Udayavni Special

“ಕುರುಕ್ಷೇತ್ರ’ ಕನ್ನಡದ ಹೆಮ್ಮೆ

ಇನ್ಮುಂದೆ ಇದೇ ರೀತಿ ಚಿತ್ರ ಮಾಡಲು ಮುನಿರತ್ನ ನಿರ್ಧಾರ

Team Udayavani, Aug 4, 2019, 3:02 AM IST

kurukshetra

ಬಹುತಾರಾಗಣದ “ಕುರುಕ್ಷೇತ್ರ’ ಚಿತ್ರದ ಬಿಡುಗಡೆಗೆ ದಿನಗಣನೆ ಆರಂಭವಾಗಿದೆ. ಆಗಸ್ಟ್‌ 9, ವರಮಹಾಲಕ್ಷ್ಮೀ ಹಬ್ಬದಂದು ಚಿತ್ರ ಬಿಡುಗಡೆಯಾಗುತ್ತಿದೆ. ಚಿತ್ರ ನೋಡಲು ದರ್ಶನ್‌ ಅಭಿಮಾನಿಗಳ ಒತ್ತಡ ಹೆಚ್ಚಾಗಿರುವುದರಿಂದ ಆ.8 ರ ಗುರುವಾರ ಸಂಜೆಗೆ ಶುರುವಾದರೂ ಅಚ್ಚರಿ ಇಲ್ಲ ಎಂಬುದು ಚಿತ್ರ ತಂಡದ ಮಾತು. “ಕುರುಕ್ಷೇತ್ರ’ ಕನ್ನಡದ ಹೆಮ್ಮೆ ಎಂದು ಹೇಳುವ ಮುನಿರತ್ನ, ಚಿತ್ರದ ಕುರಿತು ಒಂದಷ್ಟು ಮಾತನಾಡಿದ್ದಾರೆ.

ಏಕಕಾಲಕ್ಕೆ ರಿಲೀಸ್‌ ಇಲ್ಲ, ಮೊದಲು ಕನ್ನಡ-ತೆಲುಗು: ಎಲ್ಲರಿಗೂ ಗೊತ್ತಿರುವಂತೆ “ಕುರುಕ್ಷೇತ್ರ’ ಐದು ಭಾಷೆಯಲ್ಲಿ ತಯಾರಾಗಿದೆ. ಈ ಹಿಂದೆ ಏಕಕಾಲದಲ್ಲೇ ಐದು ಭಾಷೆಯಲ್ಲಿ ಚಿತ್ರ ಬಿಡುಗಡೆಯಾಗಲಿದೆ ಎಂದು ಹೇಳಲಾಗಿತ್ತು. ಆದರೆ, ಚಿತ್ರ ತಂಡ ಇದೀಗ ಸ್ವಲ್ಪ ಬದಲಾವಣೆ ಮಾಡಿಕೊಂಡಿದೆ. ಆ ಬಗ್ಗೆ ನಿರ್ಮಾಪಕ ಮುನಿರತ್ನ ಕೊಡುವ ವಿವರ ಇದು. “ಆಗಸ್ಟ್‌ 9, ವರಮಹಾಲಕ್ಷ್ಮೀ ಹಬ್ಬಕ್ಕೆ ಚಿತ್ರ ಬಿಡುಗಡೆಯಾಗುತ್ತಿದೆ. ಆದರೆ, ಅಂದು ಕನ್ನಡ ಹಾಗು ತೆಲುಗು ಭಾಷೆಯಲ್ಲಿ ಮಾತ್ರ “ಕುರುಕ್ಷೇತ್ರ’ ಬಿಡುಗಡೆಯಾಗುತ್ತಿದೆ. ಎರಡು ವಾರಗಳ ಬಳಿಕ ತಮಿಳು ಹಾಗು ಮಲಯಾಳಂ ಭಾಷೆಯಲ್ಲಿ ತೆರೆಗೆ ಬರಲಿದೆ. ನಂತರದ ಎರಡು ವಾರಗಳ ಬಳಿಕ ಹಿಂದಿಯಲ್ಲಿ “ಕುರುಕ್ಷೇತ್ರ’ ತೆರೆಕಾಣಲಿದೆ.

