ಕಾರ್ನಾಡ್‌ ನಿಧನಕ್ಕೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಸಂತಾಪ

Team Udayavani, Jun 11, 2019, 3:00 AM IST

ಹಿರಿಯ ಸಾಹಿತಿ, ನಟ ಮತ್ತು ನಿರ್ದೇಶಕ ಗಿರೀಶ್‌ ಕಾರ್ನಾಡ್‌ ನಿಧನಕ್ಕೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ತೀವ್ರ ಸಂತಾಪ ಸೂಚಿಸಿದೆ. ಕನ್ನಡ ಸಾಹಿತ್ಯ ಲೋಕಕ್ಕೆ ಗಿರೀಶ್‌ ಕಾರ್ನಾಡರು ತನ್ನದೇ ಆದ ಕೊಡುಗೆ ನೀಡಿದ್ದಾರೆ. ಅನೇಕ ಕನ್ನಡ ಮತ್ತು ಹಿಂದಿ ಚಿತ್ರಗಳಲ್ಲಿ ಪ್ರಬುದ್ಧ ನಟನೆಯ ಮೂಲಕ ಮನೆಮಾತಾಗಿದ್ದ, ಕಾರ್ನಾಡರ ನಿಧನದಿಂದಾಗಿ ಕನ್ನಡ ಚಿತ್ರರಂಗ ಮತ್ತು ರಂಗಭೂಮಿ ಹಿರಿಯ ಕೊಂಡಿಯನ್ನು ಕಳೆದುಕೊಂಡಂತಾಗಿದೆ.

ಕಾರ್ನಾಡರ ಅಕಾಲಿಕ ನಿಧನ ಕನ್ನಡ ಸಾಹಿತ್ಯ ಲೋಕ, ಚಿತ್ರರಂಗ ಮತ್ತು ರಂಗಭೂಮಿಗೆ ತುಂಬಲಾರದ ನಷ್ಟ. ಅವರ ಅಗಲಿಕೆಯ ದುಃಖವನ್ನು ಭರಿಸುವ ಶಕ್ತಿಯನ್ನು ಭಗವಂತ ಅವರ ಕುಟುಂಬಕ್ಕೆ ನೀಡಲಿ. ಶ್ರೀಯುತರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಎಸ್‌.ಎ ಚಿನ್ನೇಗೌಡ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕನ್ನಡ ಸಾಹಿತ್ಯ ಲೋಕಕ್ಕೆ ಜ್ಞಾನಪೀಠ ಪ್ರಶಸ್ತಿ, ಪುರಸ್ಕೃತರು, ಚಿಂತಕರು, ನಿರ್ದೇಶಕರು, ಹಿರಿಯ ಸಾಹಿತಿ ಹಾಗೂ ನಟರಾದ ಗಿರೀಶ್‌ ಕಾರ್ನಾಡ್‌ ರವರ ಕೊಡುಗೆ ಅಪಾರ. ಭಗವಂತ ಅವರ ಆತ್ಮಕ್ಕೆ ಚಿರಶಾಂತಿಯನ್ನು ಕರುಣಿಸಲಿ. ಭಾವಪೂರ್ಣ ಶ್ರದ್ಧಾಂಜಲಿಗಳು.
-ಉಪೇಂದ್ರ, ನಟ

ನಟ, ನಾಟಕಕಾರ, ನಿರ್ದೇಶಕ, ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಪದ್ಮಭೂಷಣ ಗಿರೀಶ ಕಾರ್ನಾಡ್‌ ಅವರ ಅಗಲಿಕೆ ಕನ್ನಡ ನಾಡಿನ ಸಾಂಸ್ಕೃತಿಕ ಲೋಕಕ್ಕೆ ತುಂಬಲಾರದ ನಷ್ಟ. ರಂಗಭೂಮಿ ಮತ್ತು ಚಲನಚಿತ್ರ ರಂಗಗಳಲ್ಲಿ ತಮ್ಮದೇ ಆದ ಛಾಪನ್ನು ಒತ್ತಿದ ಅವರ ಕೊಡುಗೆ ಅಪಾರ. ಅವರಿಗೆ ಗೌರವ ಪೂರ್ವಕ ಶ್ರದ್ಧಾಂಜಲಿ.
-ಸೃಜನ್‌ ಲೋಕೇಶ್‌, ನಟ

