ಕ್ರಾಂತಿ ಮಾಡಲು ರೆಡಿ ಆದ ದರ್ಶನ್
Team Udayavani, Sep 12, 2021, 2:01 PM IST
ದರ್ಶನ್ ಅವರ ಡಿ55 ಸಿನಿಮಾದ ಟೈಟಲ್ ಲಾಂಚ್ ಆಗಿದೆ. ಪಕ್ಕಾ ಮಾಸ್ ಟೈಟಲ್‌ನೊಂದಿಗೆ ಅಭಿಮಾನಿಗಳ ಕ್ರೇಕ್ ಹೆಚ್ಚಿಸಿದೆ ಚಿತ್ರತಂಡ. ಅಂದಹಾಗೆ, ದರ್ಶನ್ ಅವರ ಹೊಸ ಚಿತ್ರಕ್ಕೆ “ಕ್ರಾಂತಿ’ ಎಂದು ಹೆಸರಿಡಲಾಗಿದೆ.
ಅಂದಹಾಗೆ, ಇದು ಪ್ಯಾನ್ ಇಂಡಿಯಾ ಸಿನಿಮಾ.ಕನ್ನಡ, ತೆಲುಗು, ತಮಿಳು, ಹಿಂದಿ ಹಾಗೂ ಮಲಯಾಳಂನಲ್ಲಿ ಈ ಚಿತ್ರ ಬಿಡುಗಡೆಯಾಗಲಿದೆ.ಗಣೇಶನ ಹಬ್ಬದ ದಿನ ಈ ಐದು ಭಾಷೆಯ ಟೈಟಲ್ ಪೋಸ್ಟರ್ ಅನ್ನು ಚಿತ್ರತಂಡ ಬಿಡುಗಡೆಗೊಳಿಸಿದೆ.
ಶೀಘ್ರದಲ್ಲಿಯೇ ಚಿತ್ರೀಕರಣ ಆರಂಭವಾಗಲಿದೆ.ಇನ್ನು, ತಮ್ಮ ನೆಚ್ಚಿನ ನಟನ ಟೈಟಲ್ ಪೋಸ್ಟರ್‌ರಿಲೀಸ್ ಆಗುತ್ತಿದ್ದಂತೆ ಅಭಿಮಾನಿಗಳು ಸಂಭ್ರಮಪಟ್ಟಿದ್ದು, ಪೋಸ್ಟರ್‌ಗೆ ಪೂಜೆ ಸಲ್ಲಿಸುವ ಮೂಲಕ ಹಬ್ಬಮಾಡಿದ್ದಾರೆ. ಇನ್ನು, ಈ ಚಿತ್ರವನ್ನು ವಿ.ಹರಿಕೃಷ್ಣ ನಿರ್ದೇಶಿಸುತ್ತಿದ್ದಾರೆ. ಈ ಮೂಲಕ ಪೂರ್ಣ ಪ್ರಮಾಣದ ನಿರ್ದೇಶಕರಾಗುತ್ತಿದ್ದಾರೆ.
ಇದನ್ನೂ ಓದಿ:ರಗಡ್ ಲುಕ್ ನಲ್ಲಿ ಲಂಕಾಸುರ
ಕಳೆದ ಬಾರಿ “ಯಜಮಾನ’ಚಿತ್ರದ ನಿರ್ದೇಶನದಲ್ಲೂ ಹರಿಕೃಷ್ಣ ಅವರು ತೊಡಗಿಕೊಂಡಿದ್ದರು. ಜೊತೆಗೆ ಪಿ.ಕುಮಾರ್‌ಕೂಡಾ ನಿರ್ದೇಶಕರಾಗಿದ್ದರು. ಈ ಬಾರಿ ವಿ.ಹರಿಕೃಷ್ಣ ಅವರು ದರ್ಶನ್ ಅವರ 55ನೇ ಚಿತ್ರವನ್ನು ನಿರ್ದೇಶಿಸಲು ಅಣಿಯಾಗಿದ್ದಾರೆ. ಈ ಚಿತ್ರವನ್ನು ಮೀಡಿಯಾ ಹೌಸ್‌ಸ್ಟುಡಿಯೋದಡಿ ಶೈಲಜಾ ನಾಗ್ ಹಾಗೂ ಬಿ.ಸುರೇಶ್ ನಿರ್ಮಿಸುತ್ತಿದ್ದಾರೆ. ಈಗಾಗಲೇ ಇವರುದರ್ಶನ್ ಅವರ “ಯಜಮಾನ’ ಚಿತ್ರವನ್ನು ನಿರ್ಮಿಸಿದ್ದು, ಆ ಚಿತ್ರ ಹಿಟ್‌ಲಿಸ್ಟ್ ಸೇರಿದೆ.