‘ಜನ ರಕ್ಷಕ’ ಟೈಟಲ್‌ ಪೋಸ್ಟರ್‌ ರಿಲೀಸ್‌ : ನವ ನಿರ್ದೇಶಕಿಯ ಹೊಸ ಚಿತ್ರ


Team Udayavani, Jan 26, 2022, 3:05 PM IST

Janarakshaka_Film Poster Release

ಕನ್ನಡ ಚಿತ್ರರಂಗದಲ್ಲಿ ಪ್ರತಿವರ್ಷ ನೂರಾರು ಹೊಸ ಪ್ರತಿಭೆಗಳು ನಿರ್ದೇಶಕರಾಗಿ ಪರಿಚಯವಾದರೂ, ಹೀಗೆ ಪರಿಚಯವಾಗುವವರಲ್ಲಿ ಮಹಿಳಾ ನಿರ್ದೇಶಕರ ಸಂಖ್ಯೆ ತೀರಾ ಕಡಿಮೆ ಎಂದೇ ಹೇಳಬಹುದು. ಕನ್ನಡದಲ್ಲಿ ನಿರ್ದೇಶಕಿಯರ ಕೊರತೆ ಇದೆ ಎಂಬ ಮಾತುಗಳ ನಡುವೆಯೇ, ಆಗಾಗ್ಗೆ ಕೆಲವು ವನಿತೆಯರು

ನಿರ್ದೇಶಕರಾಗಿ ಚಿತ್ರರಂಗದಲ್ಲಿ ಚಿತ್ರ ಪ್ರಯೋಗಕ್ಕೆ ಮುಂದಾಗುತ್ತಲೇ ಇರುತ್ತಾರೆ ಅನ್ನೋದು ಸಮಾಧಾನದ ಸಂಗತಿ. ಈ ವರ್ಷದ ಆರಂಭದಲ್ಲಿ ಗೌರಿಶ್ರೀ ಎಂಬ ನವ ಪ್ರತಿಭೆ ನಿರ್ದೇಶಕಿಯಾಗಿ ಕನ್ನಡ ಚಿತ್ರರಂಗಕ್ಕೆ ಪರಿಚಯವಾಗುತ್ತಿದ್ದಾರೆ.

ಕಳೆದ ಕೆಲವು ವರ್ಷಗಳಿಂದ ಕನ್ನಡ ಚಿತ್ರರಂಗದಲ್ಲಿ ಸಹ ನಟಿಯಾಗಿ, ನೃತ್ಯ ಸಂಯೋಜಕಿಯಾಗಿ ಗುರುತಿಸಿಕೊಂಡಿರುವ ಗೌರಿಶ್ರೀ, ಈಗ “ಜನರಕ್ಷಕ’ ಎಂಬ ಚಿತ್ರಕ್ಕೆ ಆ್ಯಕ್ಷನ್‌-ಕಟ್‌ ಹೇಳುವ ಮೂಲಕ ಡೈರೆಕ್ಟರ್‌ ಕ್ಯಾಪ್‌ ಧರಿಸಿದ್ದಾರೆ. ಜೊತೆಗೆ ಚಿತ್ರದಲ್ಲಿ ನಾಯಕಿಯಾಗಿಯೂ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

ಇತ್ತೀಚೆಗಷ್ಟೇ ಗೌರಿಶ್ರೀ ನಿರ್ದೇಶನದ “ಜನರಕ್ಷಕ’ ಚಿತ್ರದ ಟೈಟಲ್‌ ಪೋಸ್ಟರ್‌ ಬಿಡುಗಡೆಯಾಗಿದೆ. ಹಿರಿಯ ನಿರ್ಮಾಪಕ ಮತ್ತು ವಿತರಕ ಎಸ್‌. ಎ ಚಿನ್ನೇಗೌಡ, ಕರಿಸುಬ್ಬು, ನೃತ್ಯ ನಿರ್ದೇಶಕ ಫೈವ್‌ಸ್ಟಾರ್‌ ಗಣೇಶ್‌, ನಟರಾದ ಶಿವಕುಮಾರ್‌ ಆರಾಧ್ಯ ಮೊದಲಾದವರು ಹಾಜರಿದ್ದು, “ಜನರಕ್ಷಕ’ ಚಿತ್ರದ ಟೈಟಲ್‌ ಪೋಸ್ಟರ್‌ ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭ ಹಾರೈಸಿದರು.