1985 ರಲ್ಲಿ ಸುಪ್ರೀಂಕೋರ್ಟ್‌ ನನ್ನಪರ ಪರಿಮಳ ನಾನು ಪತಿಪತ್ನಿಯಾಗಿ ಸ್ವತಂತ್ರವಾಗಿ ಬಾಳಬಹುದು ಎಂದು ತೀರ್ಪುನೀಡಿ ಕಳಿಸಿದಾಗ ತುರುವೇಕೆರೆ ಕೃಷ್ಣ ಚಿತ್ರಮಂದಿರದಲ್ಲಿ ನೀ ಬರೆದ ಕಾದಂಬರಿ ಚಿತ್ರದಲ್ಲಿ ಇವರ ಪಾತ್ರ ನನ್ನ ಮಾವನ ಗುಣದಂತೆ ಕಂಡು ಗಾಬರಿಯಾಗಿ ಎಲ್ಲಿ ನನ್ನ ಪರಿಮಳನ ದೂರ ಮಾಡುತ್ತಾರೆ ಎಂದು ಹೆದರಿ 14ವರ್ಷ ಮಾವನ ಮಾತಾಡಿಸಲಿಲ್ಲಾ ಓಂಶಾಂತಿ..
-ಜಗ್ಗೇಶ್‌, ನಟ

ಜ್ಞಾನಪೀಠ ಪ್ರಶಸ್ತಿ ವಿಜೇತ, ಹಿರಿಯ ಸಾಹಿತಿ ಹಾಗೂ ಮೇರು ಕಲಾವಿದರಲ್ಲೊಬ್ಬರಾದ ಗಿರೀಶ್‌ ಕಾರ್ನಾಡ್‌ ಇಂದು ವಿಧಿವಶರಾಗಿರುವುದು ಕನ್ನಡ ಸಾಹಿತ್ಯ ಹಾಗೂ ಚಿತ್ರರಂಗಕ್ಕೆ ತುಂಬಲಾರದ ನಷ್ಟ. ಈ ದುಃಖವನ್ನು ತಡೆದುಕೊಳ್ಳುವ ಶಕ್ತಿ ದೇವರು ಅವರ ಕುಟುಂಬಕ್ಕೆ ನೀಡಲಿ.
-ದರ್ಶನ್‌, ನಟ

ಕಾರ್ನಾಡ್‌ ಅದ್ಭುತ ಬರಹಗಾರ, ನಟ, ನಿರ್ದೇಶಕ, ಉತ್ತಮ ವ್ಯಕ್ತಿ. ತನ್ನ ಕೆಲಸದ ಮೂಲಕವೇ ಗೌರವಕ್ಕೆ ಪಾತ್ರ ವ್ಯಕ್ತಿತ್ವ ಅವರದ್ದು. ನಾನು ಯಾವಾಗಲೂ ಅವರ ಬರಹಗಳಿಗೆ ಅಭಿಮಾನಿ. ಅಂಥ ಅದ್ಭುತ ಪ್ರತಿಭೆಯನ್ನು ನಿರ್ದೇಶಿಸುವ ಮತ್ತು ಅವರೊಂದಿಗೆ ತೆರೆ ಹಂಚಿಕೊಳ್ಳುವ ಸಣ್ಣ ಅವಕಾಶ ನನಗೆ ಸಿಕ್ಕಿರುವುದಕ್ಕೆ ನಾನು ಧನ್ಯ
-ಸುದೀಪ್‌, ನಟ-ನಿರ್ದೇಶಕ

ನನ್ನ ಮೊದಲ ಚಿತ್ರ, ನನ್ನ ಮೊದಲ ನಾಟಕ, ನನ್ನ ಮೊದಲ ಆ್ಯಕ್ಟಿಂಗ್‌ ಕೋರ್ಸ್‌,ನನ್ನ ಮೊದಲ ಗುರು ಗಿರೀಶ್‌ ಕಾರ್ನಾಡ್‌ ಇನ್ನಿಲ್ಲ. ಅವರ ಆತ್ಮಕ್ಕೆ ಶಾಂತಿ ಸಿಗಲಿ.
-ಸಂಯುಕ್ತಾ ಹೊರನಾಡು

