Love Li; ತೆರೆಗೆ ಬಂತು ವಸಿಷ್ಠ ನಟನೆಯ ‘ಲವ್ ಲೀ’


Team Udayavani, Jun 14, 2024, 10:57 AM IST

love li kannada movie

ನಟ ವಸಿಷ್ಠ ಸಿಂಹ ಈಗ ನಿರೀಕ್ಷೆಯೊಂದಿಗೆ ಎದುರು ನೋಡುತ್ತಿದ್ದಾರೆ. ಆ ನಿರೀಕ್ಷೆಯೇ “ಲವ್‌ ಲೀ’. ಇದು ವಸಿಷ್ಠ ಸಿಂಹ ನಟನೆಯ ಸಿನಿಮಾ. ಇಂದು ತೆರೆಕಾಣುತ್ತಿದೆ. ಈಗಾಗಲೇ ಟ್ರೇಲರ್‌, ಹಾಡುಗಳ ಮೂಲಕ ಸದ್ದು ಮಾಡಿರುವ ಈ ಚಿತ್ರವಿದು.

ತಮ್ಮ ಚಿತ್ರದ ಬಗ್ಗೆ ಮಾತನಾಡುವ ವಸಿಷ್ಠ, ಹೊಸಥರದ ಸಿನಿಮಾ ಮಾಡಬೇಕು ಎಂಬ ಕನಸನ್ನು ಇಟ್ಟುಕೊಂಡು ಬಹುತೇಕ ಹೊಸಬರೇ ಸೇರಿಕೊಂಡು ಮಾಡಿರುವ ಸಿನಿಮಾವಿದು. ರೌಡಿಸಂ, ಲವ್‌, ಆ್ಯಕ್ಷನ್‌, ಸೆಂಟಿಮೆಂಟ್‌ ಎಲ್ಲವೂ ಈ ಸಿನಿಮಾದ ಕಥೆಯಲ್ಲಿದೆ. ತುಂಬ ಚೆನ್ನಾಗಿ ಸಿನಿಮಾ ಮೂಡಿಬರುತ್ತಿದ್ದು, ಕನ್ನಡ ಪ್ರೇಕ್ಷಕರಿಗೆ ಇಷ್ಟವಾಗಲಿದೆ. ಸಿನಿಮಾದ ಟೈಟಲ್ಲೇ ಹೇಳುವಂತೆ, ಸಿನಿಮಾ ಕೂಡ “ಲವ್‌ ಲೀ’ ಆಗಿಯೇ ಬಂದಿದೆ. ಹಲವು ಭಾವನೆಗಳನ್ನು ತೋರಿಸುವಂತಹ ಅವಕಾಶ ಈ ಪಾತ್ರದಲ್ಲಿದೆ’ ಎನ್ನುವುದು ನಾಯಕ ವಸಿಷ್ಠ ಮಾತು.

“ಅಭುವನಸ ಕ್ರಿಯೇಶನ್ಸ್‌’ ಬ್ಯಾನರಿನಲ್ಲಿ ರವೀಂದ್ರ ಕುಮಾರ್‌ ಬಂಡವಾಳ ಹೂಡಿ ನಿರ್ಮಿಸುತ್ತಿರುವ “ಲವ್‌ ಲಿ’ ಸಿನಿಮಾಕ್ಕೆ ಯುವ ಪ್ರತಿಭೆ ಚೇತನ್‌ ಕೇಶವ್‌ ನಿರ್ದೇಶನ ಮಾಡುತ್ತಿದ್ದಾರೆ. ನಿರ್ದೇಶಕ ಚೇತನ್‌ ಕೇಶವ್‌ ಹೇಳುವಂತೆ, “ಲವ್‌ ಲೀ ಐದಾರು ಜಾನರ್‌ಗಳು ಸೇರಿಕೊಂಡಿರುವ ಸಿನಿಮಾ. ವಸಿಷ್ಠ ಅವರ ಕೆರಿಯರ್‌ನಲ್ಲೇ ವಿಭಿನ್ನ ಸಿನಿಮಾವಾಗಲಿದೆ ಎಂಬ ವಿಶ್ವಾಸ ಅವರದು.

