್ರಿಲ್‌ 26 ರಂದು ತೆರೆಕಾಣುತ್ತಿದೆ.

ಜಗ್ಗೇಶ್‌ ಅವರೊಂದಿಗೆ ಮಧುಬಾಲ, ಸುಧಾರಾಣಿ, ದತ್ತಣ್ಣ, ಪ್ರಮೋದ್‌, ವಿವೇಕ್‌ ಸೇರಿದಂತೆ ಅನೇಕು ನಟಿಸಿದ್ದಾರೆ. ಜಗ್ಗೇಶ್‌ ಚಿತ್ರ ಅಂದಮೇಲೆ, ಅಲ್ಲಿ ಹಾಸ್ಯಕ್ಕೇನೂ ಕೊರತೆ ಇರಲ್ಲ. ಈಗಾಗಲೇ ಟ್ರೇಲರ್‌ ರಿಲೀಸ್‌ ಆಗಿದ್ದು, ಟ್ರೇಲರ್‌ ನೋಡಿದವರಿಗೆ ಹಾಸ್ಯದ ಜೊತೆಗೊಂದು ಭಾವುಕತೆ ಹೆಚ್ಚಿಸುವ ಸನ್ನಿವೇಶಗಳೂ ಕಾಣಸಿಗುತ್ತವೆ.

ಜಗ್ಗೇಶ್‌ಗೆ ಈ ಸಿನಿಮಾ ಮೇಲೆ ಸಿಕ್ಕಾಪಟ್ಟೆ ನಿರೀಕ್ಷೆ ಇದೆ. ನಿರ್ದೇಶಕ ರಮೇಶ್‌ ಇಂದಿರಾ ಪ್ಲಾನ್‌ ಪ್ರಕಾರ, ಚಿತ್ರೀಕರಣ ಮಾಡಿದ್ದರಿಂದ ಸಿನಿಮಾ ಚೆನ್ನಾಗಿ ಮೂಡಿಬಂದಿದೆ ಎಂಬುದು ಜಗ್ಗೇಶ್‌ ಮಾತು. ಈ ಸಿನಿಮಾ ಎಲ್ಲಾ ವರ್ಗಕ್ಕೂ ಸಲ್ಲುವ ಮೂಲಕ ಈ ಚಿತ್ರಕ್ಕೆ ದೊಡ್ಡ ಯಶಸ್ಸು ಸಿಗಲಿದೆ ಎಂಬ ವಿಶ್ವಾಸವೂ ಅವರಿಗಿದೆ. ಈ ಚಿತ್ರವನ್ನು ಶ್ರುತಿ ನಾಯ್ಡು ನಿರ್ಮಿಸಿದ್ದಾರೆ.

ಇತ್ತೀಚೆಗೆ ಬಿಡುಗಡೆಯಾದ ಟ್ರೇಲರ್‌ ವೀಕ್ಷಿಸಿದ ನಿರ್ದೇಶಕರಾದ ತರುಣ್‌ ಸುಧೀರ್‌, ಚೇತನ್‌ಕುಮಾರ್‌, ರಿಷಭ್‌ಶೆಟ್ಟಿ, ಚೈತನ್ಯ, ನಂದಕಿಶೋರ್‌, ಎ.ಪಿ.ಅರ್ಜುನ್‌, ಎ.ಹರ್ಷ, ರಾಜ್‌.ಬಿ.ಶೆಟ್ಟಿ ಮತ್ತು ಅನೂಪ್‌ ಭಂಡಾರಿ ಸೇರಿದಂತೆ ಇತರೆ ನಿರ್ದೇಶಕರು ಟ್ರೇಲರ್‌ ಬಗ್ಗೆ ಮೆಚ್ಚುಗೆ ಸೂಚಿಸಿದ್ದಾರೆ.

