ರವಿಚಂದ್ರನ್ ಚಿನ್ನದ ಹೃದಯದ ವ್ಯಕ್ತಿ : ನಟ ಜಗ್ಗೇಶ್ ಹೀಗೇ ಹೇಳಿದ್ದೇಕೆ ?
Team Udayavani, Aug 20, 2021, 6:35 PM IST
ಬೆಂಗಳೂರು : ಕ್ರೇಜಿಸ್ಟಾರ್ ರವಿಚಂದ್ರನ್ ಅವರು ಬಂಗಾರದ ಹೃದಯ ಹೊಂದಿರುವ ವ್ಯಕ್ತಿ ಎಂದು ಸ್ಯಾಂಡಲ್ವುಡ್ ನಟ ಜಗ್ಗೇಶ್ ಅವರು ನುಡಿದಿದ್ದಾರೆ.
ಚಿತ್ರರಂಗದಲ್ಲಿ ತಮ್ಮ ಆರಂಭಿಕ ದಿನಗಳ ಕುರಿತು ಮಾತನಾಡಿರುವ ಜಗ್ಗೇಶ್ ಅವರು, ಗಣೇಶನ ಹಬ್ಬದಂದು 200 ರೂ. ಕೇಳಿದ್ದಕ್ಕೆ ರವಿಚಂದ್ರನ್ ಅವರು 500 ರೂ. ಕೊಟ್ಟು ಕಳುಹಿಸಿದ ಪ್ರಸಂಗವನ್ನು ನೆನೆದು ಭಾವುಕರಾದರು.
ಇತ್ತೀಚಿಗೆ ರಂಗನಾಯಕ ಸಿನಿಮಾ ಮಾಧ್ಯಮಗೋಷ್ಠಿಯಲ್ಲಿ ಹಿಂದಿನ ದಿನಗಳನ್ನು ಸ್ಮರಿಸಿದ ಜಗ್ಗೇಶ್ ಅವರು, ಅಂದು ಹಿರಿಯ ಕಲಾವಿದರ ಕಿರಿಯರ ಕಷ್ಟ-ಸುಖ ವಿಚಾರಿಸುತ್ತಿದ್ದಾರೆ. ಕಷ್ಟದಲ್ಲಿರುವವರಿಗೆ ಸಹಾಯ ಮಾಡುತ್ತಿದ್ದರು. ಅದರಲ್ಲೂ ಅಂಬರೀಶ್ ಹಾಗೂ ಪ್ರಭಾಕರ್ ಅವರನ್ನಂತೂ ಮರೆಯಲು ಸಾಧ್ಯವಿಲ್ಲ. ತಮ್ಮ ಸಿನಿಮಾ ತಂಡದ ಕಿರಿಯ ಕಲಾವಿದರ ಬಗ್ಗೆ ಅವರು ತುಂಬಾ ಕಾಳಜಿ ವಹಿಸುತ್ತಿದ್ದರು. ಅವರೇ ಬಂದು ಕಷ್ಟ ಸುಖ ಆಲಿಸುವವರು. ಆದರೆ, ಇಂದು ಯಾಂತ್ರಿಕೃತ ಬದುಕು ಆಗಿದೆ ಎಂದರು ಜಗ್ಗೇಶ್.
ಇನ್ನು ಜಗ್ಗೇಶ್ ಅವರು ಸಣ್ಣಪುಟ್ಟ ಪಾತ್ರಗಳನ್ನು ಮಾಡುತ್ತ ಹೀರೋ ಆದವರು. ಅವರು ರವಿಚಂದ್ರನ್ ಅವರ ರಣಧೀರ ಹಾಗು ಯುದ್ಧಕಾಂಡ ಸಿನಿಮಾಗಳಲ್ಲಿ ಸಹ ಕಲಾವಿದನಾಗಿ ನಟಿಸಿದ್ದಾರೆ. ರವಿಚಂದ್ರನ್ ಹಾಗೂ ಜಗ್ಗೇಶ್ ಅವರದು ಹಳೆಯ ಸ್ನೇಹ. ಅದು ಇಂದಿಗೂ ಹಾಗೆ ನಡೆದುಕೊಂಡು ಬಂದಿದೆ. ಈ ಹಿಂದೆಯು ಸಾಕಷ್ಟು ಭಾರಿ ರವಿಮಾಮನ ಹೃದಯ ವೈಶಾಲ್ಯತೆ ಬಗ್ಗೆ ಜಗ್ಗೇಶ್ ಅವರು ನುಡಿದಿದ್ದುಂಟು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
‘ಕಟ್ಟಿಂಗ್ ಶಾಪ್’ನಲ್ಲಿ ರ್ಯಾಪ್ ಸಾಂಗ್!
ಥಿಯೇಟರ್ ನಲ್ಲಿ ‘ಟ್ವೆಂಟಿ ಒನ್ ಹವರ್ಸ್’; ಡಾಲಿ ಅಭಿನಯದ ಚಿತ್ರ ಮೇ.20ಕ್ಕೆ ರಿಲೀಸ್
ಗರುಡ ಜೊತೆ ಐಂದ್ರಿತಾ ಎಂಟ್ರಿ; ಮೇ 20ಕ್ಕೆ ಚಿತ್ರ ತೆರೆಗೆ
ತಾ ಮುಂದು, ನಾ ಮುಂದು ಎನ್ನುತ್ತಿರುವ ಹೊಸಬರು; ಈ ವಾರ ಹತ್ತು ಚಿತ್ರಗಳು ತೆರೆಗೆ?
‘ವೀಲ್ ಚೇರ್’ ನಲ್ಲಿ ರಾಮ್ ಚೇತನ್; ಚೊಚ್ಚಲ ಚಿತ್ರದ ಬಗ್ಗೆ ರೋಮಿಯೋ ನಿರೀಕ್ಷೆಯ ಮಾತು…