ಕೆಸಿಸಿ ಟೂರ್ನಿ ಟಿಕೆಟ್ ಹಣ ಕೊಡಗು ಸಂತ್ರಸ್ತ ನಿಧಿಗೆ
Team Udayavani, Sep 2, 2018, 11:11 AM IST
ಸುದೀಪ್ ನೇತೃತ್ವದ ಕೆಸಿಸಿ ( ಕನ್ನಡ ಚಲನಚಿತ್ರ ಕಪ್) ಎರಡನೇ ಆವೃತ್ತಿ ಆರಂಭಕ್ಕೆ ದಿನಗಣನೆ ಆರಂಭವಾಗಿದೆ. ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಸೆಪ್ಟೆಂಬರ್ 08 ಹಾಗೂ 09ರಂದು ನಡೆಯಲಿರುವ ಟೂರ್ನಿಗೆ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಚಾಲನೆ ನೀಡಲಿದ್ದಾರೆ. ಪಂದ್ಯಗಳನ್ನು ಹೆಚ್ಚು ಪ್ರೇಕ್ಷಕರು ಕಣ್ತುಂಬಿಕೊಳ್ಳಬೇಕು ಹಾಗೂ ಇದರಿಂದ ಕೊಡಗು ಸಂತ್ರಸ್ತ ನಿಧಿಗೆ ಸಹಾಯವಾಗಬೇಕೆಂಬ ಕಾರಣಕ್ಕೆ ಟಿಕೆಟ್‌ಗೆ ಕಡಿಮೆ ಬೆಲೆ ನಿಗದಿಪಡಿಸಲಾಗಿದೆ.
ಒಂದು ದಿನದ ಟಿಕೆಟ್‌ಗೆ 25 ರೂಪಾಯಿಯನ್ನು ನಿಗದಿಪಡಿಸಿದ್ದು, ಪ್ರೇಕ್ಷಕ 50 ರೂಪಾಯಿ ಕೊಟ್ಟು ಎರಡು ದಿನದ ಟಿಕೆಟ್ ಪಡೆಯುವುದು ಕಡ್ಡಾಯ. ಈ ಮೂಲಕ 50 ರೂಪಾಯಿಯಲ್ಲಿ ಚಿನ್ನಸ್ವಾಮಿಯಲ್ಲಿ ಎರಡು ದಿನ ಪಂದ್ಯ ವೀಕ್ಷಿಸುವ ಅವಕಾಶವನ್ನು ಪ್ರೇಕ್ಷಕರಿಗೆ ಕಲ್ಪಿಸಲಾಗಿದೆ. ಟಿಕೆಟ್ ಬೆಲೆಯಿಂದ ಸಂಗ್ರಹವಾದ ಹಣವನ್ನು ಕೊಡಗು ಸಂತ್ರಸ್ತರ ನಿಧಿಗೆ ಹಸ್ತಾಂತರಿಸುವ ಮೂಲಕ ಸಹಾಯ ಹಸ್ತ ಚಾಚಲು ಪಂದ್ಯ ಸಂಘಟಕರು ಮುಂದಾಗಿದ್ದಾರೆ.
ಕೆಸಿಸಿ ಟೂರ್ನಿಯ ಟಿಕೆಟ್‌ಗಳು ಸಂಗೀತಾ ಮೊಬೈಲ್ಸ್, ಆನ್‌ಲೈನ್ ಹಾಗೂ ಕನ್ನಡ ಚಲನಚಿತ್ರ ಕಲಾವಿದರ ಸಂಘದ ಕಟ್ಟಡದಲ್ಲಿ ದೊರಕಲಿದೆ. ಟಿಕೆಟ್‌ನಿಂದ ಸಂಗ್ರಹವಾಗುವ ಮೊತ್ತವನ್ನು ಸೆಪ್ಟೆಂಬರ್ 08 ರಂದು ಪಂದ್ಯ ಉದ್ಘಾಟನೆಗೆ ಆಗಮಿಸುವ ಮುಖ್ಯಮಂತ್ರಿಯವರಿಗೆ ಹಸ್ತಾಂತರಿಸಲಾಗುತ್ತದೆ.
ಎಲ್ಲಾ ಓಕೆ, ಟಿಕೆಟ್ ಬೆಲೆ ಕಡಿಮೆ ಇಡಲು ಕಾರಣವೇನೆಂದು ನೀವು ಕೇಳಬಹುದು. ಕನ್ನಡ ಸಿನಿಮಾಗಳನ್ನು ನೋಡಿ ಬೆಳೆಸುವ ಸಾಮಾನ್ಯ ಪ್ರೇಕ್ಷಕನಿಗೆ ಪಂದ್ಯ ನೋಡುವ ಅವಕಾಶವನ್ನು ಕಡಿಮೆ ಬೆಲೆಗೆ ಕಲ್ಪಿಸಿಕೊಡಬೇಕೆಂಬ ಉದ್ದೇಶದಿಂದ ಕಡಿಮೆ ಬೆಲೆ ನಿಗದಿಪಡಿಸಲಾಗಿದೆ.