ಅಂದಹಾಗೆ, ಇದೊಂದು ಕಾರು ಮಾಲೀಕ ಹಾಗೂ ಅವನ ಚಾಲಕನ ನಡುವಿನ ಕಥೆ. ತಪ್ಪು-ಸರಿಗಳ ನಡುವೆ ಚಿತ್ರ ಸಾಗುತ್ತದೆ.ಒಂದು ಪರಿಪೂರ್ಣ ಕೌಟುಂಬಿಕ ಸಿನಿಮಾದಲ್ಲಿ ಏನೇನು ಇರಬೇಕೋ ಅದೆಲ್ಲವೂ ಇಲ್ಲಿದೆ. ಈಗಿನ ಯುವಕರಿಗೂ ಇಷ್ಟವಾಗುವಂತಹ ಅಂಶಗಳು ಇಲ್ಲಿ ಹೈಲೈಟ್‌ ಎಂಬುದು ಚಿತ್ರತಂಡದ ಮಾತು. ಈ ಚಿತ್ರಕ್ಕೆ ಅರ್ಜುನ್‌ ಜನ್ಯ ಸಂಗೀತ ನೀಡಿದ್ದಾರೆ.


ಈ ವಿಭಾಗದಿಂದ ಇನ್ನಷ್ಟು

  • ಜಗ್ಗೇಶ್‌ ಅಭಿನಯದ "ಪ್ರೀಮಿಯರ್‌ ಪದ್ಮಿನಿ' ಚಿತ್ರಕ್ಕೆ ಎಲ್ಲೆಡೆಯಿಂದ ಒಳ್ಳೆಯ ಮೆಚ್ಚುಗೆ ಸಿಕ್ಕಿದ್ದು ಗೊತ್ತೇ ಇದೆ. ಆ ಚಿತ್ರ ಈಗ 25ದಿನ ಪೂರೈಸಿ ಮುನ್ನುಗ್ಗುತ್ತಿದೆ....

  • ಶಿವರಾಜಕುಮಾರ್‌ ದೊಡ್ಡ ಗ್ಯಾಪ್‌ನ ಬಳಿಕ ಒಪ್ಪಿಕೊಂಡ ರೀಮೇಕ್‌ ಚಿತ್ರ "ಕವಚ'. ಈ ಚಿತ್ರದಲ್ಲಿ ಅಂಧನಾಗಿ ಕಾಣಿಸಿಕೊಂಡಿದ್ದಲ್ಲದೇ, ಪಾತ್ರಕ್ಕೆ ನ್ಯಾಯ ಒದಗಿಸಿದ್ದರು....

  • -ಕುರುಕ್ಷೇತ್ರ ಕನ್ನಡ ವರ್ಶನ್‌ ಟಿವಿ ರೈಟ್ಸ್‌ - 9 ಕೋಟಿ -ಹಿಂದಿ ಡಬ್ಬಿಂಗ್‌ ರೈಟ್ಸ್‌ -9.5 ಕೋಟಿ -ಕುರುಕ್ಷೇತ್ರ ಕನ್ನಡ ವರ್ಶನ್‌ ಆಡಿಯೋ ರೈಟ್ಸ್‌ -1.5 ಕೋಟಿ ಇದು...

  • ಯುವ ನಿರ್ದೇಶಕ ವಿಠಲ್‌ ಭಟ್‌ ನಿರ್ದೇಶನದ "ಹ್ಯಾಂಗೋವರ್‌' ಈಗ ಮತ್ತೆ ಸದ್ದು ಮಾಡುತ್ತಿದೆ. ಇಲ್ಲಿಯವರೆಗೆ ಚಿತ್ರ ಬಿಡುಗಡೆ ತಯಾರಿಯಲ್ಲಿದ್ದ ಚಿತ್ರತಂಡ, ಈಗ ಪ್ರೇಕ್ಷಕರ...

  • ಸೆಟ್ಟೇರಿದಾಗಿನಿಂದಲೂ ಸಾಕಷ್ಟು ಸುದ್ದಿ ಮಾಡುತ್ತಿರುವ ಬಹು ನಿರೀಕ್ಷಿತ ಮುನಿರತ್ನ "ಕುರುಕ್ಷೇತ್ರ' ಚಿತ್ರದ ಬಿಡುಗಡೆಗೆ ಮುಹೂರ್ತ ನಿಗದಿಯಾಗಿದೆ. "ಕುರುಕ್ಷೇತ್ರ'...

ಹೊಸ ಸೇರ್ಪಡೆ