ವರ್ಷಾಂತ್ಯಕ್ಕೆ ‘ಕೆಜಿಎಫ್ 3’ ಶೂಟಿಂಗ್ ಆರಂಭ; ಮಹತ್ವದ ಮಾಹಿತಿ ನೀಡಿದ ವಿಜಯ್ ಕಿರಗಂದೂರು
Team Udayavani, May 14, 2022, 1:08 PM IST
ಕೆಜಿಎಫ್ ಚಾಪ್ಟರ್ 2 ಚಿತ್ರವು ಭಾರತದ ಗಲ್ಲಾಪೆಟ್ಟಿಗೆಯಲ್ಲಿ ಆಳ್ವಿಕೆ ನಡೆಸಿರುವುದು ನಿಮಗೆಲ್ಲಾ ಗೊತ್ತೇ ಇದೆ. ರಾಕಿಂಗ್ ಸ್ಟಾರ್ ಯಶ್ ಪ್ರಮುಖ ಪಾತ್ರದಲ್ಲಿ ನಟಿಸಿ, ಪ್ರಶಾಂತ್ ನೀಲ್ ನಿರ್ದೇಶನ ಮಾಡಿದ ಚಿತ್ರವು ಸಾವಿರ ಕೋಟಿ ರೂ. ಗಳಿಕೆಯನ್ನು ಈಗಾಗಲೇ ಸಂಪಾದಿಸಿದೆ. ಇಇದೇ ಫ್ರ್ಯಾಂಚೈಸಿಯ ಮೂರನೇ ಕಂತಿನ ಕುರಿತು ಚರ್ಚೆ ಜೋರಾಗಿರುವ ಸಮಯದಲ್ಲೇ ನಿರ್ಮಾಪಕ ವಿಜಯ್ ಕಿರಗಂದೂರು ಮಹತ್ವದ ಮಾಹಿತಿಯನ್ನು ಬಹಿರಂಗ ಪಡಿಸಿದ್ದಾರೆ.
ಕೆಜಿಎಫ್ ಚಿತ್ರದ ಮೂರನೇ ಕಂತು 2024 ರಲ್ಲಿ ಬಿಡುಗಡೆಯಾಗಲಿದೆ ಎಂದು ನಿರ್ಮಾಪಕ ವಿಜಯ್ ಕಿರಗಂದೂರು ದೃಢಪಡಿಸಿದ್ದಾರೆ. ಅದಲ್ಲದೆ ಹೊಸ ಪಾತ್ರಗಳೊಂದಿಗೆ “ಮಾರ್ವೆಲ್ ಶೈಲಿಯ” ವಿಶ್ವವನ್ನು ರಚಿಸಲು ಯೋಜನೆ ರೂಪಿಸಲಾಗಿದೆ ಎಂದು ಹೇಳಿದ್ದಾರೆ.
ದೈನಿಕ ಭಾಸ್ಕರ್ ಪತ್ರಿಕೆಗೆ ನೀಡಿದ ಸಂದರ್ಶನದಲ್ಲಿ ವಿಜಯ್ ಕಿರಗಂದೂರು ಈ ಮಾಹಿತಿ ನೀಡಿದ್ದಾರೆ. ಅಲ್ಲದೆ ಕೆಜಿಎಫ್ ಚಾಪ್ಟರ್ ಮೂರರ ಚಿತ್ರೀಕರಣ ಇದೇ ವರ್ಷದ ಅಂತ್ಯಕ್ಕೆ ಆರಂಭವಾಗಲಿದೆ ಎಂದಿದ್ದಾರೆ.
ಇದನ್ನೂ ಓದಿ:ತಪ್ಪಿಸಿಕೊಳ್ಳಲು ಯತ್ನ : ಆ್ಯಸಿಡ್ ದಾಳಿಕೋರ ನಾಗೇಶ್ ಕಾಲಿಗೆ ಪೊಲೀಸರ ಗುಂಡು!
