Udayavni Special

ಚಿತ್ರಮಂದಿರಕ್ಕೆ  ದಿಢೀರ್‌ ನಿರ್ಬಂಧ ಸರಿಯಲ್ಲ

ನಿರ್ಬಂಧ-ನಿಬಂಧನೆ ಕುರಿತು ಸರ್ಕಾರ ಮುಂಚಿತವಾಗಿ ಪ್ರಚಾರ ಮಾಡಲಿ: ದುನಿಯಾ ವಿಜಯ್‌

Team Udayavani, Apr 6, 2021, 7:43 PM IST

fcnjrdtr

ಹರಿಹರ: ಕೋವಿಡ್‌-19 ಕಾರಣದಿಂದ ದಿಢೀರನೆ ಚಿತ್ರಮಂದಿರಗಳ ಪ್ರೇಕ್ಷಕರ ಮಿತಿಯನ್ನು ಶೇ. 50ಕ್ಕೆ ನಿರ್ಬಂಧಿ ಸಿರುವುದು ಸರಿಯಲ್ಲ ಎಂದು ಚಿತ್ರನಟ ದುನಿಯಾ ವಿಜಯ್‌ ಅಸಮಾಧಾನ ವ್ಯಕ್ತಪಡಿಸಿದರು.

ಕಾಗಿನೆಲೆ ಕನಕ ಗುರುಪೀಠದ ಬೆಳ್ಳೂಡಿ ಶಾಖಾ ಮಠದ ಐದನೇ ವಾರ್ಷಿಕೋತ್ಸವದ ಅಂಗವಾಗಿ ಹಮ್ಮಿಕೊಂಡಿದ್ದ ಎಸ್‌ಟಿ ಮೀಸಲಾತಿ ಹೋರಾಟದ ಪಾದಯಾತ್ರಿಗಳಿಗೆ ಸನ್ಮಾನ ಸಮಾರಂಭದಲ್ಲಿ ಅವರು ಮಾತನಾಡಿದರು. ಕೋವಿಡ್‌-19 ಹರಡುವುದನ್ನು ತಡೆಯಲು ವಿ ಧಿಸುವ ನಿರ್ಬಂಧ, ನಿಬಂಧನೆಗಳ ಕುರಿತು ಸರ್ಕಾರಗಳು ಸಾಧ್ಯವಾದಷ್ಟು ಮುಂಚಿತವಾಗಿ ಪ್ರಚಾರ ಮಾಡಬೇಕು ಎಂದರು. 1 ವರ್ಷದಿಂದ ನಾವು ಕೊರೊನಾ ವೈರಸ್‌ನ ದುಷ್ಪರಿಣಾಮಗಳನ್ನು ಎದುರಿಸುತ್ತಿದ್ದೇವೆ. ಕೊರೊನಾಕ್ಕಿಂತ ಬದುಕು ಮುಖ್ಯ. ಕೊರೊನಾ ಕಾರಣಕ್ಕೆ ಬದುಕಿನ ಬಂಡಿಯನ್ನು ನಿಲ್ಲಿಸಲಾಗದು. ಜನಜೀವನಕ್ಕೆ ಮಾರಕವಾಗುವ ಯಾವುದೇ ನಿರ್ಧಾರ ಕೈಗೊಳ್ಳುವ ಮುನ್ನ ಸರ್ಕಾರಗಳು ನೂರು ಬಾರಿ ಆಲೋಚಿಸಬೇಕು ಎಂದು ಸಲಹೆ ನೀಡಿದರು.