ಇದೇ ವೇಳೆ ಚಿತ್ರದ ಬಗ್ಗೆ ಮಾತನಾಡಿದ ನಿರ್ದೇಶಕಿ ಗೌರಿಶ್ರೀ, “ಚಿತ್ರರಂಗಕ್ಕೆ ಬರಲು, ಇಲ್ಲೇ ಏನಾದ್ರೂ ಸಾಧಿಸಲು ಪುನೀತ್‌ ರಾಜಕುಮಾರ್‌ ಪ್ರೇರಣೆಯಾಗಿದ್ದರು. ಕನ್ನಡ ಚಿತ್ರರಂಗದಲ್ಲಿ ಹಲವು ಸಿನಿಮಾಗಳಿಗೆ ನಟಿಯಾಗಿ, ನೃತ್ಯ ಸಂಯೋಜಕಿಯಾಗಿ ಕೆಲಸ ಮಾಡಿದ ಅನುಭವವಿದೆ. ಲಾಕ್‌ಡೌನ್‌ ಸಮಯದಲ್ಲಿ ಹೊಳೆದ ಕಥೆಯೊಂದನ್ನು ಇಟ್ಟುಕೊಂಡು ಈ ಸಿನಿಮಾ ಮಾಡಲಾಗಿದೆ. ಮಹಿಳಾ ಕೇಂದ್ರಿತ ಕಥೆ ಇದರಲ್ಲಿದ್ದು, ಮನರಂಜನಾತ್ಮಕ ಮತ್ತು ಸಂದೇಶವಿರುವಂಥ ಸಿನಿಮಾ ಮಾಡಿದ್ದೇವೆ. ಈಗಾಗಲೇ ಸಿನಿಮಾದ ಬಹುತೇಕ ಚಿತ್ರೀಕರಣ ಪೂರ್ಣಗೊಂಡಿದ್ದು, ಪೋಸ್ಟ್‌ ಪ್ರೊಡಕ್ಷನ್ಸ್‌ ಕೆಲಸ ನಡೆಯುತ್ತಿದೆ’ ಎಂದು ಮಾಹಿತಿ ನೀಡಿದರು.

ಇದನ್ನೂ ಓದಿ:ಕ್ರಿಸ್ ಗೇಲ್ ಗೆ ಸಂದೇಶ ಕಳುಹಿಸಿದ ಪ್ರಧಾನಿ ನರೇಂದ್ರ ಮೋದಿ: ಯುನಿವರ್ಸಲ್ ಬಾಸ್ ಹೇಳಿದ್ದೇನು?

“ವಿ2 ಪ್ರೊಡಕ್ಷನ್‌’ ಬ್ಯಾನರ್‌ ಅಡಿಯಲ್ಲಿ ನಿರ್ಮಾಣವಾಗಿರುವ “ಜನರಕ್ಷಕ’ ಚಿತ್ರಕ್ಕೆ “ನಾ ಭಕ್ಷಕ’ ಎಂಬ ಅಡಿಬರಹವಿದೆ. ಚಿತ್ರದಲ್ಲಿ ಗೌರಿಶ್ರೀ ಅವರೊಂದಿಗೆ ರಘು ನಾಯಕನಾಗಿ ಕಾಣಿಸಿಕೊಂಡಿದ್ದಾರೆ. ಉಳಿದಂತೆ ಸೋಮಸುಂದರ್‌, ಪ್ರಿಯಾ, ನಟರಾಜ್‌, ತ್ರಿಶೂಲ್‌, ರತ್ನಮಾಲಾ, ನಾಗೇಂದ್ರ, ಭಾಗ್ಯಶ್ರೀ ಮೊದಲಾದವರು “ಜನರಕ್ಷಕ’ ಚಿತ್ರದ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. “ಜನರಕ್ಷಕ’ ಚಿತ್ರಕ್ಕೆ ಪಿ.ಕೆ.ಹೆಚ್‌ ದಾಸ್‌ ಛಾಯಾಗ್ರಹಣವಿದ್ದು, ಚಿತ್ರದ ಹಾಡುಗಳಿಗೆ ದೇವದಾಸ್‌ ಸಂಗೀತ ಸಂಯೋಜಿಸಿದ್ದಾರೆ.

