Udayavni Special

ಕಾವ್ಯಾ ಶಾ ಜೋರು ಮಾತು


Team Udayavani, Aug 6, 2018, 11:22 AM IST

kavya-sha.jpg

“ಮಿಸ್ಟರ್‌ ಅಂಡ್‌ ಮಿಸಸ್‌ ರಾಮಾಚಾರಿ’ಯ ಬಜಾರಿ ಹುಡುಗಿಯಾಗಿ ಗಮನಸೆಳೆದಿದ್ದ ಕಾವ್ಯಾಶಾ, ಇದೀಗ ಜೋರು ಸೌಂಡು ಮಾಡೋಕೆ ಅಣಿಯಾಗಿದ್ದಾರೆ! ಅರೇ, ಹೀಗೆಂದಾಕ್ಷಣ, ಕಾವ್ಯಾ ಶಾ ಯಾಕಪ್ಪ ಜೋರು ಸೌಂಡು ಮಾಡುತ್ತಿದ್ದಾರೆ, ಏನು ವಿಷಯ ಎಂಬ ಪ್ರಶ್ನೆ ಎದುರಾಗಬಹುದು. ವಿಷಯವಿಷ್ಟೇ, “ಮುಕುಂದ ಮುರಾರಿ’ ಬಳಿಕ ಯಾವುದೇ ಕನ್ನಡ ಚಿತ್ರದಲ್ಲಿ ನಟಿಸದ ಕಾವ್ಯಾಶಾ, ತಮಿಳಿನ ಎರಡು ಚಿತ್ರಗಳಲ್ಲಿ ಬಿಜಿಯಾಗಿದ್ದರು.

ಕನ್ನಡದಲ್ಲಿ ಬಂದ “ಲೌಡ್‌ ಸ್ಪೀಕರ್‌’ ಕಥೆ ಮತ್ತು ಪಾತ್ರದ ವಿವರಣೆ ಕೇಳಿದ ಕೂಡಲೇ, ತಮಿಳಿನ ಚಿತ್ರಗಳ ಜೊತೆ ಜೊತೆಗೆ “ಲೌಡ್‌ ಸ್ಪೀಕರ್‌’ ಚಿತ್ರಕ್ಕೂ ಡೇಟ್‌ ಹೊಂದಿಸಿಕೊಂಡು ಚಿತ್ರ ಮಾಡಿ ಮುಗಿಸಿದ್ದಾರೆ. ಅದಕ್ಕೆ ಕಾರಣ, “ಲೌಡ್‌ ಸ್ಪೀಕರ್‌’ ಚಿತ್ರದ ಕಥೆ ಮತ್ತು ಪಾತ್ರ ಎಂಬುದು ಕಾವ್ಯಾಶೆಟ್ಟಿ ಮಾತು. ಈ ಚಿತ್ರದಲ್ಲಿ ಅವರು ಇದೇ ಮೊದಲ ಬಾರಿಗೆ ಹೌಸ್‌ ವೈಫ್ ಪಾತ್ರ ನಿರ್ವಹಿಸಿದ್ದಾರಂತೆ. ಒಂದು ರಾತ್ರಿ ನಡೆಯೋ ಕಥೆಯಲ್ಲಿ ಅವರದು ರಿಯಲ್‌ ಲೈಫ್ಗೆ ಹತ್ತಿರವಾದಂತಹ ಕಥೆ ಇದೆಯಂತೆ.

ರೀಲ್‌ನಲ್ಲೂ ಅವರು ಕಾವ್ಯಾ ಪಾತ್ರದಲ್ಲೇ ಕಾಣಿಸಿಕೊಂಡಿದ್ದು, ನಿರ್ದೇಶಕ ಶಿವತೇಜಸ್‌ ಮತ್ತು ತಂಡ ಒಳ್ಳೆಯ ಚಿತ್ರ ಮಾಡಿದ್ದು, ಚಿತ್ರದಲ್ಲಿ ಎಲ್ಲೂ ಕಷ್ಟ ಎನಿಸಲಿಲ್ಲ ಎನ್ನುವ ಕಾವ್ಯಾ ಶಾ, “ನಾನು ಬೇಸಿಕಲಿ ಡ್ಯಾನ್ಸರ್‌. ನಾನು ಸಿನಿಮಾ ಒಪ್ಪಿಕೊಳ್ಳೋದೇ, ಹಾಡುಗಳು ಸಿಗುತ್ತವೆ, ಡ್ಯಾನ್ಸ್‌ಗೆ ಹೆಚ್ಚು ಸ್ಕೋಪ್‌ ಸಿಗುತ್ತೆ ಅಂತ. ಆದರೆ, “ಲೌಡ್‌ ಸ್ಪೀಕರ್‌’ನಲ್ಲಿ ನನ್ನ ಪಾಲಿಗೆ ಒಂದೇ ಹಾಡು ಸಿಕ್ಕಿದೆ. ಇಡೀ ರಾತ್ರಿ ಚಿತ್ರೀಕರಿಸಿದ ಹಾಡು ಅದು.