ಚಿತ್ರಮಂದಿರಗಳ ನಿರ್ಬಂಧದ ಬಗ್ಗೆ ಎರಡು ದಿನ ಮೊದಲೇ ತಿಳಿಸಿದ್ದರೆ “ಯುವರತ್ನ’ ಚಿತ್ರ ಬಿಡುಗಡೆ ಮಾಡುತ್ತಿರಲಿಲ್ಲ. ಯಾವುದೇ ಸಿನಿಮಾದ ಹಿಂದೆ ನೂರಾರು ಜನರ ಶ್ರಮವಿರುತ್ತದೆ, ನಿರ್ಮಾಪಕ ಸಾಲ ಮಾಡಿ ಕೋಟ್ಯಂತರ ರೂ. ಹೂಡಿರುತ್ತಾನೆ. ಅವನ ಬದುಕು ಕಿತ್ತುಕೊಳ್ಳಲು ಯಾರಿಗೂ ಅಧಿಕಾರವಿಲ್ಲ ಎಂದರು.

ಶ್ರೀ ನಿರಂಜನಾನಂದಪುರಿ ಸ್ವಾಮೀಜಿ, ಕೆಲ್ಲೋಡು ಶಾಖಾ ಮಠದ ಶ್ರೀ ಈಶ್ವರಾನಂದಪುರಿ ಶ್ರೀಗಳು ಸಾನ್ನಿಧ್ಯ ವಹಿಸಿದ್ದರು. ದುನಿಯಾ ವಿಜಯ್‌ ದಂಪತಿಗೆ ಮತ್ತು ನಿರ್ಮಾಪಕ ಕೆ.ಪಿ. ಶ್ರೀಕಾಂತ ಅವರಿಗೆ ಕಂಬಳಿ ಹೊದಿಸಿ ಸನ್ಮಾನಿಸಲಾಯಿತು. ಎಸ್‌ಟಿ ಮೀಸಲಾತಿ ಹೋರಾಟದ ಪಾದಯಾತ್ರೆಯಲ್ಲಿ ಸಕ್ರಿಯವಾಗಿ ಭಾಗಿಯಾಗಿದ್ದ 100ಕ್ಕೂ ಅಧಿಕ ಕುರುಬ ಸಮಾಜದ ಮುಖಂಡರು, ಅಭಿಮಾನಿಗಳನ್ನು ಶ್ರೀಮಠದ ವತಿಯಿಂದ ಗೌರವಿಸಲಾಯಿತು.

ಶಾಸಕ ಎಸ್‌. ರಾಮಪ್ಪ, ಜಿಪಂ ಮಾಜಿ ಅಧ್ಯಕ್ಷ ಜಿ. ದ್ಯಾಮಣ್ಣ, ದೂಡಾ ಅಧ್ಯಕ್ಷ ರಾಜನಹಳ್ಳಿ ಶಿವಕುಮಾರ್‌, ನಂದಿಗಾವಿ ಎನ್‌.ಎಚ್‌. ಶ್ರೀನಿವಾಸ್‌, ನಿವೃತ್ತ ಡಿವೈಎಸ್ಪಿ ದೇವರಬೆಳಕೆರೆ ದೇವೇಂದ್ರಪ್ಪ, ಎಂ. ನಾಗೇಂದ್ರಪ್ಪ, ಸಿ.ಎನ್‌. ಹುಲಿಗೇಶ್‌, ಕೆ.ಪಿ. ಗಂಗಾಧರ, ಬೀರಪ್ಪ, ಕುರುಬ ಸಮಾಜದ ಎಸ್‌ಟಿ ಮೀಸಲಾತಿ ಹೋರಾಟದ ರಾಜ್ಯಾಧ್ಯಕ್ಷ ಮಾಗೊದಿ ಮಂಜಣ್ಣ, ಜೆ.ಸಿ.ನಿಂಗಪ್ಪ ಇತರರು ಇದ್ದರು.