ಚಾಣಾಕ್ಯ ಚಂದ್ರಗುಪ್ತ ಮಾಡುವ ಆಸೆ: ಇನ್ನು ಮುಂದಿನ ದಿನಗಳಲ್ಲಿ ನಾನು ಇದೇ ರೀತಿಯ ಚಿತ್ರಗಳನ್ನು ಮಾಡುವ ನಿರ್ಧಾರ ಮಾಡಿದ್ದೇನೆ. ಕಮರ್ಷಿಯಲ್‌ ಸಿನಿಮಾಗಳನ್ನು ಮಾಡಿ, ನೋಡುಗರನ್ನು ಸುಸ್ತು ಮಾಡಿಸುವುದಕ್ಕಿಂತ ಈ ತರಹದ ಪೌರಾಣಿಕ ಚಿತ್ರಗಳನ್ನು ಕೊಡಬೇಕೆಂಬ ಉದ್ದೇ ಹೊಂದಿದ್ದೇನೆ. ಆ ನಿಟ್ಟಿನಲ್ಲಿ ನಾನು “ಕುರುಕ್ಷೇತ್ರ’ ಚಿತ್ರದ ಬಳಿಕ ಮತ್ತೂಂದು ಬಿಗ್‌ ಬಜೆಟ್‌ ಚಿತ್ರ ಕೊಡಲು ಸಜ್ಜಾಗಲು ಯೋಚಿಸಿದ್ದೇನೆ. ನನಗೆ “ಚಾಣಾಕ್ಯ ಚಂದ್ರಗುಪ್ತ’ ಸಿನಿಮಾ ಮಾಡುವ ಆಸೆ ಇದೆ. ಆ ಚಿತ್ರದ ಮೂಲಕ ಉಪೇಂದ್ರ, ಪುನೀತ್‌ರಾಜಕುಮಾರ್‌, ಸುದೀಪ್‌ ಅವರನ್ನು ಸೇರಿಸಿ ಮಾಡುವ ಆಸೆ ಇದೆ.

ಅನಿಲ್‌-ಉದಯ್‌ ಇದ್ದಿದ್ದರೆ ಹಿಂದಿ ನಟರು ಇರುತ್ತಿರಲಿಲ್ಲ: ನನ್ನ ಪ್ರಕಾರ “ಕುರುಕ್ಷೇತ್ರ’ ಕನ್ನಡದ ಹೆಮ್ಮೆ ಎಂದು ಹೇಳಲು ಸಂತಸವಾಗುತ್ತದೆ. ಇದೊಂದು ದಾಖಲೆಯ ಚಿತ್ರವಾಗಲಿದೆ. ವಿಶೇಷವೆಂದರೆ, ಈ ಚಿತ್ರದಲ್ಲಿ ಇಬ್ಬರು ಬಾಲಿವುಡ್‌ ನಟರನ್ನು ಹೊರತುಪಡಿಸಿದರೆ, ನಮ್ಮ ಕನ್ನಡದ ನಟರೇ ತುಂಬಿದ್ದಾರೆ. ಭೀಷ್ಮನ ಪಾತ್ರ ನೆನಪಿಸಿ ಕೊಂಡರೆ ಅದು ಅಂಬರೀಶ್‌ ಅವರನ್ನು ಹೊರತುಪಡಿಸಿ ಬೇರಾರೂ ಮಾಡಲು ಸಾಧ್ಯವೇ ಇಲ್ಲ. ದುರ್ಯೋಧನ ಪಾತ್ರ ಅಂದಾಗ ಅಲ್ಲಿ ದರ್ಶನ್‌ ನೆನಪಾಗುತ್ತಾರೆ. ಉಳಿದಂತೆ “ಕುರುಕ್ಷೇತ್ರ’ದಲ್ಲಿ ಬರುವ ಧರ್ಮರಾಯ, ಕರ್ಣ, ಅಭಿಮನ್ಯು, ನಕುಲ, ಸಹದೇವ ಪಾತ್ರ ನಿರ್ವಹಿಸಿರುವರೆಲ್ಲರೂ ಕನ್ನಡದವರೇ. ಅನಿಲ್‌ ಮತ್ತು ಉದಯ್‌ ನಟರು ಇದ್ದಿದ್ದರೆ, ಹಿಂದಿಯ ಕಲಾವಿದರನ್ನು ಕರೆಸುತ್ತಿರಲಿಲ್ಲ.

