ಕಪಟ ನಾಟಕ ಪಾತ್ರಧಾರಿಯ ಗೆಲುವಿನ ಸವಾರಿ!

Team Udayavani, Nov 13, 2019, 1:16 PM IST

ಮತ್ತೆ ಕನ್ನಡದ ಪ್ರೇಕ್ಷಕರು ಹೊಸಾ ಅಲೆಯ ಸಿನಿಮಾವೊಂದನ್ನು ಮನಸಾರೆ ಮೆಚ್ಚಿಕೊಂಡು ಗೆಲ್ಲಿಸಿದ್ದಾರೆ. ಈ ಪ್ರೀತಿ ಪಡೆದುಕೊಂಡಿರೋ ಕಪಟ ನಾಟಕ ಪಾತ್ರಧಾರಿ ಚಿತ್ರವೀಗ ಭರ್ಜರಿ ಗೆಲುವಿನತ್ತ ಮುನ್ನುಗ್ಗುತ್ತಿದೆ. ಕ್ರಿಶ್ ನಿರ್ದೇಶನದ ಈ ಸಿನಿಮಾ ಚೆಂದದ ಹಾಡುಗಳು ಮತ್ತು ಟ್ರೇಲರ್ ಮೂಲಕವೇ ಆರಂಭಿಕವಾಗಿ ಪ್ರೇಕ್ಷಕರನ್ನು ಸೆಳೆದುಕೊಂಡಿತ್ತು. ಈ ಮೂಲಕ ಮೂಡಿಕೊಂಡಿದ್ದ ಅಗಾಧ ನಿರೀಕ್ಷೆಗಳನ್ನು ಮೀರಿಸುವಂಥಾ ಗಟ್ಟಿ ಕಂಟೆಂಟಿನ ಮೂಲಕ ಕಪಟ ನಾಟಕ ಪಾತ್ರಧಾರಿ ಗೆಲುವಿನ ಸವಾರಿ ಆರಂಭಿಸಿದೆ.

ಈ ಮೂಲಕ ಮತ್ತೊಂದು ಹೊಸಾ ಅಲೆಯ ಚಿತ್ರವನ್ನು ಪ್ರೇಕ್ಷಕರು ಗೆಲ್ಲಿಸಿದಂತಾಗಿದೆ. ಇದು ಕ್ರಿಶ್ ನಿರ್ದೇಶನದ ಮೊದಲ ಚಿತ್ರ. ಆದರೆ ಈ ಮೊದಲ ಹೆಜ್ಜೆಯಲ್ಲಿಯೇ ಅವರು ಪ್ರೇಕ್ಷಕರ ಆಕಾಂಕ್ಷೆಯ ನಾಡಿ ಮಿಡಿತವನ್ನು ಸರಿಯಾಗಿ ಅರ್ಥೈಸಿಕೊಂಡೇ ಮುಂದಡಿ ಇಟ್ಟಿದ್ದಾರೆ. ಎಲ್ಲ ವಯೋಮಾನದ, ಎಲ್ಲ ವರ್ಗದ ಪ್ರೇಕ್ಷಕರನ್ನೂ ತಣಿಸುವಂಥಾ ಕಂಟೆಂಟಿನೊಂದಿಗೆ ಈ ಸಿನಿಮಾವನ್ನು ಕಟ್ಟಿ ಕೊಟ್ಟಿದ್ದಾರೆ. ಕಥೆ, ನಟನೆ, ಹಿನ್ನೆಲೆ ಸಂಗೀತ, ಛಾಯಾಗ್ರಹಣ ಸೇರಿದಂತೆ ಎಲ್ಲವೂ ಒಂದಕ್ಕೊಂದು ಪೂರಕವಾಗಿ ಮೂಡಿ ಬಂದಿರೋ ಈ ಸಿನಿಮಾವೀಗ ಪ್ರೇಕ್ಷಕರೆಲ್ಲರ ಪ್ರೀತಿಗೆ ಪಾತ್ರವಾಗಿದೆ. ಇದುವೇ ಮತ್ತಷ್ಟು ಪ್ರೇಕ್ಷಕರನ್ನು ಚಿತ್ರಮಂದಿರದತ್ತ ಕೈ ಹಿಡಿದು ಕರೆತರುತ್ತಿದೆ.