ಟಾಪ್ ನ್ಯೂಸ್

ಭಾರತ-ಇಂಗ್ಲೆಂಡ್‌ ಹೊಸ ಒಪ್ಪಂದದ ಪರಿಣಾಮ ನೀರವ್‌, ಮಲ್ಯ ಗಡೀಪಾರು ಇನ್ನು ಸಲೀಸು 

ಭಾರತ-ಇಂಗ್ಲೆಂಡ್‌ ಹೊಸ ಒಪ್ಪಂದದ ಪರಿಣಾಮ ನೀರವ್‌, ಮಲ್ಯ ಗಡೀಪಾರು ಇನ್ನು ಸಲೀಸು 

ಸುಳ್ಳುಸುದ್ದಿ ತಡೆಗೆ ಫೇಸ್‌ಬುಕ್‌ ನಿಂದ ಹೊಸ ಪ್ರಯೋಗ

ಸುಳ್ಳುಸುದ್ದಿ ತಡೆಗೆ ಫೇಸ್‌ಬುಕ್‌ ನಿಂದ ಹೊಸ ಪ್ರಯೋಗ

ಮನೆಯಲ್ಲೇ ಮದುವೆಗೆ ಅವಕಾಶ ಹಿನ್ನೆಲೆ : ಲಾಕ್‌ಡೌನ್‌ ಅವಧಿಯಲ್ಲಿ ಬಾಲ್ಯವಿವಾಹ ಹೆಚ್ಚಳ ಆತಂಕ

ಮನೆಯಲ್ಲೇ ಮದುವೆಗೆ ಅವಕಾಶ ಹಿನ್ನೆಲೆ : ಲಾಕ್‌ಡೌನ್‌ ಅವಧಿಯಲ್ಲಿ ಬಾಲ್ಯವಿವಾಹ ಹೆಚ್ಚಳ ಆತಂಕ

oxygen-container-came-from-isrel-to-yadagiri-report

ಯಾದಗಿರಿಗೆ ಇಸ್ರೇಲ್‌ ನಿಂದ ಬಂತು ಆಕ್ಸಿಜನ್ ಉತ್ಪಾದಿಸುವ ಘಟಕದ ಬೃಹತ್ ಕಂಟೇನರ್

ಕೊವಿಶೀಲ್ಡ್‌ನ ಒಂದು ಡೋಸ್‌ನಿಂದ ಶೇ.80ರಷ್ಟು ರಕ್ಷಣೆ : ಪಬ್ಲಿಕ್‌ ಹೆಲ್ತ್‌ ವರದಿ

ಕೊವಿಶೀಲ್ಡ್‌ನ ಒಂದು ಡೋಸ್‌ನಿಂದ 80% ರಕ್ಷಣೆ : ಪಬ್ಲಿಕ್‌ ಹೆಲ್ತ್‌ ಇಂಗ್ಲೆಂಡ್‌ ವರದಿ

ಪೊಲಿಪು : ತುರ್ತುಚಿಕಿತ್ಸೆಗೆ ಆಕ್ಸಿಜನ್ ಸಿಲಿಂಡರ್ ಲೋಕಾರ್ಪಣೆ

ಪೊಲಿಪು : ತುರ್ತುಚಿಕಿತ್ಸೆಗೆ ಆಕ್ಸಿಜನ್ ಸಿಲಿಂಡರ್ ಲೋಕಾರ್ಪಣೆ

Smalla Scale Industry – Jagadeesh Shettar

ಕೈಗಾರಿಕೆಗಳಿಗೆ ವಿಧಿಸುವ ಸಮ್ಮತಿ ಶುಲ್ಕದ ಪರಿಷ್ಕರಣೆಗೆ ನೂತನ ಸೂತ್ರ ಸಿದ್ಧ: ಶೆಟ್ಟರ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

