‘ಮಾಫಿಯಾ’ಗೆ ಲೋಹಿತ್ ನಿರ್ದೇಶನ: ಪ್ರಜ್ವಲ್ ಜೊತೆ “ಮಮ್ಮಿ’ ಡೈರೆಕ್ಟರ್
Team Udayavani, Oct 7, 2021, 3:26 PM IST
ಪ್ರಜ್ವಲ್ ದೇವರಾಜ್ ಅಭಿನಯದ “ಮಾಫಿಯಾ’ ಚಿತ್ರಕ್ಕೆ ಈಗ ಹೊಸ ನಿರ್ದೇಶಕರ ಆಯ್ಕೆಯಾಗಿದೆ. ಅದು ಲೋಹಿತ್. ಈ ಹಿಂದೆ “ಮಮ್ಮಿ’, “ದೇವಕಿ’ ಚಿತ್ರಗಳನ್ನು ನಿರ್ದೇಶಿಸಿರುವ ಲೋಹಿತ್ ಈಗ ಪಕ್ಕಾ ಆ್ಯಕ್ಷನ್ ಸಿನಿಮಾ ಮಾಡಲು ಹೊರಟಿದ್ದಾರೆ. ಆರಂಭದಲ್ಲಿ ಈ ಚಿತ್ರಕ್ಕೆ ಗುರುದತ್ ಗಾಣಿಗ ನಿರ್ದೇಶಕರಾಗಿದ್ದರು. ಆದರೆ, ಈಗ ಅವರ ಜಾಗಕ್ಕೆ ಲೋಹಿತ್ ಬಂದಿದ್ದಾರೆ. ಬೆಂಗಳೂರು ಕುಮಾರ್ ಫಿಲಂಸ್ ಲಾಂಛನದಲ್ಲಿ ಕುಮಾರ್. ಬಿ ಈ ಚಿತ್ರ ನಿರ್ಮಾಣ ಮಾಡುತ್ತಿದ್ದಾರೆ.
ಇದನ್ನೂ ಓದಿ:ಬಿಗ್ಬಾಸ್ : ಶಮಿತಾ ಶೆಟ್ಟಿಯನ್ನು ಆಂಟಿ ಎಂದು ಸಂಭೋದಿಸಿದ್ದಕ್ಕೆ ಆಕೆಯ ತಾಯಿಯಿಂದ ವಿರೋಧ
ನವೆಂಬರ್ ಒಂದರಿಂದ ಚಿತ್ರೀಕರಣ ಆರಂಭವಾಗಲಿದೆ. ಬೆಂಗಳೂರು, ಮೈಸೂರು ಮತ್ತು ರಾಮೋಜಿ ಫಿಲಂ ಸಿಟಿಯಲ್ಲಿ ಚಿತ್ರೀಕರಣ ನಡೆಯಲಿದೆ. ಈ ಚಿತ್ರದಲ್ಲಿ ಅದಿತಿ ಪ್ರಭುದೇವ ನಾಯಕಿಯಾಗಿ ನಟಿಸಲಿದ್ದಾರೆ. ಉಳಿದ ತಾರಾಬಳಗದ ಆಯ್ಕೆ ನಡೆಯುತ್ತಿದೆ. ಚಿತ್ರಕ್ಕೆ ಅನೂಪ್ ಸೀಳಿನ್ ಸಂಗೀತ, ಮಾಸ್ತಿ ಸಂಭಾಷಣೆ, ಜೆಬಿನ್ ಜಾಕಬ್ ಛಾಯಾಗ್ರಹಣವಿದೆ.
ಸದ್ಯ ಪ್ರಜ್ವಲ್ ದೇವರಾಜ್ “ವೀರಂ’ ಚಿತ್ರದಲ್ಲಿ ಬಿಝಿಯಾಗಿದ್ದಾರೆ. ಇದಲ್ಲದೇ ಇನ್ನೊಂದೆರಡು ಚಿತ್ರಗಳು ಕೂಡಾ ಪ್ರಜ್ವಲ್ ಕೈಯಲ್ಲಿವೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Nalkane Ayama Movie Review; ದೆವ್ವದ ಕಾಟದ ಹಿಂದೊಂದು ಅಸಲಿ ಆಟ!
IPL; ಆರ್ ಸಿಬಿ ಕಪ್ ಗೆಲ್ಲಬೇಕಾದರೆ ಮೊದಲು….: ರಾಬಿನ್ ಉತ್ತಪ್ಪ ಹೇಳಿದ್ದೇನು?
Gadag; ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಕೊಲೆಗಡುಕರೇ ಪ್ರಥಮ ಪ್ರಜೆಗಳು: ಬಸವರಾಜ ಬೊಮ್ಮಾಯಿ
B. Y. Raghavendra: “ಕಾಂಗ್ರೆಸ್ ನಾಯಕರ ಮನಸ್ಥಿತಿಗೆ ತಕ್ಕಂತೆ “ಚೊಂಬು’ ಜಾಹೀರಾತು’
Lok Sabha Election 2024: ಝಾರ್ಖಂಡ್, ಛತ್ತೀಸ್ಗಢದಲ್ಲಿ ಗೆಲುವು ಯಾರಿಗೆ?