ಇಲ್ಲಿ ಪ್ರಧಾನವಾಗಿ ಪ್ರೇಕ್ಷಕರನ್ನು ಆವರಿಸಿಕೊಂಡಿರೋದು ಹಲವಾರು ಕೊಂಬೆ, ಕೋವೆ, ಟ್ವಿಸ್ಟಗಳನ್ನು ಹೊಂದಿರೋ ಮಜವಾದ ಕಥೆ. ಮಧ್ಯಮವರ್ಗದ ಹುಡುಗರ ಆತ್ಮಕಥೆಯಂತಿರೋ ಈ ಚಿತ್ರ ಎಲ್ಲ ವಯೋಮಾನದವರನ್ನೂ ಕೂಡಾ ಒಂದೇ ಸಲಕ್ಕೆ ಆವರಿಸಿಕೊಳ್ಳುತ್ತದೆ. ಸಣ್ಣ ಸುಳಿವೂ ಬಿಟ್ಟು ಕೊಡದಂತೆ ರೋಚಕ ಯಾತ್ರೆ ಮಾಡಿಸೋ ಈ ಕಥೆ ಒಂದೇ ಸಲಕ್ಕೆ ಎಲ್ಲರಿಗೂ ಆಪ್ತವಾಗುವಂತಿದೆ. ಅದುವೇ ಈ ಸಿನಿಮಾದ ನಿಜವಾದ ಹೆಚ್ಚುಗಾರಿಕೆ. ಬಾಲು ನಾಗೇಂದ್ರರ ಅದ್ಭುತ ನಟನೆಗೆ ಸಂಗೀತಾ ಭಟ್ ಸೇರಿದಂತೆ ಇಡೀ ತಾರಾಗಣವೇ ಸಾಥ್ ಕೊಟ್ಟಿದೆ. ಇದೆಲ್ಲದರಾಚೆಗೆ ಭರ್ಜರಿ ಮನೋರಂಜನೆಯನ್ನಿಟ್ಟುಕೊಂಡಿರೋ ಕಪಟ ನಾಟಕ ಪಾತ್ರಧಾರಿ ಗೆಲುವನ್ನು ತನ್ನದಾಗಿಸಿಕೊಂಡಿದೆ.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

  • ಪುನೀತ್‌ರಾಜಕುಮಾರ್‌ ಅಭಿನಯದ "ಜೇಮ್ಸ್‌' ಶುರುವಾಗಿದ್ದು ಗೊತ್ತೇ ಇದೆ. ಸದ್ಯಕ್ಕೆ ಒಂದೆರೆಡು ಮಾತಿನ ದೃಶ್ಯ ಹಾಗು ಫೈಟ್‌ ಬಿಟ್‌ ಚಿತ್ರೀಕರಣಗೊಂಡಿದ್ದು,...

  • ನಟ ಧನಂಜಯ್‌ ಅಭಿನಯದ "ಪಾಪ್‌ಕಾರ್ನ್ ಮಂಕಿ ಟೈಗರ್‌' ಚಿತ್ರ ಮೂರು ದಿನಗಳ ಹಿಂದಷ್ಟೇ ತೆರೆಕಂಡಿದೆ. "ಟಗರು' ಚಿತ್ರದ ಸೂಪರ್‌ ಹಿಟ್‌ ಸಕ್ಸಸ್‌ ಬಳಿಕ ನಿರ್ದೇಶಕ "ದುನಿಯಾ'...

  • ಕನ್ನಡದಲ್ಲಿ ಹೊಸಬರ ಚಿತ್ರಗಳ ಸಂಖ್ಯೆ ಹೆಚ್ಚುತ್ತಲೇ ಇದೆ. ಆ ಸಾಲಿಗೆ ಈಗ "ಒಂದು ಗಂಟೆಯ ಕಥೆ' ಕೂಡ ಸೇರಿದೆ. ಈಗಾಗಲೇ ಪೋಸ್ಟರ್‌ ಹಾಗು ಟ್ರೇಲರ್‌ ಬಿಡುಗಡೆಯಾಗಿದ್ದು,...

  • ದರ್ಶನ್‌ ಈಗ "ಗಂಡುಗಲಿ ಮದಕರಿನಾಯಕ' ಸಿನಿಮಾದಲ್ಲಿ ತೊಡಗಿದ್ದಾರೆ. ಅವರ ಅಭಿನಯದ "ಕುರುಕ್ಷೇತ್ರ' ಚಿತ್ರದ ಶತದಿನೋತ್ಸವ ಕೂಡ ಶಿವರಾತ್ರಿ ದಿನ ಅದ್ಧೂರಿಯಾಗಿ ನಡೆದಿದೆ....

  • "ಜೋಗಿ' ಚಿತ್ರದ ನಿರ್ಮಾಪಕ, ಅಶ್ವಿ‌ನಿ ರೆಕಾರ್ಡಿಂಗ್‌ ಕಂಪೆನಿಯ ರೂವಾರಿ ಅಶ್ವಿ‌ನಿ ರಾಮ್‌ ಪ್ರಸಾದ್‌ ಈಗ ತಮ್ಮ ಪುತ್ರನನ್ನು ಚಿತ್ರರಂಗಕ್ಕೆ ಪರಿಚಯಿಸುವ ಸಿದ್ಧತೆ...

ಹೊಸ ಸೇರ್ಪಡೆ