ಸದ್ಯ “ಜನರಕ್ಷಕ’ ಟೈಟಲ್‌ ಪೋಸ್ಟರ್‌ ಬಿಡುಗಡೆ ಮಾಡುವ ಮೂಲಕ ಚಿತ್ರದ ಪ್ರಚಾರ ಕಾರ್ಯಗಳಿಗೆ ಚಾಲನೆ ನೀಡಿರುವ ಚಿತ್ರತಂಡ, ಶೀಘ್ರದಲ್ಲಿಯೇ ಚಿತ್ರವನ್ನು ಪ್ರೇಕ್ಷಕರ ಮುಂದೆ ತರುವ ಯೋಚನೆಯಲ್ಲಿದೆ. ಒಟ್ಟಾರೆ ನಿರ್ದೇಶಕಿಯಾಗಿ “ಜನ ರಕ್ಷಕ’ ಚಿತ್ರವನ್ನು ತೆರೆಮೇಲೆ ತರಲು ಸಿದ್ಧವಾಗಿರುವ ಗೌರಿಶ್ರೀ ಅವರ ಹೊಸ ಚಿತ್ರ ಪ್ರೇಕ್ಷಕರು ಹೇಗೆ ಸ್ವೀಕರಿಸುತ್ತಾರೆ ಅನ್ನೋದು ಚಿತ್ರ ಬಿಡುಗಡೆಯಾದ ಮೇಲಷ್ಟೇ ಗೊತ್ತಾಗಲಿದೆ

ಟಾಪ್ ನ್ಯೂಸ್

ಭಾರೀ ಮಳೆಗೆ ಸಿಲುಕಿದ ರೈಲು; ಸಹಾಯಕ್ಕೆ ಧಾವಿಸಿದ ಭಾರತೀಯ ವಾಯುಪಡೆ!

ಭಾರೀ ಮಳೆಗೆ ಸಿಲುಕಿದ ರೈಲು; ಸಹಾಯಕ್ಕೆ ಧಾವಿಸಿದ ಭಾರತೀಯ ವಾಯುಪಡೆ!

ಶಿವಮೊಗ್ಗ; ಕಾರು ಢಿಕ್ಕಿಯಾಗಿ ಏಳು ಎಮ್ಮೆಗಳು ಸ್ಥಳದಲ್ಲೇ ಸಾವು!

ಶಿವಮೊಗ್ಗ; ಕಾರು ಢಿಕ್ಕಿಯಾಗಿ ಏಳು ಎಮ್ಮೆಗಳು ಸ್ಥಳದಲ್ಲೇ ಸಾವು!

ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಭೂಮಿ ಕಂಪಿಸಿದ ಅನುಭವ

ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಭೂಮಿ ಕಂಪಿಸಿದ ಅನುಭವ

vijayendra

ಬಿಜೆಪಿಯಲ್ಲಿ ತಳಮಳ ಸೃಷ್ಟಿಸಿದ ವಿಜಯೇಂದ್ರ ಹೆಸರು; ವರಿಷ್ಠರತ್ತ ಎಲ್ಲರ ಚಿತ್ತ

ಇಂದಿನ ಗ್ರಹಬಲ; ಈ ರಾಶಿಯವರಿಗಿಂದು ಭೂಮಿ ವಾಹನ ವಿಚಾರಗಳಲ್ಲಿ ಧನವ್ಯಯ ಸಂಭವ

ಇಂದಿನ ಗ್ರಹಬಲ; ಈ ರಾಶಿಯವರಿಗಿಂದು ಭೂಮಿ ವಾಹನ ವಿಚಾರಗಳಲ್ಲಿ ಧನವ್ಯಯ ಸಂಭವ

ಇಂದು ಪ್ರಧಾನಿ ಮೋದಿ ನೇಪಾಲಕ್ಕೆ; ಬುದ್ಧನ ಜನ್ಮಸ್ಥಳದಲ್ಲೇ ಬುದ್ಧ ಪೂರ್ಣಿಮೆ ಆಚರಣೆ

ಇಂದು ಪ್ರಧಾನಿ ಮೋದಿ ನೇಪಾಲಕ್ಕೆ; ಬುದ್ಧನ ಜನ್ಮಸ್ಥಳದಲ್ಲೇ ಬುದ್ಧ ಪೂರ್ಣಿಮೆ ಆಚರಣೆ

thumb-1

ಇಂದು ಶಾಲಾರಂಭ; ಶಾಲೆಗಳು ತಳಿರು ತೋರಣಗಳಿಂದ ಸಿಂಗಾರಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-dsadsad

ಶೀಘ್ರದಲ್ಲಿ ‘ಕೆಜಿಎಫ್ 3’ ಚಿತ್ರೀಕರಣ ಪ್ರಾರಂಭಿಸುವುದಿಲ್ಲ: ಕಾರ್ಯಕಾರಿ ನಿರ್ಮಾಪಕ

ನೇಣು ಬಿಗಿದ ಸ್ಥಿತಿಯಲ್ಲಿ ಬಂಗಾಳಿ ಕಿರುತೆರೆ ನಟಿ ಪಲ್ಲವಿ ಡೇ ಮೃತದೇಹ ಪತ್ತೆ!

