ಯೋಗಿ ಲಂಕೆಗೆ ಧನಂಜಯ್ ಸಾಥ್
Team Udayavani, Aug 25, 2021, 1:00 PM IST
ಯೋಗಿ ಅಭಿನಯದ “ಲಂಕೆ’ ಚಿತ್ರಬಿಡುಗಡೆಗೆ ಸಿದ್ಧವಾಗಿದೆ. ಚಿತ್ರ ಈ ವಾರ ತೆರೆಕಾಣುತ್ತಿದೆ. ಮೊದಲ ಹಂತವಾಗಿ ಚಿತ್ರದ ಹಾಡುಗಳು ಬಿಡುಗಡೆಯಾಗಿವೆ. ಚಿತ್ರದ ಹಾಡುಗಳನ್ನು ಡಾಲಿ ಧನಂಜಯ ಬಿಡುಗಡೆ ಮಾಡಿದರು.
ಬಳಿಕ ಮಾತನಾಡಿದ ಧನಂಜಯ್, “ಯೋಗಿ ನನ್ನ ಸ್ನೇಹಿತ. ಸ್ನೇಹಕ್ಕಾಗಿ ಇಲ್ಲಿಗೆ ಬಂದಿದ್ದೀನಿ. ಹಾಡುಗಳು ನೋಡಿದೆ.ತುಂಬಾ ಚೆನ್ನಾಗಿದೆ. ಚಿತ್ರಕೂಡ ಅಷ್ಟೇ ಚೆನ್ನಾಗಿರುತ್ತದೆ ಎಂಬ ನಂಬಿಕೆಯಿದೆಎಂದ ಡಾಲಿ ಧನಂಜಯ, ಸರ್ಕಾರ ಆದಷ್ಟು ಬೇಗ 100% ಅವಕಾಶ ನೀಡಲಿ. ಕೊರೋನ ಕಡಿಮೆಯಾಗಿ ಚಿತ್ರಮಂದಿರ ತುಂಬಿ ತುಳುಕುವ ದಿನಗಳು ಬೇಗ ಬರಲಿ ‘ಎಂದು ಹಾರೈಸಿದರು.
ನಾಯಕ ಯೋಗಿ,”ನಾನು ಇಷ್ಟು ಚೆನ್ನಾಗಿ ನೃತ್ಯ ಮಾಡಲುನೃತ್ಯ ನಿರ್ದೇಶಕ ಧನು ಅವರೇ ಕಾರಣ.ಕಾರ್ತಿಕ್ ಶರ್ಮರ ಸಂಗೀತಅದ್ಭುತವಾಗಿದೆ. ನನ್ನ ಜೊತೆ ಅಭಿನಯಿಸಿರುವ ನಾಯಕಿಯರ ಅಭಿನಯವು ತುಂಬಾ ಚೆನ್ನಾಗಿದೆ’ಎಂದರು.
ಇದನ್ನೂ ಓದಿ:ಸ್ವೆಟರ್ ಅವ್ಯವಹಾರ ಆರೋಪ| DSS ಅಧ್ಯಕ್ಷ ರಘು ವಿರುದ್ಧ ನಟ ಜಗ್ಗೇಶ್ ಮಾನನಷ್ಟ ಮೊಕದ್ದಮೆ
ನಾಯಕಿ ಕೃಷಿ ತಾಪಂಡ ಮಾತನಾಡುತಾ, ಚಿತ್ರದ ಹಾಡುಗಳನ್ನುಕೇಳಿದೆ. ಈಗ ನೋಡಿ ಖುಷಿಯಾಗಿದೆ.ನನಗೆ ಡ್ಯಾನ್ಸ್ ಬರಲ್ಲ. ನಾನು ಇಷ್ಟು ಚೆನ್ನಾಗಿ ಡ್ಯಾನ್ಸ್ ಮಾಡಲು ಸಹಕಾರ ನೀಡಿದ, ನೃತ್ಯ ನಿರ್ದೇಶಕ ಧನು ಹಾಗೂ ನಾಯಕ ಯೋಗಿ ಅವರಿಗೆ ಧನ್ಯವಾದ ಎಂದರು.
ಚಿತ್ರದಲ್ಲಿ ಕಾವ್ಯಾ ಶೆಟ್ಟಿ ಕೂಡಾ ನಟಿಸಿದ್ದು, ಅವರಿಲಲಿ ನೆಗೆಟಿವ್ ಶೇಡ್‌ನಲ್ಲ ಕಾಣಿಸಿಕೊಂಡಿದ್ದಾರಂತೆ.”ನನ್ನದು ಈ ಚಿತ್ರದಲ್ಲಿ ನೆಗಟಿವ್ ಶೇಡ್‌ಪಾತ್ರ. ಒಂದು ಗ್ಲಾಮರಸ್ ಹಾಡಿಗೂಯೋಗಿ ಅವರೊಂದಿಗೆ ಹೆಜ್ಜೆಹಾಕಿದ್ದೇನೆ. ಚಿತ್ರ ಆರಂಭವಾದಾಗಿನಿಂದಲೂ ನಿರ್ದೇಶಕರು ನೀಡಿರುವ ಪೋ›ತ್ಸಾಹಕ್ಕೆ ಆಭಾರಿ ಎಂದರು ಕಾವ್ಯಾ.
ನಿರ್ದೇಶಕ ರಾಮ್‌ಪ್ರಸಾದ್ ಚಿತ್ರದಬಗ್ಗೆ ಹೆಚ್ಚು ಮಾತನಾಡದೇ ಚಿತ್ರವನ್ನುತೆರೆಮೇಲೆ ನೋಡಿ ಆನಂದಿಸುವಂತೆಹೇಳಿದರು. ಚಿತ್ರಕ್ಕೆ ರಾಮ್ ಪ್ರಸಾದ್‌ಹಾಗೂ ಗುರುರಾಜ ದೇಸಾಯಿಸಂಭಾಷಣೆ ಬರೆದ್ದಿದ್ದಾರೆ. “ದಿ ಗ್ರೇಟ್‌ಎಂಟರ್ ಟೈನರ್ ಲಾಂಛನದಲ್ಲಿ ಪಟೇಲ್ ಶ್ರೀನಿವಾಸ್(ನಾಗವಾರ)ಹಾಗೂ ಸುರೇಖ ರಾಮಪ್ರಸಾದ್ ಈಚಿತ್ರ ನಿರ್ಮಾಣ ಮಾಡಿದ್ದಾರೆ.