ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ರಾಬರ್ಟ್ ನಿಂದ “ರಾಮನಾಮ” ಜಪ
ಚಿತ್ರತಂಡ ಇದೀಗ ಚಿತ್ರದಲ್ಲಿ ಬರುವ ‘ಜೈ ಶ್ರೀ ರಾಮ್’ ಹಾಡಿನ ಇನ್ನೊಂದು ಶೈಲಿಯನ್ನು ಬಿಡುಗಡೆ ಮಾಡಿದೆ.
Team Udayavani, Apr 4, 2020, 6:32 PM IST
ಬೆಂಗಳೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಈ ವರ್ಷದ ಬಹುನಿರೀಕ್ಷಿತ ಚಿತ್ರ ‘ರಾಬರ್ಟ್’ ತೆರೆಗೆ ಬರಲು ಸಿದ್ದವಾಗುತ್ತಿದೆ. ಸದ್ಯ ನಿಧಾನವಾಗಿ ಪ್ರಮೋಶನ್ ಕೆಲಸಗಳಲ್ಲಿ ನಿರತವಾಗಿರುವ ‘ರಾಬರ್ಟ್’ ಚಿತ್ರತಂಡ ಇತ್ತೀಚೆಗೆ ಚಿತ್ರದ ‘ದೋಸ್ತಾ…’ ಹಾಡನ್ನು ಬಿಡುಗಡೆಗೊಳಿಸಿತ್ತು. ಈ ಹಾಡಿಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿರುವಂತೆಯೇ, ಚಿತ್ರತಂಡ ಇದೀಗ ಚಿತ್ರದಲ್ಲಿ ಬರುವ ‘ಜೈ ಶ್ರೀ ರಾಮ್’ ಹಾಡಿನ ಇನ್ನೊಂದು ಶೈಲಿಯನ್ನು ಬಿಡುಗಡೆ ಮಾಡಿದೆ.
ಶ್ರೀರಾಮನವಮಿ ಹಬ್ಬದ ಸಂದರ್ಭದಲ್ಲಿ ‘ರಾಬರ್ಟ್’ ಚಿತ್ರತಂಡ ದರ್ಶನ್ ಅಭಿಮಾನಿಗಳಿಗೆ ಭರ್ಜರಿ ಉಡುಗೊರೆ ನೀಡಿದ್ದು, ‘ಜೈ ಶ್ರೀರಾಮ…’ ಹಾಡಿನ ಮುಂದುವರಿದ ಭಾಗವನ್ನು ಮೇಕಿಂಗ್ ಅನ್ನು ವಿಡಿಯೋ ಸಮೇತ ಬಿಡುಗಡೆ ಮಾಡಿದೆ. ಈ ಮೂಲಕ ಚಿತ್ರತಂಡ, ರಾಮನಾಮವನ್ನು ಜಪಿಸುವಂತೆ ಮಾಡಿದೆ.
ಈ ಹಿಂದೆ ದೋಸ್ತಾ ಹಾಡಿನ ಮೂಲಕ ಸ್ನೇಹಿತನ ಮಹತ್ವವನ್ನು ಸಾರಿದ್ದ ‘ರಾಬರ್ಟ್’ ಇದೀಗ ‘ಜೈ ಶ್ರೀರಾಮ’ ಹಾಡಿನ ಮೂಲಕ ರಾಮನ ವ್ಯಕ್ತಿತ್ವ, ಘನತೆಯನ್ನು ಪರಿಚಯಿಸಿದೆ. ‘ರಾಮ ನಾಮ ಹಾಡಿರೋ ರಾಮ ಬರುವನು, ಅವನ ಹಿಂದೆ ಹನುಮನು ಇದ್ದೆ ಇರುವನು’ ಎಂಬ ಸಾಲುಗಳಿಂದ ಶುರುವಾಗುವ ಈ ಹಾಡಿಗೆ ಡಾ.ವಿ ನಾಗೇಂದ್ರ ಪ್ರಸಾದ್ ಸಾಹಿತ್ಯ ಬರೆದಿರುವ ಈ ಹಾಡಿಗೆ ಶಂಕರ್ ಮಹದೇವನ್ ಧ್ವನಿಯಾಗಿದ್ದಾರೆ. ಅರ್ಜುನ್ ಜನ್ಯ ಅವರ ಸಂಗೀತ ನಿರ್ದೇಶನದಲ್ಲಿ ಮೂಡಿ ಬಂದಿದೆ.
ಹಾಡಿಗೆ ಮೇಕಿಂಗ್ ವಿಡಿಯೋ ಸೇರಿಸಿದ್ದು, ದರ್ಶನ್ ಸ್ಟೆಪ್ಸ್, ಅರ್ಜುನ್ ಜನ್ಯಾ ಪಿಯಾನೋ ನುಡಿಸುವ ದೃಶ್ಯಗಳು ಇದೆ. ಅಲ್ಲಲ್ಲಿ ಆರ್ಕೆಸ್ಟ್ರಾ ಬರುತ್ತದೆ. ಶಂಕರ್ ಮಹದೇವನ್ ಹಾಡುವ ಶೈಲಿಯನ್ನು ತೋರಿಸಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
IPL ;ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ಗೆ 12 ರನ್ಗಳ ಜಯ
Belthangady: ಸ್ಕೂಟರ್ ಢಿಕ್ಕಿಯಾಗಿ ರಸ್ತೆ ದಾಟುತ್ತಿದ್ದ ವ್ಯಕ್ತಿ ಸಾವು
Politics: ಚಿತ್ರದುರ್ಗ ರಾಜಕೀಯ ನಿರಾಶ್ರಿತರ ಕೇಂದ್ರವೇ?: ರಘುಚಂದನ್
PSI re-examination: ಪಿಎಸ್ಐ ಮರು ಪರೀಕ್ಷೆ, ಅಂತಿಮ ಅಂಕಪಟ್ಟಿ ಬಿಡುಗಡೆ
Mandya: ಬಿಜೆಪಿ ಮುಖಂಡರಿಗೆ ವೇದಿಕೆ ಬಿಟ್ಟು ಕೆಳಗೆ ಕುಳಿತ ಮಂಡ್ಯ ದಳಪತಿಗಳು!