ಸಂಕ್ರಾಂತಿಗೆ ಕಬ್ಜ ಸರ್ಪ್ರೈಸ್ ಗಿಫ್ಟ್
Team Udayavani, Jan 11, 2021, 2:42 PM IST
ಈಗಾಗಲೇ ರಿಯಲ್ ಸ್ಟಾರ್ ಉಪೇಂದ್ರ – ಆರ್. ಚಂದ್ರು ಕಾಂಬಿನೇಶನ್ನಲ್ಲಿ ಮೂಡಿಬರುತ್ತಿರುವ “ಕಬ್ಜ’ ಚಿತ್ರದ ಪೋಸ್ಟರ್, ಮೋಷನ್ ಪೋಸ್ಟರ್ಗಳು ಬಿಡುಗಡೆಯಾಗಿ ಒಂದಷ್ಟು ನಿರೀಕ್ಷೆ ಮೂಡಿಸಿದೆ.
ಇದೀಗ ಚಿತ್ರತಂಡ ಸಂಕ್ರಾಂತಿ ಹಬ್ಬದ ಸಂದರ್ಭದಲ್ಲಿ ಚಿತ್ರದ ಬಗ್ಗೆ ಮತ್ತೂಂದು ಸರ್ಪ್ರೈಸ್ ಕೊಡುವುದಾಗಿ ಹೇಳಿಕೊಂಡಿದೆ. ಜ. 14 ರಂದು ಬೆಳಗ್ಗೆ 10 ಗಂಟೆಗೆ ಆ ಸರ್ಪ್ರೈಸ್ ಏನು ಅನ್ನೋದು ಗೊತ್ತಾಗಲಿದೆ.
ಅಂದಹಾಗೆ, ಇಲ್ಲಿಯವರೆಗೆ ” ಕಬ್ಜ’ ಹೀರೋಯಿನ್ ಬಗ್ಗೆ ಚಿತ್ರತಂಡ ಮಾಹಿತಿ ಬಿಟ್ಟು ಕೊಟ್ಟಿರಲಿಲ್ಲ. ಈ ದಿನ ಚಿತ್ರದ ನಾಯಕಿ ಯಾರೆಂದು ಗೊತ್ತಾಗಬಹುದು ಎಂಬ ನಿರೀಕ್ಷೆಯಲ್ಲಿದ್ದಾರೆ ಉಪ್ಪಿ ಫ್ಯಾನ್ಸ್.