ಕೋಟಿಗೊಬ್ಬ 3 ಲಿರಿಕಲ್ ವಿಡಿಯೋ ರಿಲೀಸ್
Team Udayavani, Apr 28, 2020, 10:47 AM IST
ಲಾಕ್ಡೌನ್ನಿಂದ ಪ್ರತಿಯೊಬ್ಬರೂ ಮನೆಯಲ್ಲಿದ್ದಾರೆ. ಸಿಕ್ಕಷ್ಟು ಮನರಂಜನೆ ಪಡೆಯುವ ಮೂಲಕ ಸಮಯ ಕಳೆಯುತ್ತಿದ್ದಾರೆ. ಇದರ ನಡುವೆಯೇ ಸೋಮವಾರ ಸುದೀಪ್ ಅಭಿನಯದ “ಕೋಟಿಗೊಬ್ಬ 3 ‘ ಚಿತ್ರದ ಲಿರಿಕಲ್ ವಿಡಿಯೊವೊಂದು ಬಿಡುಗಡೆಯಾಗಿದೆ. ಇದು ಅಭಿಮಾನಿಗಳಿಗೆ ಸಿಕ್ಕಾಪಟ್ಟೆ ಖುಷಿ ಕೊಟ್ಟಿದೆ.
ಚಿತ್ರವನ್ನು ಸೂರಪ್ಪ ಬಾಬು ನಿರ್ಮಾಣ ಮಾಡಿದ್ದು, ಹೊಸ ಪ್ರತಿಭೆ ಶಿವ ಕಾರ್ತಿಕ್ ನಿರ್ದೇಶನ ಮಾಡಿದ್ದಾರೆ. ಇನ್ನು, ಅಭಿಮಾನಿಗಳು ಚಿತ್ರ ಯಾವಾಗ ಬಿಡುಗಡೆಯಾಗುತ್ತೆ ಎಂದು ಕಾದಿದ್ದರು. ಕೋವಿಡ್ 19 ಹಿನ್ನೆಲೆಯಲ್ಲಿ ಎಲ್ಲವೂ ಮುಂದಕ್ಕೆ ಹೋಯ್ತು. ಕೊನೆಗೆ ಅಭಿಮಾನಿಗಳಿಗೆ ಸಂತಸದ ಸುದ್ದಿ ಕೊಟ್ಟ ನಿರ್ಮಾಪಕರು, ಆನಂದ್ಆಡಿಯೋ ಅವರ ಅಧಿಕೃತ ಯುಟ್ಯೂಬ್ ಚಾನೆಲ್ನಲ್ಲಿ ಗಾಯಕ ವ್ಯಾಸರಾಜ ಸೋಸಲೆ ಹಾಡಿರುವ ನಾಗೇಂದ್ರ ಪ್ರಸಾದ್ ಬರೆದಿರುವ ಅರ್ಜುನ್ ಜನ್ಯ ಸಂಗೀತ ನೀಡಿರುವ “ಆಕಾಶವೇ ಅದರಿಸುವ.. ‘ಎಂಬ ಲಿರಿಕಲ್ ವಿಡಿಯೋ ಬಿಡುಗಡೆ ಮಾಡಲಾಗಿದೆ.
ಅಂತೂ ಇಷ್ಟು ದಿನಗಳ ಕಾಲ ಸುದೀಪ್ ಅವರ “ಕೋಟಿಗೊಬ್ಬ 3 ‘ ಚಿತ್ರದ ಬಗ್ಗೆ ಒಂದು ಸುದ್ದಿಯೂ ಹೊರಬಿದ್ದಿರಲಿಲ್ಲ. ಈಗ ಲಿರಿಕಲ್ ವಿಡಿಯೋ ಹೊರಬಂದಿದ್ದು, ಅವರ ಅಭಿಮಾನಿಗಳಿಗಂತೂ ಫುಲ್ ಖುಷಿಯಲ್ಲಿದ್ದಾರೆ. ಸದ್ಯಕ್ಕೆ ಸಿನಿಮಾ ಬಿಡುಗಡೆಯ ದಿನವನ್ನು ಎದುರು ನೋಡುತ್ತಿದ್ದಾರೆ. ಕೋವಿಡ್ 19 ಸಮಸ್ಯೆ ಬಗೆಹರಿದ ನಂತರ “ಕೋಟಿಗೊಬ್ಬ 3 ‘ ಚಿತ್ರವನ್ನು ಹೊರತರಲು ನಿರ್ಮಾಪಕರು ಯೋಚಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
MSD ಎಂಟ್ರಿ ಶಬ್ಧಕ್ಕೆ ಕಿವುಡುತನ ಸಾಧ್ಯತೆ; ವೈರಲ್ ಆಯ್ತು ಡಿಕಾಕ್ ಪತ್ನಿಯ ಇನ್ಸ್ಟಾ ಪೋಸ್ಟ್
UCC; ದೇಶವು ಶರಿಯಾ ಕಾನೂನಿನಲ್ಲಿ ನಡೆಯಬೇಕೆ?: ಯುಸಿಸಿ ಜಾರಿ ಬಗ್ಗೆ ಅಮಿತ್ ಶಾ ಖಡಕ್ ಮಾತು
Rain: ಉಡುಪಿ ಜಿಲ್ಲೆಗೆ ತಂಪೆರೆದ ಮಳೆರಾಯ, ಜಿಲ್ಲಾದ್ಯಂತ ಗುಡುಗು ಸಹಿತ ಧಾರಾಕಾರ ಮಳೆ
Daily Horoscope: ಉದ್ಯೋಗ ಸ್ಥಾನದಲ್ಲಿ ನೆಮ್ಮದಿಯ ವಾತಾವರಣ, ಅಕಸ್ಮಾತ್ ಧನಪ್ರಾಪ್ತಿ
Heavy Rain; ದುಬಾೖ ಪ್ರಯಾಣ ಬೇಡ: ಸಲಹೆ