ಚಿರಂಜೀವಿ ಸಿನಿಮಾ ಮೀರಿಸಿ ಎರಡು ದಿನದಲ್ಲೇ ಹತ್ತು ಕೋಟಿ ಬಾಚಿದ ‘ಕಾಂತಾರ’ ತೆಲುಗು ಆವೃತ್ತಿ
Team Udayavani, Oct 17, 2022, 2:24 PM IST
ರಿಷಬ್ ಶೆಟ್ಟಿ ನಿರ್ದೇಶನದ ‘ಕಾಂತಾರ’ ಚಿತ್ರವು ಇದೀಗ ಬೇರೆ ಭಾಷೆಗಳಲ್ಲೂ ಸಖತ್ ಸದ್ದು ಮಾಡುತ್ತಿದೆ. ಸ್ಯಾಂಡಲ್ ವುಡ್ ನಲ್ಲಿ ಯಶಸ್ವಿಯಾದ ಚಿತ್ರವು ಇದೀಗ ಹಿಂದಿ ಮತ್ತು ತೆಲುಗು ಭಾಷೆಗಳಲ್ಲೂ ಉತ್ತಮ ಪ್ರತಿಕ್ರಿಯೆ ಪಡೆದುಕೊಳ್ಳುತ್ತಿದೆ.
ಮೊದಲ ದಿನವೇ 4 ಕೋಟಿ ರೂ. ಗಳಿಸಿದ “ಕಾಂತಾರ” ತೆಲುಗು ಆವೃತ್ತಿಯು, ಎರಡನೇ ದಿನವು ತನ್ನ ಓಟವನ್ನು ಮುಂದುವರಿಸಿದೆ. ಮತ್ತೆ ಆರು ಕೋಟಿ ರೂ. ಗಳಿಸಿರುವ ಕಾಂತಾರ ತೆಲುಗು ಆವೃತ್ತಿ ಎರಡೇ ದಿನದಲ್ಲಿ ಹತ್ತು ಕೋಟಿ ಕಲೆಕ್ಷನ್ ಮಾಡಿದೆ.
ರಿಷಬ್ ಶೆಟ್ಟಿ ಅವರು ನಟಿಸಿ ನಿರ್ದೇಶಿಸಿರುವ ಕಾಂತಾರ ಚಿತ್ರವನ್ನು ಹೊಂಬಾಳೆ ಫಿಲಂಸ್ ಬ್ಯಾನರ್ ನಲ್ಲಿ ವಿಜಯ್ ಕಿರಗಂದೂರು ನಿರ್ಮಿಸಿದ್ದಾರೆ. ಕನ್ನಡದಲ್ಲಿ ಸೆ.30ರಂದು ತೆರೆಕಂಡ ಚಿತ್ರವನ್ನು ‘ಗೀತಾ ಆರ್ಟ್ಸ್’ ತೆಲುಗಿನಲ್ಲಿ ಅ.15ರಂದು ಬಿಡುಗಡೆ ಮಾಡಿದೆ.
ಇದನ್ನೂ ಓದಿ:ಅತಿರೇಕದ ವರ್ತನೆಯೊಂದಿಗೆ “ಕಾಂತಾರ” ವಿಮರ್ಶೆ ಮಾಡಿದ ಯೂಟ್ಯೂಬರ್: ಹಲವರ ಆಕ್ರೋಶ
“ಕಾಂತಾರ” ಚಿತ್ರಕ್ಕೆ ಬೇಡಿಕೆ ಹೆಚ್ಚುತ್ತಿದ್ದು, ಇದು ಮೆಗಾಸ್ಟಾರ್ ಚಿರಂಜೀವಿ ಅವರ “ಗಾಡ್ಫಾದರ್” ಸಿನಿಮಾಗೆ ದುಃಸ್ವಪ್ನವಾಗಿ ಕಾಡಿದೆ. ಹೆಚ್ಚಿನ ಸಂಖ್ಯೆಯ ಚಿತ್ರಮಂದಿರಗಳು ಮತ್ತು ಉತ್ತಮ ವಿಮರ್ಶೆಗಳ ಹೊರತಾಗಿಯೂ, “ಗಾಡ್ಫಾದರ್” ಎರಡನೇ ವಾರದಲ್ಲಿ ತನ್ನ ಕಲೆಕ್ಷನ್ ನಲ್ಲಿ ಹೆಚ್ಚಿನ ಸುಧಾರಣೆ ಕಂಡಿಲ್ಲ.
ಚಿತ್ರದಲ್ಲಿ ರಿಷಬ್ ಶೆಟ್ಟಿ ಜೊತೆಗೆ ಸಪ್ತಮಿ ಗೌಡ, ಅಚ್ಯುತ್ ಕುಮಾರ್, ಕಿಶೋರ್, ಪ್ರಮೋದ್ ಶೆಟ್ಟಿ ಮೊದಲಾದವರು ನಟಿಸಿದ್ದಾರೆ. ಅಜನೀಶ್ ಲೋಕನಾಥ್ ಸಂಗೀತವಿರುವ ಚಿತ್ರಕ್ಕೆ ಅರವಿಂದ ಕಶ್ಯಪ್ ಕ್ಯಾಮರಾ ಕೆಲಸವಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಕಾಂಗ್ರೆಸ್ ಸುಳ್ಳನ್ನು ಜನ ನಂಬಲ್ಲ: ಗೋವಿಂದ ಕಾರಜೋಳ
ಹಗರಿಬೊಮ್ಮನಹಳ್ಳಿ: ಶುದ್ಧ ನೀರಿನ ಘಟಕಕ್ಕೆ ಉದ್ಘಾಟನೆ ಭಾಗ್ಯವೆಂದು?
Harihara; ಅಕ್ರಮ ಮರಳುಗಾರಿಕೆ ಮಾಹಿತಿ ನೀಡಿದ್ದಕ್ಕೆ ಬಿಜೆಪಿ ಶಾಸಕರಿಗೆ ಜೀವ ಬೆದರಿಕೆ
Food: ಯಾವತ್ತಾದ್ರೂ ಮಾವಿನ ಕಾಯಿ ಬಜ್ಜಿ ಮಾಡಿದ್ದೀರಾ..? ಇಲ್ಲ ಅಂದ್ರೆ ಟ್ರೈ ಮಾಡಿ ನೋಡಿ
Maski: ಒಂದೇ ರಾತ್ರಿ ಎರಡು ಮನೆಗಳಲ್ಲಿ ಕಳ್ಳತನ; ಸ್ಥಳೀಯರಲ್ಲಿ ಆತಂಕ