Kantara effect: ಗಣೇಶನ ವಿಗ್ರಹಕ್ಕೆ ಪಂಜುರ್ಲಿ ದೈವದ ಲುಕ್.! ಕರಾವಳಿಯಲ್ಲಿ ಆಕ್ರೋಶ
Team Udayavani, Sep 4, 2024, 4:36 PM IST
ಮುಂಬಯಿ: ರಿಷಬ್ ಶೆಟ್ಟಿ (Rishab Shetty) ಅವರ ʼಕಾಂತಾರʼ (Kantara) ಸಿನಿಮಾ ಬಂದ ಬಳಿಕ ತುಳುನಾಡಿನ ದೈವಗಳ ಮೇಲಿನ ನಂಬಿಕೆ ಎಲ್ಲೆಡೆ ಹಬ್ಬಿದೆ. ಆದರೆ ʼಕಾಂತಾರʼ ರಿಲೀಸ್ ಬಳಿಕ ದೈವಗಳ ವೇಷ -ಭೂಷಣ ತೊಟ್ಟು ದೈವಗಳ ಆರಾಧಕರ ಮನಸ್ಸಿಗೆ ಧಕ್ಕೆ ಆಗುವ ವಿಚಾರಗಳು ಕೂಡ ನಡೆದಿದೆ.
ಕರಾವಳಿಯಲ್ಲಿ ದೈವಗಳ ಆರಾಧನೆ ಇತ್ತೀಚೆಗಿನ ವರ್ಷಗಳಲ್ಲಿ ಆಚರಿಸಿಕೊಂಡು ಬಂದಿರುವಂಥದ್ದಲ್ಲ, ಸಾವಿರಾರು ವರ್ಷಗಳಿಂದಲೂ ದೈವ -ದೇವರುಗಳ ಚಾಕರಿಯನ್ನು ಮಾಡುತ್ತಾ ಬಂದಿರುವ ಅನೇಕ ಕುಟುಂಬಗಳು ನಮ್ಮಲಿದೆ.
ದೈವಗಳ ವಿಚಾರವನ್ನಿಟ್ಟುಕೊಂಡು ಹಾಸ್ಯಾಸ್ಪದವಾಗಿ ವರ್ತಿಸುವವರ ವಿರುದ್ಧ ತುಳುನಾಡಿಗರು ಆಕ್ರೋಶ ವ್ಯಕ್ತಪಡಿಸುತ್ತಲೇ ಇದ್ದಾರೆ. ಅನೇಕ ಬಾರಿ ಹಲವರನ್ನು ತರಾಟೆಗೆ ತೆಗೆದುಕೊಂಡದ್ದೂ ಇದೆ.
ಮುಂಬಯಿನಲ್ಲಿನ ಗಣೇಶ್ ಚತುರ್ಥಿ ಹಬ್ಬಕ್ಕಾಗಿ ತಯಾರಾದ ಪಂಜುರ್ಲಿ ದೈವದ ಅವತಾರವುಳ್ಳ ಗಣೇಶನ ವಿಗ್ರಹವೊಂದರ ಫೋಟೋ ಹಾಗೂ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
View this post on Instagram
ʼಕಾಂತಾರʼ ಸಿನಿಮಾದಲ್ಲಿನ ಪಂಜುರ್ಲಿ ದೈವ ಲುಕ್‌ಗೆ ಗಣೇಶನ ಸೊಂಡಿಲು ಕೂರಿಸಿರುವ ಫೋಟೋ, ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದ್ದು, ಇದನ್ನು ಗಮನಿಸಿರುವ ಕರಾವಳಿ ಭಾಗದ ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಟ್ರೋಲ್ ಪೇಜ್ ಗಳಲ್ಲಿ ವಿಡಿಯೋ ಹಂಚಿಕೊಂಡು ಆಕ್ರೋಶ ಹೊರಹಾಕುತ್ತಿದ್ದಾರೆ.
ಮಹಾರಾಷ್ಟ್ರದಲ್ಲಿ ಕೋಪರ್ಖೈರನೆನಲ್ಲಿ ಈ ಗಣೇಶ ವಿಗ್ರಹವನ್ನು ಸಿದ್ಧಪಡಿಸಲಾಗಿದ್ದು,ʼವಿನಾಯಕ ಪಗಾರೆ ಆರ್ಟ್ ವರ್ಕ್ʼ ಈ ವಿಡಿಯೋವನ್ನು ಹಂಚಿಕೊಂಡಿದ್ದು, ವೈರಲ್ ಆಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
High Court ಸುನಿಲ್ ಕುಮಾರ್ ವಿರುದ್ಧ ಕ್ರಿಮಿನಲ್ ಕೇಸ್ ರದ್ದತಿಗೆ ನಕಾರ
Congress Govt; ಕರ್ನಾಟಕವೇನು ಇಸ್ಲಾಮಿಕ್ ರಿಪಬ್ಲಿಕ್ಕಾ: ಅಶೋಕ್ ಆಕ್ರೋಶ
Nagamangala Case: “ಟಾರ್ಗೆಟ್ ಮಾಡಿ ಅಂಗಡಿಗಳಿಗೆ ಬೆಂಕಿ’: ಛಲವಾದಿ ನಾರಾಯಣಸ್ವಾಮಿ
Nagamangala Case ದುಷ್ಕರ್ಮಿಗಳ ರಕ್ಷಣೆ: ತೇಜಸ್ವಿ ಸೂರ್ಯ
Ramanagara: ಎಚ್‌ಡಿಕೆಯನ್ನೇ ತನಿಖಾಧಿಕಾರಿ ಮಾಡಿ: ಶಾಸಕ ಬಾಲಕೃಷ್ಣ ಲೇವಡಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.