ಆ ಬಗ್ಗೆ ಹೇಳುವುದಾದರೆ, ನನಗೆ ಆ ಹಾಡಿನ ಚಿತ್ರೀಕರಣ ವೇಳೆ ಸಿಕ್ಕಾಪಟ್ಟೆ ಜ್ವರ ಇತ್ತು. ಹಾಡಲ್ಲಿ, ಪೆಪ್ಸಿ ತಲೆಮೇಲೆ ಹಾಕಿಕೊಳ್ಳೋ ದೃಶ್ಯವಿತ್ತು. ಜ್ವರದಿಂದ ಬಳಲುತ್ತಿದ್ದರೂ ನಾನು ಪಾಲ್ಗೊಂಡು ಮುಗಿಸಿದೆ. ಅದಕ್ಕೆ ಕಾರಣ, ಚಿತ್ರತಂಡದ ಸಹಕಾರ ಮತ್ತು ಪ್ರೋತ್ಸಾಹ ಎಂಬುದು ಕಾವ್ಯಾ ಶಾ ಹೇಳಿಕೆ. ಇನ್ನು, ಇದೇ ಮೊದಲ ಸಲ ಕಾವ್ಯಾ ಶಾ, ದತ್ತಣ್ಣ ಅವರೊಂದಿಗೆ ನಟಿಸಿದ್ದಾರೆ.

ರಂಗಾಯಣ ರಘು ಅವರೊಂದಿಗೂ ಮೊದಲ ಬಾರಿಗೆ ತೆರೆ ಹಂಚಿಕೊಂಡ ಖುಷಿ ಕಾವ್ಯಾ ಶಾ ಅವರದು. ಎಲ್ಲಾ ಸರಿ, ಕಾವ್ಯಾ ಶಾ, ಕನ್ನಡದಲ್ಲಿ ಹೆಚ್ಚು ಕಾಣಿಸಿಕೊಳ್ಳುತ್ತಿಲ್ಲವಲ್ಲಾ? ಈ ಪ್ರಶ್ನೆಗೆ ಉತ್ತರ, ತಮಿಳು ಚಿತ್ರಗಳು. ಹೌದು, ಕಾವ್ಯಾ ಶಾ ಈವರೆಗೆ ಐದು ತಮಿಳು ಚಿತ್ರಗಳಲ್ಲಿ ನಟಿಸಿದ್ದಾರೆ. ಸದ್ಯ ಅವರೀಗ ಕಾಜಲ್‌ ಅಗರ್‌ವಾಗಲ್‌ ಜೊತೆ ಒಂದು ಚಿತ್ರ, ನಾಯಕ ಜೈ ಜೊತೆಗೊಂದು ಚಿತ್ರದಲ್ಲಿ ನಟಿಸುತ್ತಿದ್ದಾರೆ. ಇನ್ನೊಂದು ದಿನದ ಚಿತ್ರೀಕರಣ ನಡೆದರೆ ಆ ಎರಡು ತಮಿಳು ಚಿತ್ರಗಳು ಪೂರ್ಣಗೊಳ್ಳಲಿವೆಯಂತೆ.

ಸೋಮವಾರ (ಇಂದು) ಹೊಸ ಚಿತ್ರ ಶುರುವಾಗಲಿದ್ದು, ಆ ಚಿತ್ರವನ್ನು ಉದಯ್‌ ಎಂಬ ಹೊಸ ಪ್ರತಿಭೆ ನಿರ್ದೇಶನ ಮಾಡುತ್ತಿದೆ. ಸಿನಿಮಾ ಜೊತೆಗೆ ಕಾವ್ಯಾ ಶಾ ಸ್ವಂತದ್ದೊಂದು ರೆಸ್ಟೋರೆಂಟ್‌ ಶುರುಮಾಡಿದ್ದಾರೆ. ಹೌದು, “ಸೆವೆನ್‌ ವಂಡರ್ಸ್‌’ ಹೆಸರಿನ ರೆಸ್ಟೋರೆಂಟ್‌ ಶುರು ಮಾಡಿರುವ ಕಾವ್ಯಾ ಶಾ, ನಟನೆ ಜೊತೆಯಲ್ಲಿ ಉದ್ಯಮಿಯಾಗಿ ಗುರುತಿಸಿಕೊಳ್ಳುವ ಆಸೆ ಹೊಂದಿದ್ದಾರೆ. ಕನ್ನಡದಲ್ಲಿ ಒಳ್ಳೆಯ ಪಾತ್ರ ಎದುರು ನೋಡುತ್ತಿರುವ ಅವರಿಗೆ ಹೊಸ ಬಗೆಯ ಚಿತ್ರದಲ್ಲಿ ನಟಿಸುವಾಸೆ.

