ಕಡಲ ತೀರದಲ್ಲಿ ಸಿಕ್ಕಿದ ‘ಖಾಸಗಿ ಪುಟಗಳು’
Team Udayavani, Dec 18, 2021, 1:07 PM IST
ಬಹುತೇಕ ಹೊಸ ಪ್ರತಿಭೆಗಳೆ ಸೇರಿ ನಿರ್ಮಿಸಿರುವ “ಖಾಸಗಿ ಪುಟಗಳು’ ಚಿತ್ರದ ಫಸ್ಟ್‌ಲುಕ್ ಪೋಸ್ಟರ್ ಇತ್ತೀಚೆಗೆ ಬಿಡುಗಡೆಯಾಗಿದೆ. ಉಡುಪಿಯ ಸುತ್ತಮುತ್ತ ನಡೆಯುವಕರಾವಳಿ ತೀರದ ಹಿನ್ನೆಲೆಯ ಪ್ರೇಮಕಥೆ ಹೊಂದಿರುವ “ಖಾಸಗಿ ಪುಟಗಳು’ ಚಿತ್ರಕ್ಕೆ ಯುವ ನಿರ್ದೇಶಕ ಸಂತೋಷ್ ಶ್ರೀಕಂಠಪ್ಪ ನಿರ್ದೇಶನ ಮಾಡುತ್ತಿದ್ದಾರೆ.
ನವ ಪ್ರತಿಭೆಗಳಾದ ವಿಶ್ವ ಮತ್ತು ಶ್ವೇತಾ ಡಿಸೋಜಾ ಚಿತ್ರದಲ್ಲಿ ಜೋಡಿಯಾಗಿ ಅಭಿನಯಿಸುತ್ತಿದ್ದು, ಉಳಿದಂತೆ ಚೇತನ್ ದುರ್ಗಾ, ನಂದಕುಮಾರ್, ನಿರೀಕ್ಷಾ ಶೆಟ್ಟಿ, ಮೈಸೂರು ದಿನೇಶ್ ಮುಂತಾದವರು “ಖಾಸಗಿ ಪುಟಗಳು’ ಚಿತ್ರದ ಇತರ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ.
ಇದನ್ನೂ ಓದಿ:‘ಕಬ್ಜ’ ಸೆಟ್‌ಗೆ ಸುದೀಪ್ ಎಂಟ್ರಿ: ಖಡಕ್ ಲುಕ್ ನಲ್ಲಿ ಭಾರ್ಗವ್ ಭಕ್ಷಿ
“ಎಸ್‌ವಿಎಂ ಮೋಶನ್ ಪಿಕ್ಚರ್’ ಬ್ಯಾನರ್‌ನಲ್ಲಿ ಮಂಜು ವಿ. ರಾಜ್, ವೀಣಾ ವಿ. ರಾಜ್, ಮಂಜುನಾಥ್ ಡಿ. ಎಸ್ “ಖಾಸಗಿ ಪುಟಗಳು’ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ. ಚಿತ್ರಕ್ಕೆ ವಿಶ್ವಜಿತ್ ರಾವ್ ಛಾಯಾಗ್ರಹಣ, ಆಶಿಕ್‌ಕುಸುಗೊಳಿ ಸಂಕಲನವಿದೆ. ಚಿತ್ರದ ಹಾಡುಗಳಿಗೆ ವಾಸುಕಿ ವೈಭವ್ ಸಂಗೀತವಿದ್ದು,ಕೆ. ಕಲ್ಯಾಣ್, ಪ್ರಮೋದ್ ಮರವಂತೆ, ವಿಶ್ವಜಿತ್ ರಾವ್ ಸಾಹಿತ್ಯವಿದೆ.
ಸದ್ಯ ಬಿಡುಗಡೆಯಾಗಿರುವ “ಖಾಸಗಿ ಪುಟಗಳು’ ಚಿತ್ರ ಟೈಟಲ್ ಮತ್ತು ಪೋಸ್ಟರ್ ಸೋಶಿಯಲ್ ಮೀಡಿಯಾದಲ್ಲಿ ಸಿನಿ ಪ್ರಿಯರ ಗಮನ ಸೆಳೆಯುತ್ತಿದ್ದು, ಹೊಸಬರ ಪ್ರೇಮಕಥೆಗೆ ಆರಂಭದಲ್ಲಿಯೇ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಈಗಾಗಲೇ ನಿಧಾನವಾಗಿ ಚಿತ್ರದ ಪ್ರಚಾರಕಾರ್ಯಗಳಿಗೆ ಚಾಲನೆ ನೀಡಿರುವ ಚಿತ್ರತಂಡ, ಹೊಸ ವರ್ಷದ ಆರಂಭದಲ್ಲಿ “ಖಾಸಗಿ ಪುಟಗಳು’ ಚಿತ್ರವನ್ನು ಪ್ರೇಕ್ಷಕರ ಮುಂದೆ ತರುವ ಯೋಚನೆಯಲ್ಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಸ್ನೇಹಕ್ಕೆ ಸಾವಿಲ್ಲ ಅಣ್ತಮ್ಮ : ಕಿರಣ್ ರಾಜ್ ಅಭಿನಯದ “ಬಡ್ಡೀಸ್ ಬಿಡುಗಡೆಗೆ ಸಿದ್ದ
‘ಕಟ್ಟಿಂಗ್ ಶಾಪ್’ನಲ್ಲಿ ರ್ಯಾಪ್ ಸಾಂಗ್!
ಥಿಯೇಟರ್ ನಲ್ಲಿ ‘ಟ್ವೆಂಟಿ ಒನ್ ಹವರ್ಸ್’; ಡಾಲಿ ಅಭಿನಯದ ಚಿತ್ರ ಮೇ.20ಕ್ಕೆ ರಿಲೀಸ್
ಗರುಡ ಜೊತೆ ಐಂದ್ರಿತಾ ಎಂಟ್ರಿ; ಮೇ 20ಕ್ಕೆ ಚಿತ್ರ ತೆರೆಗೆ
ತಾ ಮುಂದು, ನಾ ಮುಂದು ಎನ್ನುತ್ತಿರುವ ಹೊಸಬರು; ಈ ವಾರ ಹತ್ತು ಚಿತ್ರಗಳು ತೆರೆಗೆ?