ಮತ್ತೆ ಬಣ್ಣ ಹಚ್ಚುತ್ತಿದ್ದಾರೆ ಹಿರಿಯ ನಟಿ ಲೀಲಾವತಿ
Team Udayavani, Feb 6, 2019, 5:53 AM IST
ಕಳೆದ ಒಂದು ದಶಕದಿಂದ ಚಿತ್ರರಂಗದಲ್ಲಿ ಯಾವುದೇ ಪಾತ್ರಗಳಿಗೆ ಬಣ್ಣ ಹಚ್ಚದೆ ದೂರವುಳಿದಿದ್ದ ಹಿರಿಯ ನಟಿ ಲೀಲಾವತಿ ಈಗ ಮತ್ತೆ ಬಣ್ಣ ಹಚ್ಚುತ್ತಿದ್ದಾರೆ. ಪ್ರಥಮ್ ನಾಯಕ ನಟನಾಗಿ ಅಭಿನಯಿಸುತ್ತಿರುವ “ನಟ ಭಯಂಕರ’ ಚಿತ್ರದಲ್ಲಿ ಲೀಲಾವತಿ ಪಾತ್ರವೊಂದಕ್ಕೆ ಬಣ್ಣ ಹಚ್ಚುತ್ತಿದ್ದು, ಲೀಲಾವತಿ ಅವರ ಪಾತ್ರದ ಚಿತ್ರೀಕರಣ ಇದೇ ವಾರದಲ್ಲಿ ಬೆಂಗಳೂರಿನಲ್ಲಿ ನಡೆಯಲಿದೆ.
ಈ ಬಗ್ಗೆ ಮಾತನಾಡುವ ನಟ ಪ್ರಥಮ್, “ಆರಂಭದಲ್ಲಿ ಲೀಲಾವತಿ ಮತ್ತು ಅವರ ಪುತ್ರ ವಿನೋದ್ ರಾಜ್ ಅಭಿನಯಿಸಲು ಒಪ್ಪಿರಲಿಲ್ಲ. ಆದರೆ ಚಿತ್ರದ ಪಾತ್ರಕ್ಕೆ ಅವರನ್ನೇ ಕರೆತರಬೇಕು ಎಂಬ ನಮ್ಮ ಹಠಕ್ಕೆ ಕೊನೆಗೂ ಇಬ್ಬರೂ ಒಪ್ಪಿಗೆ ನೀಡಿದರು. ಸದ್ಯ “ನಟ ಭಯಂಕರ’ ಚಿತ್ರ ಕೊನೆಯ ಹಂತದ ಚಿತ್ರೀಕರಣದಲ್ಲಿದೆ’ ಎಂದಿದ್ದಾರೆ.
ಸುಮಾರು ಐದು ದಶಕಗಳ ಕಾಲ ಬೆಳ್ಳಿತೆರೆ ಮೇಲೆ ಮಿಂಚಿದ್ದ ಲೀಲಾವತಿ ನಂತರ ತಮ್ಮ ವಯೋ ಸಹಜ ಆರೋಗ್ಯ ಸಮಸ್ಯೆಯಿಂದಾಗಿ ಚಿತ್ರರಂಗದಿಂದ ಸ್ವಲ್ಪ ದೂರ ಉಳಿದಿದ್ದರು. 2009ರಲ್ಲಿ ತೆರೆಕಂಡ “ಯಾರದು’ ಚಿತ್ರದ ನಂತರ ಲೀಲಾವತಿ ಯಾವುದೇ ಚಿತ್ರಕ್ಕೆ ಬಣ್ಣಹಚ್ಚಿರಲಿಲ್ಲ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kannada Cinema; ಹೊಸ ಚಿತ್ರದಲ್ಲಿ ಖಡಕ್ ಪೊಲೀಸ್ ಆದ ನೆನಪಿರಲಿ ಪ್ರೇಮ್
ʼದುರ್ಗಿʼಯಾಗಿ ಚಂದನವನಕ್ಕೆ ಕಾಲಿಟ್ಟ ಕಾಲಿವುಡ್ ಬೆಡಗಿ: ಡಾಲಿ ಜೊತೆ ರೊಮ್ಯಾನ್ಸ್
Harshika Poonachha ದಂಪತಿ ಮೇಲೆ ಹಲ್ಲೆ; ಇಬ್ಬರ ವಿರುದ್ಧ ಕೇಸ್ ದಾಖಲು
Kannada Cinema; ‘ರಾಮರಸ’ ಹಿಂದೆ ಗುರು ಆ್ಯಂಡ್ ಟೀಂ
ಮೈಸೂರಲ್ಲಿ ‘ಬಘೀರ’ ಶೂಟಿಂಗ್ ವೇಳೆ ನಟ ಶ್ರೀಮುರುಳಿಗೆ ಗಾಯ; ಆಸ್ಪತ್ರೆಗೆ ದಾಖಲು