ಇದು ನನ್ನ ದೃಷ್ಟಿಕೋನದ ಕುರುಕ್ಷೇತ್ರ: ಎಲ್ಲರಿಗೂ ಒಂದು ಪ್ರಶ್ನೆ ಕಾಡುತ್ತಲೇ ಇದೆ. ಇದು “ಮುನಿರತ್ನ’ ಕುರುಕ್ಷೇತ್ರ ಹೇಗಾಗುತ್ತೆ ಎಂಬುದೇ ಆ ಪ್ರಶ್ನೆ. ಮಹಾಭಾರತವನ್ನು ಓದಿದವರು ಯಾರು ಯಾವ ಭಾಗವನ್ನಾದರೂ ಇಟ್ಟುಕೊಂಡು ಕಥೆ ಬರೆಯಬಹುದು. ಮಹಾಭಾರತ ಓದಿದರೆ, ಒಬ್ಬೊಬ್ಬರಿಗೆ ಒಂದೊಂದು ರೀತಿಯ ಕಥೆ ಹುಟ್ಟುಕೊಳ್ಳುತ್ತದೆ. ಒಂದೊಂದು ದೃಷ್ಟಿಕೊನದಲ್ಲಿ ಕಥೆ ಬರೆದುಕೊಳ್ಳಬಹುದು. ನನಗೆ ದುರ್ಯೋಧನ ಭಾಗ ಇಷ್ಟವಾಯ್ತು. ಅದನ್ನೇ ಇಲ್ಲಿ ಬರೆದು, “ಕುರುಕ್ಷೇತ್ರ’ ಎಂದು ನಾಮಕರಣ ಮಾಡಿ ಸಿನಿಮಾ ಮಾಡಲಾಗಿದೆ. ಸಿನಿಮಾ ನೋಡಿದವರಿಗೆ ಎಲ್ಲವೂ ಅರ್ಥವಾಗುತ್ತೆ. ನನಗೆ ಮೊದಲಿನಿಂದಲೂ ದುರ್ಯೋಧನ ಭಾಗ ವನ್ನು ಸಿನಿಮಾ ಮಾಡುವ ಆಸೆ ಇತ್ತು. ಅದು “ಕುರುಕ್ಷೇತ್ರ’ ಮೂಲಕ ಈಡೇರಿದೆ. ರಾಜಮೌಳಿ “ಬಾಹುಬಲಿ’ ಅಂತ ಹಾಕಬಹುದು. ನಾವೇಕೆ ನಮ್ಮ ದೃಷ್ಟಿಕೋನದಲ್ಲಿ ಕಥೆ ಮಾಡಿ ಕ್ರೆಡಿಟ್‌ ತಗೋಬಾರದು?

ದುಬಾರಿ ಮೊತ್ತಕ್ಕೆ ಟಿವಿ ರೈಟ್ಸ್‌: ಕನ್ನಡದಲ್ಲಿ ಈ ರೀತಿಯ ಚಿತ್ರ ಮಾಡಬೇಕೆಂಬ ಕನಸು ಇತ್ತು. ಅದು ಈಗ ಈಡೇರಿದೆ. ಈಗಾಗಲೇ “ಕುರುಕ್ಷೇತ್ರ’ಕ್ಕೆ ಎಲ್ಲೆಡೆಯಿಂದಲೂ ಬೇಡಿಕೆ ಬಂದಿದೆ. ಹಿಂದಿ ಟಿವಿ ರೈಟ್ಸ್‌ 8 ಕೋಟಿಗೆ ಹೋಗಿದ್ದರೆ, ಕನ್ನಡದಲ್ಲೂ ಸಹ 8 ಕೋಟಿ ರುಪಾಯಿಗೆ ಮಾರಾಟವಾಗಿದೆ. ಈಗಾಗಲೇ ಚಿತ್ರದ ಬಗ್ಗೆ ನಿರೀಕ್ಷೆ ಹೆಚ್ಚಿದ್ದು, ಬೇಡಿಕೆ ಬರುತ್ತಿದೆ. ಅಭಿಮಾನಿಗಳಿಂದ ಸಾಕಷ್ಟು ಡಿಮ್ಯಾಂಡ್‌ ಇರುವುದರಿಂದ ಆ.8 ರ ಗುರುವಾರ ಸಂಜೆಯೇ, ಬಿಡುಗಡೆಯಾಗುವ ಸಾಧ್ಯತೆಯೂ ಇದೆ. ಇನ್ನೊಂದು ವಿಷಯ ಸ್ಪಷ್ಟಪಡಿಸುತ್ತೇನೆ. ಇಲ್ಲಿ ಯಾರಿಗೂ ಹೆಚ್ಚು ಸ್ಕೋಪ್‌ ಕೊಟ್ಟಿಲ್ಲ. ಎಲ್ಲ ರಿಗೂ ಪಾತ್ರ ಏನು ಕೇಳುತ್ತಿದೆಯೋ ಅಷ್ಟನ್ನೇ ಕೊಡಲಾಗಿದೆ. ಇಲ್ಲಿ ಯಾರೂ ಹೆಚ್ಚು, ಕಮ್ಮಿ ಎಂಬುದಿಲ್ಲ. ಎಂಬುದು ಮುನಿರತ್ನ ಅವರ ಮಾತು.

