“ಕಾಗೆ ಮೊಟ್ಟೆ” ಚಿತ್ರ ನೋಡಿ ಭಾವುಕರಾದ ನಟ ಜಗ್ಗೇಶ್
Team Udayavani, Oct 1, 2021, 2:43 PM IST
ಬೆಂಗಳೂರು: ತಮ್ಮ ಪುತ್ರ ಗುರುರಾಜ್ ನಟಿಸಿರುವ ‘ಕಾಗೆ ಮೊಟ್ಟೆ’ ಸಿನಿಮಾ ಬಿಡುಗಡೆಯಾದ ಮೊದಲ ದಿನವೇ ಕಣ್ತುಂಬಿಕೊಂಡಿರುವ ನಟ ಜಗ್ಗೇಶ್ ಭಾವುಕರಾಗಿದ್ದಾರೆ.
ಇಂದು ಬಿಡುಗಡೆಯಾಗಿರುವ ಕಾಗೆ ಮೊಟ್ಟೆ ಚಿತ್ರಕ್ಕೆ ಪ್ರೇಕ್ಷಕರಿಂದ ಒಳ್ಳೆಯ ಪ್ರತಿಕ್ರಿಯೆ ಸಿಕ್ಕಿದೆ. ಫಸ್ಟ್ ಡೇ ಫಸ್ಟ್ ಶೋ ‘ಕಾಗೆಮೊಟ್ಟೆ’ ನೋಡಿ ಜನ ಎಂಜಾಯ್ ಮಾಡ್ತಿರುವ ವಿಡಿಯೋವನ್ನು ಟ್ವಿಟ್ಟರ್‌ನಲ್ಲಿ ಶೇರ್ ಮಾಡಿರುವ ಜಗ್ಗೇಶ್ ಸಂತಸ ಹಂಚಿಕೊಂಡಿದ್ದಾರೆ. ”ಈ ಚಪ್ಪಾಳೆಯ ಹರ್ಷೋಧ್ಘಾರ ನನ್ನ ಕುಟುಂಬದ ಮೇಲೆ ಕನ್ನಡಿಗರ ಪ್ರೀತಿ ನೋಡಿ ಗುರುರಾಜನ ಅಪ್ಪನಾಗಿ ಕಣ್ಣು ಒದ್ದೆಯಾಯಿತು. ‘ಭಂಡ ನನ್ನ ಗಂಡ’ ದಿನಗಳಲ್ಲಿ ಕಂಡ ಆನಂದ ನೆನಪಾಯಿತು. ಕೋಟಿ ವಂದನೆಗಳು ಆತ್ಮೀಯ ಹೃದಯಗಳಿಗೆ” ಎಂದು ಜಗ್ಗೇಶ್ ಕೃತಜ್ಞತೆ ವ್ಯಕ್ತಪಡಿಸಿದರು.
ಈಚಪ್ಪಾಳೆಯ ಹರ್ಷೋಧ್ಘಾರ
ನನ್ನ ಕುಟುಂಬದ ಮೇಲೆ ಕನ್ನಡಿಗರಪ್ರೀತಿ ನೋಡಿ ಗುರುರಾಜನ ಅಪ್ಪನಾಗಿ ಕಣ್ಣು ಒದ್ದೆಯಾಯಿತು.
ಭಂಡ ನನ್ನ ಗಂಡ ದಿನಗಳಲ್ಲಿ ಕಂಡ ಆನಂದ ನೆನಪಾಯಿತು.
ಕೋಟಿ ವಂದನೆಗಳು ಆತ್ಮೀಯ ಹೃದಯಗಳಿಗೆ.ಕೊರೋನ ಸಂಕಷ್ಟದಿಂದ ಸಿನಿಮಾರಂಗ ಹೊರಬಂದು ಮತ್ತೆ ಎದ್ದುನಿಲ್ಲಲಿ #ಕೋಟಿಗೊಬ್ಬ #ಸಲಗ #ಶಿವಣ್ಣ
ಮುಂದಿನ ಚಿತ್ರಕ್ಕೆ best of luck pic.twitter.com/cxyR9ROV7h— ನವರಸನಾಯಕ ಜಗ್ಗೇಶ್ (@Jaggesh2) October 1, 2021
ಇನ್ನು ಮುಂದಿನ ದಿನಗಳಲ್ಲಿ ತೆರೆಕಾಣಲಿರುವ ಕೋಟಿಗೊಬ್ಬ, ಸಲಗ ಹಾಗೂ ಶಿವಣ್ಣನ ಭಜರಂಗಿ 2 ಚಿತ್ರಗಳಿಗೆ ಒಳ್ಳೆಯದಾಗಲಿ ಎಂದು ಜಗ್ಗಣ್ಣ ಶುಭ ಕೋರಿದ್ದಾರೆ.
ನವರಸ ನಾಯಕ ಜಗ್ಗೇಶ್ ಹಿರಿಯ ಪುತ್ರ ಗುರುರಾಜ್ ನಟನೆಯ ‘ಕಾಗೆಮೊಟ್ಟೆ’ ಚಿತ್ರ ಬಿಡುಗಡೆಯಾಗಿದೆ. ಕೊರೊನಾದಿಂದ ಬಹಳಷ್ಟು ದಿನ ಚಿತ್ರಮಂದಿರಗಳು ಮುಚ್ಚಿದ್ದವು. ಆಮೇಲೆ ಸ್ವಲ್ಪ ದಿನ 50ರಷ್ಟು ಆಸನ ಭರ್ತಿಯೊಂದಿಗೆ ಪ್ರದರ್ಶನ ಮುಂದುವರಿಸಿದವು. ಈಗ ಅಕ್ಟೋಬರ್ 1 ರಿಂದ 100% ಅನುಮತಿ ಸಿಕ್ಕಿದೆ. ಪೂರ್ಣ ಪ್ರಮಾಣದ ಅವಕಾಶ ಸಿಕ್ಕಿದ ನಂತರ ತೆರೆಗೆ ಬಂದಿರುವ ಮೊದಲ ಚಿತ್ರ ಕಾಗೆಮೊಟ್ಟೆ.