“ನಿರ್ದೇಶಕ ಪ್ರಶಾಂತ್ ನೀಲ್ ಅವರು ಸದ್ಯ ಸಲಾರ್ ಚಿತ್ರದ ಶೂಟಿಂಗ್ ನಲ್ಲಿ ಬ್ಯುಸಿ ಇದ್ದಾರೆ. ಸುಮಾರು 30-35% ಚಿತ್ರೀಕರಣ ಮುಗಿದಿದೆ. ಮುಂದಿನ ಚಿತ್ರೀಕರಣ ಮುಂದಿನ ವಾರ ಆರಂಭವಾಗಲಿದೆ. ಅಕ್ಟೋಬರ್ -ನವೆಂಬರ್ ನಲ್ಲಿ ಇದರ ಶೂಟಿಂಗ್ ಮುಗಿಯಲಿದೆ. ಈ ವರ್ಷದ ಅಕ್ಟೋಬರ್ ನಲ್ಲಿ ಕೆಜೆಎಫ್ ಚಾಪ್ಟರ್ 3 ಶೂಟಿಂಗ್ ಆರಂಭಿಸಲು ಯೋಚಿಸುತ್ತಿದ್ದೇವೆ. 2024ಕ್ಕೆ ಕೆಜಿಎಫ್ 3 ಚಿತ್ರ ಥಿಯೇಟರ್ ಗೆ ಬರಲಿದೆ” ಎಂದು ವಿಜಯ್ ಕಿರಗಂದೂರು ಹೇಳಿದ್ದಾರೆ.
ಚಿತ್ರದಲ್ಲಿ ಯಶ್ ಜೊತೆಗೆ ಯಾವುದೇ ಹೊಸ ಮುಖಗಳನ್ನು ಕಾಣಬಹುದೇ ಎಂಬ ಪ್ರಶ್ನೆಗೆ ಉತ್ತರಿಸಿದ ನಿರ್ಮಾಪಕ, “ಮುಂದಕ್ಕೆ, ನಾವು ಮಾರ್ವೆಲ್ ರೀತಿಯ ವಿಶ್ವವನ್ನು ರಚಿಸಲಿದ್ದೇವೆ. ನಾವು ಬೇರೆ ಬೇರೆ ಸಿನಿಮಾಗಳಿಂದ ವಿಭಿನ್ನ ಪಾತ್ರಗಳನ್ನು ತರುತ್ತೇವೆ ಮತ್ತು ಡಾಕ್ಟರ್ ಸ್ಟ್ರೇಂಜ್ ರೀತಿ ಮಾಡಲು ಬಯಸುತ್ತೇವೆ. ಇದರಿಂದ ನಾವು ಹೆಚ್ಚು ಪ್ರೇಕ್ಷಕರನ್ನು ಸುಲಭವಾಗಿ ತಲುಪಬಹುದು” ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಸ್ನೇಹಕ್ಕೆ ಸಾವಿಲ್ಲ ಅಣ್ತಮ್ಮ : ಕಿರಣ್ ರಾಜ್ ಅಭಿನಯದ “ಬಡ್ಡೀಸ್ ಬಿಡುಗಡೆಗೆ ಸಿದ್ದ
‘ಕಟ್ಟಿಂಗ್ ಶಾಪ್’ನಲ್ಲಿ ರ್ಯಾಪ್ ಸಾಂಗ್!
ಥಿಯೇಟರ್ ನಲ್ಲಿ ‘ಟ್ವೆಂಟಿ ಒನ್ ಹವರ್ಸ್’; ಡಾಲಿ ಅಭಿನಯದ ಚಿತ್ರ ಮೇ.20ಕ್ಕೆ ರಿಲೀಸ್
ಗರುಡ ಜೊತೆ ಐಂದ್ರಿತಾ ಎಂಟ್ರಿ; ಮೇ 20ಕ್ಕೆ ಚಿತ್ರ ತೆರೆಗೆ
ತಾ ಮುಂದು, ನಾ ಮುಂದು ಎನ್ನುತ್ತಿರುವ ಹೊಸಬರು; ಈ ವಾರ ಹತ್ತು ಚಿತ್ರಗಳು ತೆರೆಗೆ?