ನಾಯಕಿ ಸ್ಟೆಫಿ ಪಟೇಲ್‌ ಕೂಡಾ ತಮ್ಮ ಚೊಚ್ಚಲ ಸಿನಿಮಾ ಮೇಲೆ ನಿರೀಕ್ಷೆ ಇಟ್ಟಿದ್ದಾರೆ. “ಇದು ಕನ್ನಡದಲ್ಲಿ ನನಗೆ ಮೊದಲ ಸಿನಿಮಾ. ತುಂಬಾ ವೃತ್ತಿಪರ ತಂಡದ ಜೊತೆ ಕೆಲಸ ಮಾಡಿದ ಅನುಭವ ಈ ಸಿನಿಮಾದಲ್ಲಿ ಸಿಕ್ಕಿದೆ. ಸಾಮಾನ್ಯವಾಗಿ ಹುಡುಗರು ಪ್ರೀತಿಸುವಂತೆ ಹುಡುಗಿಯರ ಹಿಂದೆ ಬೀಳುತ್ತಾರೆ. ಆದರೆ ಈ ಸಿನಿಮಾದಲ್ಲಿ ನನ್ನನ್ನು ಪ್ರೀತಿಸುವಂತೆ ಹುಡುಗನ ಹಿಂದೆ ಬೀಳುತ್ತೇನೆ. ಅದು ಹೇಗೆ ಎನ್ನುವುದನ್ನು ಸಿನಿಮಾದಲ್ಲೇ ನೋಡಬೇಕು. ಮೊದಲ ಕನ್ನಡ ಸಿನಿಮಾದ ಮೇಲೆ ಸಾಕಷ್ಟು ನಿರೀಕ್ಷೆ ಇದೆ’ ಎನ್ನುತ್ತಾರೆ.

ಈ ಚಿತ್ರಕ್ಕಾಗಿ ಮಲ್ಪೆಯ ಪಡುಕೆರೆ ಬೀಚ್‌ನಲ್ಲಿ ಸೆಟ್‌ವೊಂದನ್ನು ಹಾಕಿದ್ದು, ಇದು ಸಿನಿಮಾದ ಹೈಲೈಟ್‌ ಎನ್ನುವುದು ತಂಡದ ಮಾತು. ಚಿತ್ರದಲ್ಲಿ ಅಚ್ಯುತ್‌ ಕುಮಾರ್‌, ದತ್ತಣ್ಣ, ಸಮೀಕ್ಷಾ, ಮಾಳವಿಕಾ ಮೊದಲಾದವರು “ಲವ್‌ ಲಿ’ ಸಿನಿಮಾದ ಇತರ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ಚಿತ್ರಕ್ಕೆ ಅಶ್ವಿ‌ನ್‌ ಕೆನಡಿ ಛಾಯಾಗ್ರಹಣ, ಹರೀಶ್‌ ಕೊಮ್ಮೆ ಸಂಕಲನವಿದೆ. ಚಿತ್ರದ ಹಾಡುಗಳಿಗೆ ಅನೂಪ್‌ ಸೀಳಿನ್‌ ಸಂಗೀತ ಸಂಯೋಜಿಸಿದ್ದು, ಕೆ. ಕಲ್ಯಾಣ್‌ ಸಾಹಿತ್ಯವಿದೆ.

ಟಾಪ್ ನ್ಯೂಸ್

Somanna

Railway; ನನೆಗುದಿಗೆ ಬಿದ್ದಿದ್ದ ಯೋಜನೆ ಪೂರ್ಣಕ್ಕೆ ಕ್ರಮ: ಕೇಂದ್ರ ಸಚಿವ ಸೋಮಣ್ಣ

Road Mishap ಖಾಸಗಿ ಬಸ್- ಆಟೋ ಮುಖಾಮುಖಿ ಡಿಕ್ಕಿ: ಓರ್ವ ಸಾವು; 10 ಮಂದಿಗೆ ಗಾಯ

Road Mishap ಖಾಸಗಿ ಬಸ್- ಆಟೋ ಮುಖಾಮುಖಿ ಡಿಕ್ಕಿ: ಓರ್ವ ಸಾವು; 10 ಮಂದಿಗೆ ಗಾಯ

1-aaaa

Shiruru hill collapse; ಕಡಲ ತೀರದಲ್ಲಿ ಅರ್ಧ ಮೃತದೇಹ ಪತ್ತೆ!;ಸಂಖ್ಯೆ 7ಕ್ಕೇರಿಕೆ

Team India

Sri Lanka ಪ್ರವಾಸ; ಭಾರತ ತಂಡ ಪ್ರಕಟ: ಹಾರ್ದಿಕ್ ಪಾಂಡ್ಯಗೆ ಸಿಗದ T20 ನಾಯಕತ್ವ

1-madi-a

Hill Collapse ಭೀತಿ: ಸಂಪಾಜೆ ರಾಷ್ಟ್ರೀಯ ಹೆದ್ದಾರಿಯಲ್ಲಿ ರಾತ್ರಿ ವಾಹನ ಸಂಚಾರ ನಿಷೇಧ

BYR-joga-Visit

Jog Falls: ಜೋಗ ಜಲಪಾತಕ್ಕೆ ವಿಶ್ವದರ್ಜೆಯ ಸ್ಪರ್ಶ: ಸಂಸದ ಬಿ.ವೈ.ರಾಘವೇಂದ್ರ

Byndoor  ಮುಂದುವರಿದ ಸೊಮೇಶ್ವರ ಗುಡ್ಡ ಕುಸಿತ; ದೊಂಬೆ ರಸ್ತೆ ತಾತ್ಕಾಲಿಕ ಬಂದ್‌

Byndoor ಮುಂದುವರಿದ ಸೊಮೇಶ್ವರ ಗುಡ್ಡ ಕುಸಿತ; ದೊಂಬೆ ರಸ್ತೆ ತಾತ್ಕಾಲಿಕ ಬಂದ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

