ಆ್ಯಕ್ಷನ್‌ಗೆ ಕೋಮಲ್ ರೆಡಿ

ವರಮಹಾಲಕ್ಷ್ಮೀ ಹಬ್ಬಕ್ಕೆ "ಕೆಂಪೇಗೌಡ -2'

Team Udayavani, Jul 18, 2019, 3:04 AM IST

ನಟ ಕೋಮಲ್‌ ಅವರ ಸಿನಿಮಾ ಬಿಡುಗಡೆಯಾಗದೇ ದೊಡ್ಡ ಗ್ಯಾಪ್‌ ಆಗಿತ್ತು. ಅದಕ್ಕೆ ಸರಿಯಾಗಿ ಕೋಮಲ್‌, ಕಾಮಿಡಿಯಿಂದ ಆ್ಯಕ್ಷನ್‌ ಹೀರೋ ಆದ “ಕೆಂಪೇಗೌಡ-2′ ಚಿತ್ರ ಕೂಡಾ ತಡವಾಗಿತ್ತು. ಕೋಮಲ್‌ ಮಾತ್ರ ಈ ಚಿತ್ರ ಬಿಡುಗಡೆಯಾಗುವವರೆಗೆ ಬೇರೆ ಯಾವುದೇ ಸಿನಿಮಾದಲ್ಲಿ ನಟಿಸುವುದಿಲ್ಲ ಎಂದು “ಕೆಂಪೇಗೌಡ-2′ ಚಿತ್ರದ ಮೇಲೆ ನಿರೀಕ್ಷೆ ಇಟ್ಟು ಬಿಡುಗಡೆಗೆ ಎದುರು ನೋಡುತ್ತಿದ್ದರು.

ಈಗ ಚಿತ್ರ ಬಿಡುಗಡೆ ಹಂತಕ್ಕೆ ಬಂದಿದ್ದು, ದಿನಾಂಕ ಕೂಡಾ ಅಂತಿಮವಾಗಿದೆ. ಚಿತ್ರ ಆಗಸ್ಟ 09 ರಂದು ವರಮಹಾಲಕ್ಷ್ಮೀ ಹಬ್ಬದ ದಿನ ಬಿಡುಗಡೆಯಾಗುತ್ತಿದೆ. ಹೌದು, ಇತ್ತೀಚೆಗೆ ಚಿತ್ರ ವೀಕ್ಷಿಸಿದ ಸೆನ್ಸಾರ್‌ ಮಂಡಳಿ ಯು/ಎ ಪ್ರಮಾಣ ಪತ್ರ ನೀಡಿದೆ. ಈ ಮೂಲಕ ಬಿಡುಗಡೆಗೆ ಗ್ರೀನ್‌ಸಿಗ್ನಲ್‌ ಸಿಕ್ಕಂತಾಗಿದೆ. ಇಷ್ಟು ವರ್ಷ ಕಾಮಿಡಿ ನಟರಾಗಿ ಯಶಸ್ಸು ಕಂಡಿದ್ದ ಕೋಮಲ್‌, ಮೊದಲ ಬಾರಿಗೆ ಔಟ್‌ ಅಂಡ್‌ ಔಟ್‌ ಆ್ಯಕ್ಷನ್‌ ಸಿನಿಮಾದಲ್ಲಿ ನಟಿಸಿದ್ದಾರೆ.

ಈಗಾಗಲೇ ಚಿತ್ರದ ಟ್ರೇಲರ್‌ ಹಿಟ್‌ ಆಗಿರುವ ಮೂಲಕ ಚಿತ್ರತಂಡಕ್ಕೆ ಚಿತ್ರದ ಬಗೆಗಿನ ವಿಶ್ವಾಸ ಹೆಚ್ಚಿದೆ. ಈ ಚಿತ್ರದ ಮೂಲಕ ಕೋಮಲ್‌ಗೆ ಹೊಸ ಇಮೇಜ್‌ ಸಿಗುವ ನಿರೀಕ್ಷೆ ಕೂಡಾ ಇದೆ. ಚಿತ್ರದ ಹಿಂದಿ ಡಬ್ಬಿಂಗ್‌ ರೈಟ್ಸ್‌ ಸೇರಿದಂತೆ ಬೇರೆ ಬೇರೆ ಭಾಷೆಗಳ ಡಬ್ಬಿಂಗ್‌ ರೈಟ್ಸ್‌ಗಳಿಗೆ ಬೇಡಿಕೆ ಇದ್ದು, ಆ ಬಗ್ಗೆಯೂ ಚಿತ್ರತಂಡ ಮಾತುಕತೆ ನಡೆಸುತ್ತಿದೆಯಂತೆ.

ಶಂಕರೇಗೌಡ ಈ ಚಿತ್ರದ ನಿರ್ದೇಶಕರು. ಈ ಚಿತ್ರದ ಮತ್ತೂಂದು ವಿಶೇಷವೆಂದರೆ ಕ್ರಿಕೆಟಿಗ ಶ್ರೀಶಾಂತ್‌ ಕೂಡಾ ಇಲ್ಲಿ ಪ್ರಮುಖ ಪಾತ್ರ ಮಾಡಿದ್ದಾರೆ. ಜೊತೆಗೆ ನಟ ಯೋಗೇಶ್‌ ಕೂಡಾ ನಟಿಸಿದ್ದಾರೆ. .ನಿರ್ದೇಶಕರೇ ಕಥೆ ಬರೆದಿರುವ ಈ ಚಿತ್ರಕ್ಕೆ ಚಿತ್ರಕಥೆಯನ್ನು ಕೆ.ರಾಜು, ಶ್ರೀನಾಥ್‌ ಎಂ.ಎಸ್‌ ಹಾಗೂ ನಂಜುಂಡ ಅವರು ಬರೆದಿದ್ದಾರೆ.

ಚಿತ್ರದಲ್ಲಿ ಕೋಮಲ್‌, ಶ್ರೀಶಾಂತ್‌, ಯೋಗಿ, ರಕ್ಷಿಕಾ ಶರ್ಮಾ ಸೇರಿದಂತೆ ಅನೇಕರು ನಟಿಸಿದ್ದಾರೆ. ಚಿತ್ರಕ್ಕೆ ಮೋಹನ್‌ ಛಾಯಾಗ್ರಹಣ, ವರುಣ್‌ ಉನ್ನಿ ಸಂಗೀತ, ಸಿ.ರವಿಚಂದ್ರ ಸಂಕಲನ, ಮುರಳಿ ನೃತ್ಯ ನಿರ್ದೇಶನ ಹಾಗೂ ಅಂಬು ಅರಿವು, ಥ್ರಿಲ್ಲರ್‌ ಮಂಜು, ಜಾಲಿ ಬಾಸ್ಟಿನ್‌ ಅವರ ಸಾಹಸ ಚಿತ್ರಕ್ಕಿದೆ.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