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

Punjab-2

IPL-2020ಯ ಮೊದಲ ಸೂಪರ್ ಓವರ್ ಗೆದ್ದ ಡೆಲ್ಲಿ ಕ್ಯಾಪಿಟಲ್ಸ್

Stoins1

ಅರಬ್ ನಾಡಿನಲ್ಲಿ ಸ್ಟೊಯ್ನ್ಸ್ ಬಿರುಗಾಳಿ ; ಪಂಜಾಬ್ ಗೆಲುವಿಗೆ 158 ಗುರಿ

sukbir

ಕೃಷಿ ಮಸೂದೆಗೆ ಅಂಕಿತ ಹಾಕಬೇಡಿ,ರೈತರು ನಮ್ಮನ್ನೆಂದು ಕ್ಷಮಿಸಲ್ಲ:ರಾಷ್ಟ್ರಪತಿಗೆ ಬಾದಲ್ ಮನವಿ

NEWS-TDY-01

ಚೆನ್ನೈ ವಿರುದ್ಧದ ಮೊದಲ ಪಂದ್ಯಕ್ಕೆ ರಾಜಸ್ಥಾನ್ ತಂಡಕ್ಕೆ ಬಟ್ಲರ್ ಅಲಭ್ಯ

ಚಿತ್ರದುರ್ಗ ಜಿಲ್ಲೆಯಲ್ಲಿ 254 ಜನರಿಗೆ ಕೋವಿಡ್ ಪಾಸಿಟಿವ್! 421 ಮಂದಿ ಗುಣಮುಖ

ಚಿತ್ರದುರ್ಗ ಜಿಲ್ಲೆಯಲ್ಲಿ 254 ಜನರಿಗೆ ಕೋವಿಡ್ ಪಾಸಿಟಿವ್! 421 ಮಂದಿ ಗುಣಮುಖ

punjab-delhin

ಐಪಿಎಲ್ 2020: ಟಾಸ್ ಗೆದ್ದ ಪಂಜಾಬ್ ಬೌಲಿಂಗ್ ಆಯ್ಕೆ

ಚಾಮರಾಜನಗರ : ಕೋವಿಡ್ ಸೋಂಕಿಗೆ ಓರ್ವ ಸಾವು, 73 ಮಂದಿ ಗುಣಮುಖ, 66 ಹೊಸ ಪ್ರಕರಣ ದೃಢ

ಚಾಮರಾಜನಗರ : ಕೋವಿಡ್ ಸೋಂಕಿಗೆ ಓರ್ವ ಸಾವು, 73 ಮಂದಿ ಗುಣಮುಖ, 66 ಹೊಸ ಪ್ರಕರಣ ದೃಢ






ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಸ್ಯಾಂಡಲ್ ವುಡ್ ಡ್ರಗ್ ಕೇಸ್: ರಾಗಿಣಿ, ಸಂಜನಾ ಜಾಮೀನು ಅರ್ಜಿ ಮುಂದೂಡಿಕೆ

ಸ್ಯಾಂಡಲ್ ವುಡ್ ಡ್ರಗ್ ಕೇಸ್: ರಾಗಿಣಿ, ಸಂಜನಾ ಜಾಮೀನು ಅರ್ಜಿ ವಿಚಾರಣೆ ಮುಂದೂಡಿಕೆ

ಕರಣ್‌ ಜೋಹರ್‌ಗೆ “ಡ್ರಗ್‌ ಪಾರ್ಟಿ’ ಕಂಟಕ?

ಕರಣ್‌ ಜೋಹರ್‌ಗೆ “ಡ್ರಗ್‌ ಪಾರ್ಟಿ’ ಕಂಟಕ?

