ಆಲ್ಬಂನಲ್ಲಿ “ಜಂಭದ ಕೋಳಿ’

Team Udayavani, Feb 17, 2020, 7:00 AM IST

ಇತ್ತೀಚೆಗೆ ನಡೆದ “ಪ್ರೇಮಿಗಳ ದಿನ’ಕ್ಕೆ ಸ್ಪೆಷಲ್‌ ಗಿಫ್ಟ್ ಆಗಿ ಮುಂಬರಲಿರುವ ಹಲವು ಚಿತ್ರಗಳು ತಮ್ಮ ಫ‌ಸ್ಟ್‌ಲುಕ್‌, ಟೀಸರ್‌, ಟ್ರೇಲರ್‌ಗಳನ್ನು ಹೊರತಂದಿವೆ. ಇಲ್ಲೊಬ್ಬ ನವನಟ ಕಂ ಸಂಗೀತ ಸಂಯೋಜಕ ಆದಿತ್ಯ ವಿನೋದ್‌ ಈ “ಪ್ರೇಮಿಗಳ ದಿನ’ಕ್ಕೆ ಸ್ಪೆಷಲ್‌ ಗಿಫ್ಟ್ ಆಗಿ ತಾನೇ ಸಾಹಿತ್ಯ ಬರೆದು, ಸ್ವರ ಸಂಯೋಜಿಸಿ, ಧ್ವನಿಯಾಗಿರುವ “ಜಂಭದ ಕೋಳಿ’ ಎನ್ನುವ ಮ್ಯೂಸಿಕ್‌ ವೀಡಿಯೋ ಆಲ್ಬಂ ಅನ್ನು ಹೊರತಂದಿದ್ದಾರೆ.

ಈಗಾಗಲೇ “ಸೈನಿಕ’, “ಏಕೆ ಮನಸೆ…’, “ಭೂಮಿ ತಾಯಿ’ ಮೊದಲಾದ ಮ್ಯೂಸಿಕ್‌ ಆಲ್ಬಂ ಹೊರತಂದಿರುವ ಆದಿತ್ಯ ವಿನೋದ್‌, ಕಳೆದ ವರ್ಷ “ಪ್ರೇಮಿಗಳ ದಿನ’ಕ್ಕೆ “ನೀ ಇದ್ದರೆ…’ ಎನ್ನುವ ಮ್ಯೂಸಿಕ್‌ ಆಲ್ಬಂ ಹೊರತಂದಿದ್ದರು. ಈ ಬಾರಿ “ಜಂಭದ ಕೋಳಿ’ ಎನ್ನುವ ಹೆಸರಿನಲ್ಲಿ ಮತ್ತೂಂದು ರೊಮ್ಯಾಂಟಿಕ್‌-ಲವ್‌ ಸಾಂಗ್‌ ಹೊರಬಂದಿದ್ದು, ಇಂಡೋ-ವೆಸ್ಟರ್ನ್ ಶೈಲಿಯಲ್ಲಿ ಈ ಹಾಡು ಮೂಡಿಬಂದಿದೆ.

ಹಿಪ್‌-ಹಾಪ್‌ ಜಾನರ್‌ನಲ್ಲಿ, ಬೀಚ್‌ ಸೈಡ್‌ ಥೀಮ್‌ ಇಟ್ಟುಕೊಂಡು ಮಾಡಿರುವ “ಜಂಬದ ಕೋಳಿ’ ಮ್ಯೂಸಿಕ್‌ ಆಲ್ಬಂನಲ್ಲಿ ಆದಿತ್ಯ ವಿನೋದ್‌, ನಟಿ ಸನಿಹಾ ಯಾದವ್‌ ಜೋಡಿಯಾಗಿ ಕಾಣಿಸಿಕೊಂಡಿದ್ದಾರೆ. ಕುಮುಟ ಕಡಲ ತೀರದ ಸುತ್ತಮುತ್ತ ಈ ಆಲ್ಬಂ ಶೂಟಿಂಗ್‌ ನಡೆಸಲಾಗಿದ್ದು, ಶಿವಶಂಕರ್‌ ಛಾಯಾಗ್ರಹಣ ಮತ್ತು ಸಂಕಲನ ಕಾರ್ಯ ನಿರ್ವಹಿಸಿದ್ದಾರೆ. ಈ ಬಗ್ಗೆ ಮಾತನಾಡುವ ಆದಿತ್ಯ ವಿನೋದ್‌, “ಕನ್ನಡ ಮ್ಯೂಸಿಕ್‌ ಅನ್ನು ಗ್ಲೋಬಲೈಸ್‌ ಮಾಡಲು ಇಂಥ ಮ್ಯೂಸಿಕ್‌ ಆಲ್ಬಂ ಸಹಕಾರಿ.

ಹಾಗಾಗಿ ಇಂಟರ್‌ ನ್ಯಾಶನಲ್‌ ಮ್ಯೂಸಿಕ್‌ ಜಾನರ್‌ನಲ್ಲಿ ಈ ಮ್ಯೂಸಿಕ್‌ ಆಲ್ಬಂ ಮಾಡಿದ್ದೇವೆ. ನಮ್ಮ ಪ್ರಯತ್ನಕ್ಕೆ ಒಳ್ಳೆಯ ಪ್ರತಿಕ್ರಿಯೆ ಸಿಗುತ್ತಿದೆ’ ಎನ್ನುತ್ತಾರೆ. ಸದ್ಯ “ಎ ವಿ ಮ್ಯೂಸಿಕ್‌’ ಯು-ಟ್ಯೂಬ್‌ ಚಾನೆಲ್‌ ಮೂಲಕ ಹೊರಬಂದಿರುವ “ಜಂಭದ ಕೋಳಿ’ ಹಾಡುಗಳಿಗೆ ಸೋಶಿಯಲ್‌ ಮಿಡಿಯಾಗಳಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದ್ದು, ಚಿತ್ರರಂಗದ ಹಲವರು “ಜಂಬದ ಕೋಳಿ’ ಆಲ್ಬಂಗೆ ಮೆಚ್ಚುಗೆ ಸೂಚಿಸುತ್ತಿದ್ದಾರೆ.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