ಅದೇನೆ ಇರಲಿ, ಈಗಾಗಲೇ ಚಿತ್ರಮಂದಿರಗಳ ಮುಂದೆಯೂ ಚಿತ್ರದ ಕಟೌಟ್‌ಗಳು ತಲೆ ಎತ್ತಿವೆ. ಅಂಬರೀಶ್‌ ಹಾಗೂ ದರ್ಶನ್‌ ಕಟೌಟ್‌ಗಳು ಚಿತ್ರಮಂದಿರದ ಮುಂದೆ ರಾರಾಜಿಸಿವೆ. ಪ್ರಸನ್ನ ಚಿತ್ರಮಂದಿರದ ಮುಂದೆ “ಕುರುಕ್ಷೇತ್ರ’ ಚಿತ್ರದ ಕಟೌಟ್‌ ತಲೆ ಎತ್ತಿರುವುದು ಅಭಿಮಾನಿಗಳು ಹಾಗು ಪ್ರೇಕ್ಷಕರಲ್ಲಿ ಹೊಸ ಥ್ರಿಲ್‌ ಹುಟ್ಟುಹಾಕಿರುವುದಂತೂ ಸುಳ್ಳಲ್ಲ.

ಟಾಪ್ ನ್ಯೂಸ್

kavita

ಮತಕ್ಕಾಗಿ ಲಂಚ: ಟಿಆರ್‌ಎಸ್‌ ಸಂಸದೆಗೆ 6 ತಿಂಗಳು ಜೈಲು

ಅಲೆಕ್ಸಾ ಬಾಯ್‌ ಫ್ರೆಂಡ್‌ ಝಿಗಿ : ಅಲೆಕ್ಸಾ ಮತ್ತು ಝಿಗಿ ನಡುವೆ ಆಯ್ಕೆ ಹೇಗೆ?

ಅಲೆಕ್ಸಾ ಬಾಯ್‌ ಫ್ರೆಂಡ್‌ ಝಿಗಿ : ಅಲೆಕ್ಸಾ ಮತ್ತು ಝಿಗಿ ನಡುವೆ ಆಯ್ಕೆ ಹೇಗೆ?

ಸವಾಲಿನ ಮಧ್ಯೆಯೂ ಮುಗಿದ ಯಶಸ್ವಿ 2ನೇ ವರ್ಷ

ಸವಾಲಿನ ಮಧ್ಯೆಯೂ ಮುಗಿದ ಯಶಸ್ವಿ 2ನೇ ವರ್ಷ

2020 Summer Olympics,

ಟೋಕಿಯೊ ಒಲಿಂಪಿಕ್ಸ್‌ : ಹದಿನಾರರ ಸುತ್ತಿಗೆ ಏರಿದ ಬಾಕ್ಸಿಂಗ್‌ ತಾರೆ ಮೇರಿ ಕೋಮ್‌

TABLE TENNIS-OLY-2020-2021-TOKYO

ಟೋಕಿಯೊ: ಟೇಬಲ್‌ ಟೆನಿಸ್‌ನಲ್ಲಿ ಭಾರತದ ಮಣಿಕಾ ಬಾತ್ರಾ ಗ್ರೇಟ್‌ ಕಮ್‌ಬ್ಯಾಕ್‌

ಟಿ20 ಸರಣಿ : ತಮ್ಮದೇ ನೆಲದಲ್ಲಿ ಮತ್ತೆ ಮುಗ್ಗರಿಸಿದ ಲಂಕಾ ಸಿಂಹಗಳು : ಭಾರತಕ್ಕೆ 38 ರನ್‌ ಜಯ

ಟಿ20 ಸರಣಿ : ತಮ್ಮದೇ ನೆಲದಲ್ಲಿ ಮತ್ತೆ ಮುಗ್ಗರಿಸಿದ ಲಂಕಾ ಸಿಂಹಗಳು : ಭಾರತಕ್ಕೆ 38 ರನ್‌ ಜಯ

2020 Summer Olympics

ಟೋಕಿಯೊ ಒಲಿಂಪಿಕ್ಸ್‌ : ಬ್ಯಾಡ್ಮಿಂಟನ್‌ ತಾರೆ ಪಿ.ವಿ.ಸಿಂಧು ಶುಭಾರಂಭಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಹೊಸಬೆಳಕು ಮೂಡುತಿದೆ.. ಸ್ಟಾರ್‌ ಸಿನಿಮಾಗಳ ರಿಲೀಸ್‌ ಡೇಟ್‌ ಅನೌನ್ಸ್‌