jftytyt

ಚಿತ್ರರಂಗದ 3 ಸಾವಿರ ಕುಟುಂಬಗಳಿಗೆ ದಿನಸಿ ಕಿಟ್‌ ವಿತರಣೆಗೆ ಮುಂದಾದ ನಟ ಉಪೇಂದ್ರ

iouyhijghg

ರಾಮು ಅಗಲಿಕೆಯಿಂದ ಹೃದಯ ಚೂರಾಗಿದೆ : ನಟಿ ಮಾಲಾಶ್ರೀ

dsggg

ಲಸಿಕೆ ಪಡೆಯುವ ಮುನ್ನ ರಕ್ತದಾನ ಮಾಡಿ ಮಾದರಿಯಾದ ವಸಿಷ್ಠ ಸಿಂಹ

ghghtutu

ಮಾಸ್ಟರ್‌ಶೆಫ್ ಆಗಲಿದ್ದಾರೆ ಕಿಚ್ಚ

fgdfgrtrtr

ಬಿಗ್‍ಬಾಸ್ ಮಾಜಿ ಸ್ಪರ್ಧಿ ಸೋನು ಪಾಟೀಲ್ ತಾಯಿಯ ಚಿಕಿತ್ಸೆಗೆ ಲಕ್ಷಾಂತರ ರೂ.ನೀಡಿದ ನಟ ಸುದೀಪ್

MUST WATCH

udayavani youtube

ಶೀರೂರು ಮಠದ ಉತ್ತರಾಧಿಕಾರಿ ಪಟ್ಟಾಭಿಷೇಕದ ಪೂರ್ವಭಾವಿ ಧಾರ್ಮಿಕ ವಿಧಿ ವಿಧಾನ

udayavani youtube

ಕೋವಿಡ್‌ ಸೋಂಕಿತರಿಗೆ ಉಚಿತ ಆ್ಯಂಬುಲೆನ್ಸ್‌ ಸೇವೆ ನೀಡಲು ಮುಂದಾದ ಫಾಲ್ಕನ್‌ ಕ್ಲಬ್‌

udayavani youtube

ರಸ್ತೆ ಮಧ್ಯ ಉರುಳಿ ಬಿದ್ದ ಪಿಕ್ಅಪ್ ವಾಹನವನ್ನು ಎಳೆದು ನಿಲ್ಲಿಸಿದ ಸ್ಥಳೀಯ ಆಫ್ ರೋಡರ್ ಟೀಮ್

udayavani youtube

Vaccine ಆಗ ಯಾರಿಗೂ ಬೇಡವಾಗಿತ್ತು

udayavani youtube

ಸರ್ಕಾರ ಪ್ರತಿ ಬಡ ಕುಟುಂಬಕ್ಕೆ 10 ಸಾವಿರ ನೀಡಬೇಕು : ಡಿಕೆಶಿ

ಹೊಸ ಸೇರ್ಪಡೆ

11-21

ಸೋಂಕಿತರ ಸಂಬಂಧಿಗಳಿಗೆ ಉಚಿತ ದಾಸೋಹ

ಭಾರತ-ಇಂಗ್ಲೆಂಡ್‌ ಹೊಸ ಒಪ್ಪಂದದ ಪರಿಣಾಮ ನೀರವ್‌, ಮಲ್ಯ ಗಡೀಪಾರು ಇನ್ನು ಸಲೀಸು 

ಭಾರತ-ಇಂಗ್ಲೆಂಡ್‌ ಹೊಸ ಒಪ್ಪಂದದ ಪರಿಣಾಮ ನೀರವ್‌, ಮಲ್ಯ ಗಡೀಪಾರು ಇನ್ನು ಸಲೀಸು 

11-20

ಪೊಲೀಸರಿಂದ ಪಾಠ; ಕೆಲವರ ಪೇಚಾಟ!

11-19

ಕೊರೊನಾಕ್ಕೆ ಹೆದರಿ ನಿವೃತ್ತ ಉಪ ತಹಶೀಲ್ದಾರ್‌ ಆತ್ಮಹತ್ಯೆ

11-18

ಕೊರೊನಾ ಕಠಿಣ ಕರ್ಫ್ಯೂ: ಕಾಫಿನಾಡು ಸ್ತಬ್ಧ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.