ನೇಣು ಬಿಗಿದ ಸ್ಥಿತಿಯಲ್ಲಿ ಬಂಗಾಳಿ ಕಿರುತೆರೆ ನಟಿ ಪಲ್ಲವಿ ಡೇ ಮೃತದೇಹ ಪತ್ತೆ!

1-dsdsd

ಸಾರಾ ಅಬೂಬಕ್ಕರ್ ಕಾದಂಬರಿ ಆಧಾರಿತ ‘ಸಾರಾ ವಜ್ರ’ ಮೇ 20 ರಂದು ತೆರೆಗೆ

pruthvi ambar

ಪೃಥ್ವಿ ಅಂಬರ್‌ ನಟನೆಯ ‘ದೂರದರ್ಶನ’ ಸಿನಿಮಾದ ಶೂಟಿಂಗ್‌ ಕಂಪ್ಲೀಟ್‌

kgf-3

ವರ್ಷಾಂತ್ಯಕ್ಕೆ ‘ಕೆಜಿಎಫ್ 3’ ಶೂಟಿಂಗ್ ಆರಂಭ; ಮಹತ್ವದ ಮಾಹಿತಿ ನೀಡಿದ ವಿಜಯ್ ಕಿರಗಂದೂರು

MUST WATCH

udayavani youtube

ಥಾಮಸ್ ಕಪ್ ಗೆದ್ದು ಇತಿಹಾಸ ನಿರ್ಮಿಸಿದ ಭಾರತದ ಬಾಡ್ಮಿಂಟನ್ ತಾರೆಯರು

udayavani youtube

ಅಮೃತಕಾಲದಲ್ಲಿ ದೇಶ ವಿಶ್ವಗುರು – ನಿರ್ಮಲಾ ಸೀತಾರಾಮನ್‌

udayavani youtube

ದೇಶದಲ್ಲಿ ಭ್ರಷ್ಟಾಚಾರ ಬಿತ್ತಿದ್ದು, ಬೆಳೆಸಿದ್ದು ಕಾಂಗ್ರೆಸ್ ಪಕ್ಷ : ಸಿ.ಟಿ.ರವಿ

udayavani youtube

ಪಿಲಿ ಬತ್ತ್ಂಡ್‌ ಪಿಲಿ… ಬಲಿಪುಲೇ… ಕಾಪುವಿನಲ್ಲಿ ದ್ವೈ ವಾರ್ಷಿಕ ಪಿಲಿಕೋಲ…

udayavani youtube

ಪಿಲಿ ಬತ್ತ್ಂಡ್‌ ಪಿಲಿ… ಬಲಿಪುಲೇ… ಕಾಪುವಿನಲ್ಲಿ ದ್ವೈ ವಾರ್ಷಿಕ ಪಿಲಿಕೋಲ

ಹೊಸ ಸೇರ್ಪಡೆ

2school

ವಿದ್ಯಾರ್ಥಿಗಳ ಸ್ವಾಗತಕ್ಕೆ ಸಜ್ಜಾಗದ ಕೊಲ್ಲೂರು ಶಾಲೆ

distilled-water

ಪಚನಾಡಿ ಶುದ್ಧೀಕರಿಸಿದ ತ್ಯಾಜ್ಯ ನೀರು ಹರಿಸಲು ಪ್ರತ್ಯೇಕ ಪೈಪ್‌ಲೈನ್‌

ಭಾರೀ ಮಳೆಗೆ ಸಿಲುಕಿದ ರೈಲು; ಸಹಾಯಕ್ಕೆ ಧಾವಿಸಿದ ಭಾರತೀಯ ವಾಯುಪಡೆ!

ಭಾರೀ ಮಳೆಗೆ ಸಿಲುಕಿದ ರೈಲು; ಸಹಾಯಕ್ಕೆ ಧಾವಿಸಿದ ಭಾರತೀಯ ವಾಯುಪಡೆ!

1politics

ಬರ್ತಿನಂದಿದ್ದ ರುದ್ರಗೌಡ ಇನ್ನೂ ಬರಲಿಲ್ಲ!

bus

ಉಪಯೋಗಕ್ಕೆ ಇಲ್ಲದ ಬಸ್‌ ತಂಗುದಾಣಗಳು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.