ಹೊಸಬೆಳಕು ಮೂಡುತಿದೆ.. ಸ್ಟಾರ್‌ ಸಿನಿಮಾಗಳ ರಿಲೀಸ್‌ ಡೇಟ್‌ ಅನೌನ್ಸ್‌

erwwew

‘ಝೂ: ಕೇರ್ ಆಫ್ ‘ಡಿ’ ಬಾಸ್’ : ಇದು ದರ್ಶನ್ ಅಭಿಮಾನಿಯ ಅಭಿಮಾನದ ಕಥೆ

tdrgdfr

ಮತ್ತೊಮ್ಮೆ ತ್ರಿಮೂರ್ತಿಗಳ ಸಮಾಗಮ..ಜೋರಾಗಿದೆ ಹೊಸ ಸಿನಿಮಾ ಸಿದ್ಧತೆ  

fgertr

‘ನಮ್ ಮಾಣಿ ಮದ್ವೆ ಪ್ರಸಂಗ’ ಹೇಳಲು’ ಬರುತ್ತಿದ್ದಾರೆ ಬಾಲಿವುಡ್ ನಟಿ ಲೋಪಮುದ್ರ

dfdsf

ತಮಿಳುನಾಡಿನ ಶನಿದೇವರ ದರ್ಶನ ಪಡೆದ ನಟ ದರ್ಶನ್  

MUST WATCH

udayavani youtube

ಹೀಗೆ ಮಾಡಿದರೆ ಪರಿಸರಕ್ಕೆ ಅನುಕೂಲ, DIAPER ತ್ಯಾಜ್ಯ !

udayavani youtube

ಕಾರು ಅಪಘಾತ: ಬಿಗ್ ಬಾಸ್ ಮಾಜಿ ಸ್ಪರ್ಧಿ ಯಶಿಕಾ ಗಂಭೀರ ಗಾಯ

udayavani youtube

ವಿಶ್ವ ಕುಸ್ತಿ ಚಾಂಪಿಯನ್ ಶಿಪ್ ನಲ್ಲಿ ಬಂಗಾರ ಗೆದ್ದ ಭಾರತದ ಪ್ರಿಯಾ ಮಲಿಕ್

udayavani youtube

ಒಂದೇ ದಿನದಲ್ಲಿ ತುಂಗಭದ್ರಾ ಜಲಾಶಯಕ್ಕೆ ಬಂತು 12 ಟಿಎಂಸಿ ನೀರು

udayavani youtube

ಮೂಳೂರು: ಮೂರು ಮನೆಗಳಲ್ಲಿ ದರೋಡೆ : ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನಾಭರಣ, ನಗದು ಕಳವು

ಹೊಸ ಸೇರ್ಪಡೆ

kavita

ಮತಕ್ಕಾಗಿ ಲಂಚ: ಟಿಆರ್‌ಎಸ್‌ ಸಂಸದೆಗೆ 6 ತಿಂಗಳು ಜೈಲು

ಅಲೆಕ್ಸಾ ಬಾಯ್‌ ಫ್ರೆಂಡ್‌ ಝಿಗಿ : ಅಲೆಕ್ಸಾ ಮತ್ತು ಝಿಗಿ ನಡುವೆ ಆಯ್ಕೆ ಹೇಗೆ?

ಅಲೆಕ್ಸಾ ಬಾಯ್‌ ಫ್ರೆಂಡ್‌ ಝಿಗಿ : ಅಲೆಕ್ಸಾ ಮತ್ತು ಝಿಗಿ ನಡುವೆ ಆಯ್ಕೆ ಹೇಗೆ?

ಸವಾಲಿನ ಮಧ್ಯೆಯೂ ಮುಗಿದ ಯಶಸ್ವಿ 2ನೇ ವರ್ಷ

ಸವಾಲಿನ ಮಧ್ಯೆಯೂ ಮುಗಿದ ಯಶಸ್ವಿ 2ನೇ ವರ್ಷ

2020 Summer Olympics,

ಟೋಕಿಯೊ ಒಲಿಂಪಿಕ್ಸ್‌ : ಹದಿನಾರರ ಸುತ್ತಿಗೆ ಏರಿದ ಬಾಕ್ಸಿಂಗ್‌ ತಾರೆ ಮೇರಿ ಕೋಮ್‌

TABLE TENNIS-OLY-2020-2021-TOKYO

ಟೋಕಿಯೊ: ಟೇಬಲ್‌ ಟೆನಿಸ್‌ನಲ್ಲಿ ಭಾರತದ ಮಣಿಕಾ ಬಾತ್ರಾ ಗ್ರೇಟ್‌ ಕಮ್‌ಬ್ಯಾಕ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.