ವಿಷ್ಣುದಾದ 70 ಅಭಿಮಾನಿಗಳ ಮನದಲ್ಲಿ ಯಜಮಾನ್ರು ಜೀವಂತ

ವಿಷ್ಣುದಾದ 70 ಅಭಿಮಾನಿಗಳ ಮನದಲ್ಲಿ ಯಜಮಾನ್ರು ಜೀವಂತ

ಡ್ರಗ್ ದಂಧೆ: ನಿರೂಪಕ ಅಕುಲ್, ಸಂತೋಷ್, ಕಾಂಗ್ರೆಸ್ ನ ಮಾಜಿ ಶಾಸಕರ ಪುತ್ರನಿಗೆ CCB ನೋಟಿಸ್

ಡ್ರಗ್ ದಂಧೆ: ನಿರೂಪಕ ಅಕುಲ್, ಸಂತೋಷ್, ಕಾಂಗ್ರೆಸ್ ನ ಮಾಜಿ ಶಾಸಕರ ಪುತ್ರನಿಗೆ ಸಿಸಿಬಿ ಶಾಕ್

vishnuvardhan

ಹೃದಯವಂತ ವಿಷ್ಣು ಜನ್ಮದಿನ: ಅವರ ಜೀವನಚರಿತ್ರೆ ಹಾಗೂ ನೋಡಲೇಬೇಕಾದ ಚಿತ್ರಗಳು ಇಲ್ಲಿವೆ !

MUST WATCH

udayavani youtube

Dr.Harsha Kamath : ಕಾರ್ಕಳದ ಈ Doctor ಕಲಾ ಕುಸುರಿಯ Master | Udayavani

udayavani youtube

ಮುಂಬೈಯಿಂದ ಡ್ರಗ್ಸ್‌ ತಂದು ಮಂಗಳೂರಿನಲ್ಲಿ ಮಾರಾಟ ಮಾಡುತ್ತಿದ್ದರು: ನಗರ ಪೊಲೀಸ್ ಆಯುಕ್ತ

udayavani youtube

ಕುತಂತ್ರಿ ಚೀನಾವನ್ನು ಕಟ್ಟಿ ಹಾಕುವುದು ಹೇಗೆ?

udayavani youtube

ಭಾಗಶಃ ಕುಸಿದ ಉಡುಪಿಯ ಹಳೆಯ ಕಟ್ಟಡ: ಓರ್ವ ಮಹಿಳೆಗೆ ಗಾಯ | Udayavani

udayavani youtube

ಹಂಪನಕಟ್ಟೆಯಲ್ಲಿ ಪತ್ತೆಯಾದ ಶತಮಾನದ ಹಿಂದಿನ ಬಾವಿ!



ಹೊಸ ಸೇರ್ಪಡೆ

Punjab-2

IPL-2020ಯ ಮೊದಲ ಸೂಪರ್ ಓವರ್ ಗೆದ್ದ ಡೆಲ್ಲಿ ಕ್ಯಾಪಿಟಲ್ಸ್

ತಮಿಳುನಾಡು ಮಾದರಿಯಲ್ಲಿ ತಮಟೆ ಕಲಾವಿದರಿಗೆ ಸೌಲಭ್ಯ ಕಲ್ಪಿಸಲು ಹೋರಾಟ: ರವಿಶಂಕರ್

ತಮಿಳುನಾಡು ಮಾದರಿಯಲ್ಲಿ ತಮಟೆ ಕಲಾವಿದರಿಗೆ ಸೌಲಭ್ಯ ಕಲ್ಪಿಸಲು ಹೋರಾಟ: ರವಿಶಂಕರ್

Stoins1

ಅರಬ್ ನಾಡಿನಲ್ಲಿ ಸ್ಟೊಯ್ನ್ಸ್ ಬಿರುಗಾಳಿ ; ಪಂಜಾಬ್ ಗೆಲುವಿಗೆ 158 ಗುರಿ

sukbir

ಕೃಷಿ ಮಸೂದೆಗೆ ಅಂಕಿತ ಹಾಕಬೇಡಿ,ರೈತರು ನಮ್ಮನ್ನೆಂದು ಕ್ಷಮಿಸಲ್ಲ:ರಾಷ್ಟ್ರಪತಿಗೆ ಬಾದಲ್ ಮನವಿ

NEWS-TDY-01

ಚೆನ್ನೈ ವಿರುದ್ಧದ ಮೊದಲ ಪಂದ್ಯಕ್ಕೆ ರಾಜಸ್ಥಾನ್ ತಂಡಕ್ಕೆ ಬಟ್ಲರ್ ಅಲಭ್ಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.