ಮೊಮ್ಮಗನ ಖುಷಿಗೆ ಜಗ್ಗೇಶ್ ಪೌರಾಣಿಕ ಗೆಟಪ್
Team Udayavani, Jul 30, 2018, 11:40 AM IST
ಎಷ್ಟೇ ಬಿಝಿಯಾಗಿರುವ ತಾತಂದಿರಾದರೂ ತಮ್ಮ ಮೊಮ್ಮಕ್ಕಳೊಂದಿಗೆ ಕಾಲ ಕಳೆಯುತ್ತಾರೆ, ಅವರನ್ನು ಖುಷಿಪಡಿಸಲು ಅವರೊಂದಿಗೆ ಆಟವಾಡುತ್ತಾರೆ. ಮಗುವಿನ ಜೊತೆ ಮಗುವಾಗಿ ಖುಷಿಯಿಂದಿರುತ್ತಾರೆ. ಈ ವಿಷಯದಲ್ಲಿ ನಟ ಜಗ್ಗೇಶ್ ಯಾವತ್ತೂ ಹಿಂದೆ ಬಿದ್ದಿಲ್ಲ. ತಮ್ಮ ಮೊಮ್ಮಗ ಅರ್ಜುನನ್ನು ಖುಷಿಪಡಿಸಲು, ಅವನೊಂದಿಗೆ ಕಾಲ ಕಳೆಯಲು ಜಗ್ಗೇಶ್ ಸಾಕಷ್ಟು ಸಮಯ ಮೀಸಲಿಡುತ್ತಾರೆ.
ಈ ಹಿಂದೆ ಮೊಮ್ಮಗನ ಮುಂದೆ ಕೈ ಕಟ್ಟಿ ನಿಂತು ವಿಧೇಯ ವಿದ್ಯಾರ್ಥಿಯಾಗಿದ್ದ ಜಗ್ಗೇಶ್ ಈ ಬಾರಿ ಮೊಮ್ಮಗನಿಗಾಗಿ ಪೌರಾಣಿಕ ವೇಷ ಧರಿಸಿದ್ದಾರೆ. ಹಾಸ್ಯ ಪಾತ್ರಗಳಲ್ಲಿ ತಮ್ಮದೇ ಆದ ಛಾಪು ಮೂಡಿಸಿರುವ ಜಗ್ಗೇಶ್ ಈಗ ಮೊಮ್ಮಗನಿಗಾಗಿ ಪೌರಾಣಿಕ ವೇಷ ಧರಿಸಿ, ಮೊಮ್ಮಗನನ್ನು ಖುಷಿಪಡಿಸಿದ್ದಾರೆ.
ಅರ್ಜುನ್ ಕೂಡಾ ತಾತನ ಗೆಟಪ್ಗೆ ಫಿದಾ ಆಗಿದ್ದಾನೆ. ಮೊಮ್ಮಗ ಪೌರಾಣಿಕ ವೇಷ ನೋಡಿರದ ಕಾರಣ ಜಗ್ಗೇಶ್ ಆ ಗೆಟಪ್ ಹಾಕಿ, ತೋರಿಸಿದ್ದಾರೆ. ಈ ಖುಷಿಯನ್ನು ಜಗ್ಗೇಶ್ ಟ್ವೀಟರ್ನಲ್ಲಿ ಹಂಚಿಕೊಂಡಿದ್ದಾರೆ. “ಮೊಮ್ಮಗ ಅರ್ಜುನ ನೋಡಿರದ ಪೌರಾಣಿಕ ವೇಷದೊಂದಿಗೆ.
ತಾತನ ಪೌರಾಣಿಕ ವೇಷಕಂಡು ಮೂಕವಿಸ್ಮಿತನಾದ ಅರ್ಜುನ. ಅವನ ಸಂತೋಷಕ್ಕಾಗಿ ನನ್ನ ಸಣ್ಣ ಪ್ರಯತ್ನ. ಮಕ್ಕಖು ಅಸಲು, ಮೊಮ್ಮಕ್ಕಳು ಬಡ್ಡಿ. ಮನುಷ್ಯರಿಗಿಂತ ಅಸಲಿಗಿಂತ ಬಡ್ಡಿಯ ಮೇಲೆ ಆಸೆ ಹೆಚ್ಚು. ವಾರದ ಯಾಂತ್ರಿಕ ಬದುಕು ಬದಲಿಸಲು ಭಾನುವಾರ ನನ್ನ ಬಳಿ ಬಂದು ಬಿಡುತ್ತಾನೆ’ ಎಂದು ಟ್ವೀಟ್ ಮಾಡಿದ್ದಾರೆ ಜಗ್ಗೇಶ್.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್ ಬ್ರಿಜೇಶ್ ಚೌಟ
ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್ ಬೆಂಬಲಿಸಿ: ಪದ್ಮರಾಜ್ ಪೂಜಾರಿ
ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ
ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ
Kodagu: ಕಾನೂನು ಸುವ್ಯವಸ್ಥೆಗೆ 1,600 ಪೊಲೀಸರ ನಿಯೋಜನೆ