ಅವರು ಪುಟಗಳಲ್ಲಿ ಜೀವಂತ, ರಂಗದಲ್ಲಿ ಜೀವಂತ, ಪರದೆಯಲ್ಲಿ ಜೀವಂತ, ತುಂಬು ಸ್ಮತಿಗಳಲ್ಲಿ ಜೀವಂತ, ಬದುಕಿದ್ದಾಗ ಬಾಳಿದ್ದಕ್ಕಿಂತ ಹೊರಟ ನಂತರ ಶಾಶ್ವತವಾಗಿ ಬದುಕುವುದು ಎಂದರೆ ಸಾಮಾನ್ಯವೇ! ತಮಗೆ ಹೃತ್ಪೂರ್ವಕ ನಮನ.
-ಯೋಗರಾಜ್‌ ಭಟ್‌, ನಿರ್ದೇಶಕ

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.ಈ ವಿಭಾಗದಿಂದ ಇನ್ನಷ್ಟು

  • ಒಂದೊಮ್ಮೆ ಸಪ್ಪೆಯಾಗಿದ್ದ ಕೋಸ್ಟಲ್‌ವುಡ್‌ ಇದೀಗ ಗರಿಬಿಚ್ಚಿ ಕುಣಿಯಲಾರಂಭಿಸಿದೆ. ದಾಖಲೆಯ ಮೇಲೆ ದಾಖಲೆಯನ್ನು ಬರೆಯುತ್ತ ಇಲ್ಲಿನ ಸಿನೆಮಾಗಳು ಸದ್ದು ಮಾಡುತ್ತಿವೆ....

  • ಬುಧವಾರ ಬೆಳಗ್ಗೆಯಿಂದಲೇ ಅಭಿಮಾನ್‌ ಸ್ಟುಡಿಯೋಗೆ ಅಭಿಮಾನಿಗಳ ದಂಡು ಹರಿದುಬರುತ್ತಿತ್ತು. ಅದಕ್ಕೆ ಕಾರಣ ಸಾಹಸ ಸಿಂಹ ಡಾ.ವಿಷ್ಣುವರ್ಧನ್‌ ಅವರ ಹುಟ್ಟುಹಬ್ಬ....

  • ನಟ ಉಪೇಂದ್ರ ಅವರಿಗೆ ಬುಧವಾರ ಹುಟ್ಟುಹಬ್ಬದ ಸಂಭ್ರಮ. ಉಪ್ಪಿ ಮನೆ ಮುಂದೆಯೂ ಬೆಳಗ್ಗೆಯಿಂದಲೇ ಅಭಿಮಾನಿಗಳು ಕೈಯಲ್ಲಿ ಗಿಡ ಹಿಡಿದು ನಿಂತಿದ್ದರು. ಅದಕ್ಕೆ ಕಾರಣ,...

  • ಇತ್ತೀಚೆಗಷ್ಟೇ ಪ್ರಜ್ವಲ್‌ ದೇವರಾಜ್‌ ಅವರು ಹೊಸ ಚಿತ್ರವೊಂದನ್ನು ಒಪ್ಪಿಕೊಂಡಿದ್ದು, ಆ ಚಿತ್ರವನ್ನು "ಡಾಟರ್‌ ಆಫ್ ಪಾರ್ವತಮ್ಮ' ಚಿತ್ರದ ನಿರ್ಮಾಪಕ ಶಶಿಧರ್‌...

  • ಸಂಚಾರಿ ವಿಜಯ್‌ "ಆಟಕ್ಕುಂಟು ಲೆಕ್ಕಕ್ಕಿಲ್ಲ' ಎಂಬ ಸಿನಿಮಾದಲ್ಲಿ ನಟಿಸುತ್ತಿರುವ ವಿಚಾರ ನಿಮಗೆ ಗೊತ್ತಿರಬಹುದು. ಈಗ ಆ ಚಿತ್ರ ಬಿಡುಗಡೆಯ ಹಂತಕ್ಕೆ ಬಂದಿದೆ....

ಹೊಸ ಸೇರ್ಪಡೆ