ಲಕ್ಷ ಫಾಲೋವರ್ಸ್: ಪತ್ನಿಗೆ ಶುಭ ಕೋರಿದ ಕಿಚ್ಚ
Team Udayavani, Dec 19, 2018, 5:31 PM IST
ಸ್ಯಾಂಡಲ್ವುಡ್ನ ಆರಡಿ ಕಟೌಟ್ ಕಿಚ್ಚ ಸುದೀಪ್ ಟ್ವೀಟರ್ನಲ್ಲಿ ಸದಾ ಆ್ಯಕ್ಟಿವ್ ಇರುತ್ತಾರೆ. ತಮ್ಮ ಅಭಿಮಾನಿಗಳು ಮಾಡುವ ಟ್ವೀಟ್ಗೆ ರೀ-ಟ್ವೀಟ್ ಮಾಡಿ ಅವರನ್ನು ಸಂತೋಷಪಡಿಸುತ್ತಾರೆ. ಇದೀಗ ತಮ್ಮ ಪತ್ನಿ ಪ್ರಿಯಾ ಅವರಿಗೆ ಟ್ವೀಟ್ ಮಾಡುವ ಮೂಲಕ ಅಭಿನಂದಿಸಿದ್ದಾರೆ. ಹೌದು, 2016 ಮೇ ತಿಂಗಳಲ್ಲಿ ಟ್ವೀಟರ್ಗೆ ಎಂಟ್ರಿ ಕೊಟ್ಟಿರೋ ಪ್ರಿಯಾ ಸುದೀಪ್ಗೆ ಈಗ ಒಂದು ಲಕ್ಷ ಫಾಲೋವರ್ಸ್ ಇದ್ದಾರೆ.
ಹಾಗಾಗಿ ಇದೇ ಹಿನ್ನಲೆಯಲ್ಲಿ ಕಿಚ್ಚ ಸುದೀಪ್ ತನ್ನ ಪತ್ನಿಯ ಸಾಧನೆ ಮೆಚ್ಚಿ ತಮ್ಮ ಟ್ವೀಟರ್ನಲ್ಲಿ ಶುಭಾಷಯ ತಿಳಿಸಿದ್ದಾರೆ. ಸುದೀಪ್ ಅಭಿಮಾನಿಗಳು ಟ್ವೀಟರ್ನಲ್ಲಿ, “ನಮ್ಮ ಐಡಲ್ ಗೊಂಬೆ, ಕನ್ನಡ ಇಂಡಸ್ಟ್ರಿಯ ಬಾದ್ಷಾ ಅವರ ಪತ್ನಿ, ನಮ್ಮ ನೆಚ್ಚಿನ ಅತ್ತಿಗೆ ಪ್ರಿಯಾ ಅವರು ಟ್ವೀಟರ್ನಲ್ಲಿ 1 ಲಕ್ಷ ಫಾಲೋವರ್ಸ್ ಹೊಂದಿದ್ದಾರೆ’ ಎನ್ನುವ ಸಾಲನ್ನು ಬರೆದು ಪ್ರಿಯಾ ಸುದೀಪ್ ಮತ್ತು ಅವರ ಫಾಲೋವರ್ಸ್ ಸಂಖ್ಯೆಯನ್ನು ತೋರಿಸುವ ಸ್ಕ್ರೀನ್ ಶಾಟ್ ಅನ್ನು ಕೊಲಾಜ್ ಮಾಡಿ ಅಭಿನಂದನೆ ತಿಳಿಸಿದ್ದರು.
ಅಭಿಮಾನಿಗಳು ಮಾಡಿದ್ದ ಈ ಟ್ವೀಟ್ನ್ನು ಸುದೀಪ್ ರೀಟ್ವೀಟ್ ಮಾಡಿ, Awesome ಎಂದು ಬರೆದು, ನಗುವ ಮತ್ತು ಜ್ಯೂಸ್ ಗ್ಲಾಸ್ ಇರುವ ಎಮೋಜಿ ಹಾಕಿ ಚಿಯರ್ಸ್ ಮಾಡಿದ್ದಾರೆ. ಅಲ್ಲದೇ ಕಿಚ್ಚ ಈ ಟ್ವೀಟ್ಗೆ ಅಭಿನಂದನೆ ತಿಳಿಸಿದ ತಕ್ಷಣ ಅಭಿಮಾನಿಗಳು ರೀಟ್ವೀಟ್ ಮಾಡುವ ಮೂಲಕ ಶುಭಾಶಯವನ್ನು ತಿಳಿಸಿದ್ದಾರೆ. ಸುದೀಪ್ ಮಾಡಿರುವ ಟ್ವೀಟ್ 2 ಸಾವಿರಕ್ಕಿಂತಲೂ ಅಧಿಕ ಲೈಕ್ಸ್ ಕಂಡಿದೆ. ಇನ್ನು ಸುದೀಪ್ “ಪೈಲ್ವಾನ್’ ಮತ್ತು “ಕೋಟಿಗೊಬ್ಬ 3′ ಚಿತ್ರದ ಶೂಟಿಂಗ್ನಲ್ಲಿ ತೊಡಗಿಕೊಂಡಿದ್ದಾರೆ.