ಸೆಪ್ಟೆಂಬರ್ 08 ನಾಲ್ಕು ಪಂದ್ಯಗಳು ನಡೆಯಲಿದ್ದು, ಸೆ.09 ರಂದು ಎರಡು ಪಂದ್ಯಗಳ ಜೊತೆಗೆ ಫೈನಲ್ ಪಂದ್ಯ ಕೂಡಾ ನಡೆಯಲಿದೆ. ಕೆಸಿಸಿಯಲ್ಲಿ ಕದಂಬ ಲಯನ್ಸ್, ವಿಜಯನಗರ ಪೆಟ್ರಿಯಾಟ್ಸ್, ಹೊಯ್ಸಳ ಈಗಲ್ಸ್, ಗಂಗಾ ವಾರಿಯರ್, ಒಡೆಯರ್ ಚಾರ್ಜರ್ ಹಾಗೂ ಕರ್ನಾಟಕ ಪ್ಯಾಂಥರ್ ಎಂಬ ಒಟ್ಟು ಆರು ತಂಡಗಳು ಸೆಣಸಾಡಲಿದ್ದು, ಈ ತಂಡಗಳನ್ನು ಆರು ಮಂದಿ ಪ್ರತಿನಿಧಿಸುವ ಜೊತೆಗೆ ಸ್ಟಾರ್ ನಟರು ಕೂಡಾ ತಂಡದಲ್ಲಿ ಆಡಲಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಉಪ್ಪಿಯ ‘ಕಬ್ಜ’ ಕಣಕ್ಕೆ ಬಾಲಿವುಡ್ ನಟ ಎಂಟ್ರಿ…!
ನಟರು ತುಂಬಾ ಇದ್ದಾರೆ, ಆದರೆ, ದರ್ಶನ್ ರಿಯಲ್ ಹೀರೋ : ಟಾಲಿವುಡ್ ನಟ ಜಗಪತಿ ಬಾಬು
‘ಮುಂದುವರೆದ ಅಧ್ಯಾಯ’ ಡೈಲಾಗ್ ಟೀಸರ್ ರಿಲೀಸ್: ಕ್ರೈಂ ಕಥಾಹಂದರದ ಚಿತ್ರದಲ್ಲಿ ಆದಿತ್ಯ
‘ಪೊಗರು’ ವೀಕ್ಷಿಸಿದ ಪ್ರಶಾಂತ್ ನೀಲ್ ಸಿನಿಮಾ ಬಗ್ಗೆ ಹೇಳಿದ್ದೇನು ?
ಚಿತ್ರೀಕರಣದಲ್ಲಿ ಬಿಝಿಯಾಗಿದೆ ಪೃಥ್ವಿ, ಮಿಲನಾ ನಾಗರಾಜ್ ರ ‘ಫಾರ್ ರಿಜಿಸ್ಟ್ರೇಷನ್’
MUST WATCH
ದರೋಡೆಕೋರರನ್ನು ಅಟ್ಟಾಡಿಸಿದ ಜನರು.. ಯಾವ ಸಿನಿಮಾಗೂ ಕಡಿಮೆಯಿಲ್ಲ ಚೇಸಿಂಗ್ ದೃಶ್ಯ
ಕುಮಾರಸ್ವಾಮಿಯನ್ನು ನಂಬಬೇಡಿ, ಅವರೊಂದಿಗೆ ಹೊಂದಾಣಿಕೆ ಬೇಡ: ಬಿಜೆಪಿ ವರಿಷ್ಠರಿಗೆ ಯೋಗೀಶ್ವರ್
CoWin App ಸಮಸ್ಯೆ ! ಎರಡು ದಿನ ಲಸಿಕೆ ಹಂಚಿಕೆ ಇಲ್ಲ ! | Udayavani
ದಾನದ ಪರಿಕಲ್ಪನೆಯ ಕುರಿತು Dr. Gururaj Karajagi ಹೇಳಿದ ಕತೆ ಕೇಳಿ.. Part-3
ಕಾಯಕದಲ್ಲಿ ಕಟ್ಟಡ ಕಟ್ಟುವ ಮೇಸ್ತ್ರಿ; ಬಿಡುವಿನಲ್ಲಿ ಹಾಳೆ ಮುಟ್ಟಾಳೆ ತಯಾರಕರು
ಹೊಸ ಸೇರ್ಪಡೆ
ದಿನದಿಂದ ದಿನಕ್ಕೆ ಕಾಂಗ್ರೆಸ್ ದುರ್ಬಲವಾಗುತ್ತಿರುವುದು ನಿಜ : ಕಪಿಲ್ ಸಿಬಲ್ ಕಳವಳ
ರಾಮಜನ್ಮಭೂಮಿ: 1976ರಲ್ಲಿ ಹೇಳಿದ್ದೇ 2003ರಲ್ಲಿ ಸಾಕ್ಷಿ ಸಹಿತ ದೃಢ
ಹಟ್ಟಿ ಗೋಲ್ಡ್ ಮೈನ್ಸ್ನಿಂದ ಇನ್ನು ಆಭರಣ: ವಾರ್ಷಿಕ 5000 ಕೆ.ಜಿ. ಬಂಗಾರ ಉತ್ಪಾದನೆ ಯೋಜನೆ
ಇರದುದರೆಡೆಗೆ ತುಡಿವುದೇ ಜೀವನ
ಭಾರತ- ಇಂಗ್ಲೆಂಡ್ ನಡುವಿನ ಅಂತಿಮ ಪಂದ್ಯಕ್ಕೆ ಬ್ಯಾಟಿಂಗ್ ಬ್ಯೂಟಿ ಟ್ರ್ಯಾಕ್