ಜೀ ಸರಿಗಮಪ ಗ್ರ್ಯಾಂಡ್‌ ಫಿನಾಲೆ ಗೆದ್ದ ಕೀರ್ತನ ಹೊಳ್ಳ

Team Udayavani, Feb 25, 2019, 5:38 AM IST

ಜೀ ವಾಹಿನಿ ನಡೆಸಿದ ಸರಿಗಮಪ ಗ್ರ್ಯಾಂಡ್‌ ಫಿನಾಲೆಯಲ್ಲಿ ಯುವ ಗಾಯಕ ಕೀರ್ತನ ಹೊಳ್ಳ ಸೀಸನ್‌ 15ರ ವಿಜೇತರಾಗಿ ಹೊರ ಹೊಮ್ಮಿದ್ದಾರೆ. ಈ ಸರಿಗಮಪ ರಿಯಾಲಿಟಿ ಶೋನಲ್ಲಿ ಪ್ರತಿ ಹಂತದಲ್ಲೂ ಪೈಪೋಟಿ ಕೊಟ್ಟಿದ್ದ ಗ್ರಾಮೀಣ ಯುವ ಗಾಯಕ ಹನುಮಂತ ಅವರು ಎರಡನೇ ಸ್ಥಾನಕ್ಕೆ ತೃಪ್ತಿಗೊಂಡಿದ್ದಾರೆ. ಇನ್ನು, ಸಾಧ್ವಿನಿ ಕೊಪ್ಪ ಅವರು ಎರಡನೇ ರನ್ನರ್‌ ಅಪ್‌ ಆಗಿದ್ದಾರೆ.

ಗ್ರ್ಯಾಂಡ್‌ಫಿನಾಲೆ ವಿಜೇತ ಕೀರ್ತನ ಹೊಳ್ಳ ಅವರಿಗೆ ಬಹುಮಾನವಾಗಿ 35 ಲಕ್ಷ ರೂ. ಮೌಲ್ಯದ ಒಂದು ಫ್ಲ್ಯಾಟ್‌ ದೊರೆತರೆ, ಹನುಮಂತು ಅವರಿಗೆ 15 ಲಕ್ಷ ರೂ.ಬೆಲೆ ಬಾಳುವ ಒಂದು ನಿವೇಶನ ದೊರೆತಿದೆ. ಎರಡನೇ ರನ್ನರ್‌ ಅಪ್‌ ಸಾಧ್ವಿನಿ ಕೊಪ್ಪ ಅವರಿಗೆ 2 ಲಕ್ಷ ರೂ. ನಗದು ಬಹುಮಾನ ದೊರೆತಿದೆ.

ಕೋರಮಂಗಲದ ಒಳಾಂಗಣ ಕ್ರೀಡಾಂಗಣದಲ್ಲಿ ನಡದ ಸರಿಗಮಪ ಗ್ರ್ಯಾಂಡ್‌ ಫಿನಾಲೆಯಲ್ಲಿ ಗಾಯಕರಾದ ರಾಜೇಶ್‌ ಕೃಷ್ಣನ್‌, ವಿಜಯಪ್ರಕಾಶ್‌, ಅರ್ಜುನ್‌ ಜನ್ಯ ಹಾಗು ಹಂಸಲೇಖ ಅವರು ತೀರ್ಪುಗಾರರಾಗಿ ಕಾರ್ಯನಿರ್ವಹಿಸಿದರು. ಈ ಗ್ರ್ಯಾಂಡ್‌ ಫಿನಾಲೆಯಲ್ಲಿ ಹನುಮಂತ, ರಿತ್ವಿಕ್‌, ಸಾಧ್ವಿನಿ ಕೊಪ್ಪ, ಕೀರ್ತನ ಹೊಳ್ಳ, ನಿಹಾಲ್, ವಿಜೇತ್‌ ಸ್ಪರ್ಧಿಗಳಾಗಿದ್ದರು. 

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