ಪುಟ್ಟಣ್ಣ ಕಣಗಾಲ್‌ ಕುಟುಂಬಕ್ಕೆ ಕಥಾ ಸಂಗಮ ಶೋ

Team Udayavani, Dec 3, 2019, 1:04 PM IST

ರಿಷಭ್‌ ಶೆಟ್ಟಿ ಅವರ ಹೊಸ ಕನಸು ಕಥಾ ಸಂಗಮಚಿತ್ರ ಬಿಡುಗಡೆಯ ಹಂತಕ್ಕೆ ಬಂದಿದೆ. ಚಿತ್ರ ಡಿಸೆಂಬರ್‌ 06 ರಂದು ತೆರೆಕಾಣುತ್ತಿದೆ. ಬಿಡುಗಡೆಗೂ ಮುನ್ನ ರಿಷಭ್‌ ಈ ಚಿತ್ರವನ್ನು ಕನ್ನಡ ಚಿತ್ರರಂಗದ ಚಿತ್ರಬ್ರಹ್ಮಖ್ಯಾತಿಯ ನಿರ್ದೇಶಕ ಪುಟ್ಟಣ್ಣ ಕಣಗಾಲ್‌ ಅವರ ಕುಟುಂಬ ಹಾಗೂ ಪುಟ್ಟಣ್ಣ ಅವರ ಜೊತೆ ಕೆಲಸ ಮಾಡಿದ ಕನ್ನಡ ಚಿತ್ರರಂಗದಹಿರಿಯ ಕಲಾವಿದರಿಗೆ ವಿಶೇಷ

ಪ್ರದರ್ಶನ ಆಯೋಜಿಸಿ, ಅವರ ಅನಿಸಿಕೆ, ಅಭಿಪ್ರಾಯ ಪಡೆದಿದ್ದಾರೆ.

ಭಾನುವಾರ ಸಂಜೆ ಆಯೋಜಿಸಿದ್ದ ಕಥಾ ಸಂಗಮಪ್ರದರ್ಶನಲ್ಲಿ ಪುಟ್ಟಣ್ಣ ಕಣಗಾಲ್‌ ಕುಟುಂಬ ಹಾಗೂ ಹಿರಿಯಕಲಾವಿದ ಶಿವರಾಂ, ಜೈ ಜಗದೀಶ್‌, ಭಗವಾನ್‌ ಸೇರಿದಂತೆ ಅನೇಕರು ಭಾಗವಹಿಸಿ, ಚಿತ್ರಕ್ಕೆ ಮೆಚ್ಚುಗೆ ಸೂಚಿಸಿದರು.ಅಂದಹಾಗೆ, ರಿಷಭ್‌ ಭಾನುವಾರ (ಡಿ.1) ರಂದು ಶೋ ಆಯೋಜಿಸಲು ಕಾರಣ ಪುಟ್ಟಣ್ಣ ಕಣಗಾಲ್‌ ಅವರ ಹುಟ್ಟುಹಬ್ಬ. ಹುಟ್ಟುಹಬ್ಬಕ್ಕೆ ತಮ್ಮ ಸಿನಿಮಾ ಪ್ರದರ್ಶನ ಆಯೋಜಿಸಿದ್ದ ರಿಷಭ್‌ಗೆ ಪುಟ್ಟಣ್ಣ ಕುಟುಂಬದಿಂದ ಗಿಫ್ಟ್ವೊಂದು ಸಿಕ್ಕಿದೆ. ಅದು ಎಂದೂ ಮರೆಯದ ಉಡುಗೊರೆ. ಪುಟ್ಟಣ್ಣ ಕಣಗಾಲ್‌ ಅವರು ಧರಿಸುತ್ತಿದ್ದ ಟೈವೊಂದನ್ನು ರಿಷಭ್‌ಗೆ ಪುಟ್ಟಣ್ಣ ಕುಟುಂಬ ನೀಡಿದೆ. ಇದರಿಂದ ರಿಷಭ್‌ಖುಷಿಯಾಗಿದ್ದಾರೆ. “ನಾನು ಯಾವತ್ತೂ ಗಿಫ್ಟ್ಬಗ್ಗೆ ಹೆಚ್ಚು ಆಸಕ್ತಿ ಹೊಂದಿದವನಲ್ಲ.ಆದರೆ, ಈ ಬಾರಿ ಸಿಕ್ಕಿರುವ ಗಿಫ್ಟ್ ನನ್ನಜೀವನದಲ್ಲಿ ಮರೆಯುವಂಥದ್ದಲ್ಲಎಂದಿದ್ದಾರೆ.

ಇನ್ನು, “ಕಥಾಸಂಗಮಅಂದಾಕ್ಷಣ ನೆನಪಾಗೋದೇ ಪುಟ್ಟಣ್ಣ ಕಣಗಾಲ್‌. 1976 ರಲ್ಲಿಬಂದ ಈ ಚಿತ್ರ ಆ ದಿನಗಳಲ್ಲೇ ವಿಭಿನ್ನ ಪ್ರಯೋಗದ ಸಿನಿಮಾ ಎಂಬ ಹೆಗ್ಗಳಿಕೆಗೆ ಪಾತ್ರವಾಗಿತ್ತು.ಮೂರು ಕಥೆ ಇಟ್ಟುಕೊಂಡು ಮಾಡಿದ ಆ ಚಿತ್ರ ಇಂದಿಗೂಎವರ್‌ಗ್ರೀನ್‌ ಎನಿಸಿಕೊಂಡಿದೆ. ಈಗ ರಿಷಭ್‌ ಶೆಟ್ಟಿ ಮತ್ತು ತಂಡ ಸೇರಿ ಕಥಾಸಂಗಮಹೆಸರಿನ ಮತ್ತೂಂದು ಹೊಸ ಚಿತ್ರಮಾಡಿದೆ. ಇಲ್ಲಿ ಏಳು ಕಥೆ ಇಟ್ಟುಕೊಂಡು ಪ್ರಯೋಗಮಾಡಿದ್ದಾರೆ. “ಕಥಾಸಂಗಮದ ಏಳು ಕಥೆಗಳಿಗೂ ಕಿರಣ್‌ ರಾಜ್‌. ಕೆ, ಶಶಿಕುಮಾರ್‌. ಪಿ, ಚಂದ್ರಜಿತ್‌ ಬೆಳ್ಳಿಯಪ್ಪ, ರಾಹುಲ್‌ ಪಿ.ಕೆ, ಜೈ ಶಂಕರ್‌. , ಕರಣ್‌ ಅನಂತ್‌, ಜಮದಗ್ನಿ ಮನೋಜ್‌ ಅವರು ನಿರ್ದೇಶನ ಮಾಡಿದ್ದಾರೆ. ಚಿತ್ರದಲ್ಲಿ ರಾಜ್‌ ಬಿ ಶೆಟ್ಟಿ, ರಿಷಭ್‌ ಶೆಟ್ಟಿ, ಹರಿಪ್ರಿಯಾ, ಅವಿನಾಶ್‌, ಪ್ರಕಾಶ್‌ ಬೆಳವಾಡಿ, ಕಿಶೋರ್‌, ಪ್ರಮೋದ್‌ ಶೆಟ್ಟಿ, ಯಜ್ಞಾ ಶೆಟ್ಟಿ, ಬಾಲಾಜಿ ಮನೋಹರ್‌ ಇತರರು ಒಂದೊಂದು ಕಥೆಯಲ್ಲಿ ಕಾಣಿಸಿಕೊಂಡಿದ್ದಾರೆ.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