gowri movie songs released

Gowri ಹಾಡು ಹಬ್ಬ; ಸಮರ್ಜಿತ್‌, ಸಾನ್ಯಾ ಜೋಡಿ

baila baila song of hiranya

Rajavardan; ಹಿರಣ್ಯದಲ್ಲಿ ದಿವ್ಯಾ ಸುರೇಶ್‌ ಹಾಟ್‌ ಸ್ಟೆಪ್‌

roopantara movie

Roopanthara; ಬದುಕು ಬವಣೆಗಳ ಸುತ್ತ ರೂಪಾಂತರ

Renukaswamy Case: ನಟ ದರ್ಶನ್‌ ‍& ಗ್ಯಾಂಗ್‌ ನ್ಯಾಯಾಂಗ ಬಂಧನದ ಅವಧಿ ಮತ್ತೆ ವಿಸ್ತರಣೆ

Renukaswamy Case: ನಟ ದರ್ಶನ್‌ ‍& ಗ್ಯಾಂಗ್‌ ನ್ಯಾಯಾಂಗ ಬಂಧನದ ಅವಧಿ ಮತ್ತೆ ವಿಸ್ತರಣೆ

Chaithra J Achar

Chaithra J Achar; ಸಿದ್ಧಾರ್ಥ್ ಗೆ ಜೋಡಿಯಾದ ಟೋಬಿಯ ಬೇಬಿ

MUST WATCH

udayavani youtube

ಕರ್ಮಫಲ ಶಿಕ್ಷಣದಿಂದ ಆತ್ಮೋನ್ನತಿ

udayavani youtube

ತಪ್ತ ಮುದ್ರಾ ಧಾರಣೆ ವಿಶೇಷ ಮಹತ್ವದ್ದು, ಯಾಕೆ?

udayavani youtube

ಬಾಳೆಯಿಂದ ವಾರ್ಷಿಕ 50-60 ಲಕ್ಷ ರೂ. ಆದಾಯ

udayavani youtube

ಅಘನಾಶಿನಿ ಆರ್ಭಟ

udayavani youtube

ತಾನು ಪ್ರವಾಸಿಸಿದ ಊರಿನ ಹೆಸರುಗಳನ್ನೆಲ್ಲ ನೆನಪಿಸಿಕೊಂಡ ಡಾ. ರಾಜ್‌ಕುಮಾರ್

ಹೊಸ ಸೇರ್ಪಡೆ

court

Dowry ಕಿರುಕುಳಕ್ಕೆ ಮಹಿಳೆ ಬಲಿ: ಪತಿ, ಆತನ ಮೊದಲ ಪತ್ನಿ ಸೇರಿ ನಾಲ್ವರಿಗೆ 6 ವರ್ಷ ಜೈಲು

Somanna

Railway; ನನೆಗುದಿಗೆ ಬಿದ್ದಿದ್ದ ಯೋಜನೆ ಪೂರ್ಣಕ್ಕೆ ಕ್ರಮ: ಕೇಂದ್ರ ಸಚಿವ ಸೋಮಣ್ಣ

Road Mishap ಖಾಸಗಿ ಬಸ್- ಆಟೋ ಮುಖಾಮುಖಿ ಡಿಕ್ಕಿ: ಓರ್ವ ಸಾವು; 10 ಮಂದಿಗೆ ಗಾಯ

Road Mishap ಖಾಸಗಿ ಬಸ್- ಆಟೋ ಮುಖಾಮುಖಿ ಡಿಕ್ಕಿ: ಓರ್ವ ಸಾವು; 10 ಮಂದಿಗೆ ಗಾಯ

1-aaaa

Shiruru hill collapse; ಕಡಲ ತೀರದಲ್ಲಿ ಅರ್ಧ ಮೃತದೇಹ ಪತ್ತೆ!;ಸಂಖ್ಯೆ 7ಕ್ಕೇರಿಕೆ

Team India

Sri Lanka ಪ್ರವಾಸ; ಭಾರತ ತಂಡ ಪ್ರಕಟ: ಹಾರ್ದಿಕ್ ಪಾಂಡ್ಯಗೆ ಸಿಗದ T20 ನಾಯಕತ್ವ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.