‘ಲವ್ ಮಾಕ್ಟೇಲ್-2’ ಕಲರ್ ಫುಲ್ ಪ್ರೀ-ರಿಲೀಸ್ ಇವೆಂಟ್
Team Udayavani, Feb 10, 2022, 12:17 PM IST
ಥಿಯೇಟರ್ ಮತ್ತು ಮಲ್ಟಿಪ್ಲೆಕ್ಸ್ಗಳಲ್ಲಿ ಪೂರ್ಣ ಪ್ರಮಾಣದ ಪ್ರೇಕ್ಷಕರ ಪ್ರವೇಶಾತಿ ಸಿಗುತ್ತಿದ್ದಂತೆ, ಬ್ಯಾಕ್ ಟು ಬ್ಯಾಕ್ ಸಿನಿಮಾಗಳು ರಿಲೀಸ್ ಆಗುತ್ತಿವೆ. ಮತ್ತೂಂದೆಡೆ, ಚಿತ್ರರಂಗದಲ್ಲಿ ಸಿನಿಮಾಗಳ ಪ್ರೀ-ರಿಲೀಸ್ ಇವೆಂಟ್ಸ್ ಕೂಡ ಮತ್ತೆ ಪ್ರಾರಂಭವಾಗಿದ್ದು, ಈ ವಾರ ತೆರೆ ಕಾಣುತ್ತಿರುವ “ಲವ್ ಮಾಕ್ಟೇಲ್-2′ ಸಿನಿಮಾದ ಪ್ರೀ-ರಿಲೀಸ್ ಇವೆಂಟ್ಸ್ ಇತ್ತೀಚೆಗೆ ಅದ್ಧೂರಿಯಾಗಿ ನಡೆಯಿತು.
ನಟ ಕ್ರೇಜಿಸ್ಟಾರ್ ರವಿಚಂದ್ರನ್ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಆಗಮಿಸಿ ಶುಭ ಹಾರೈಸಿದರು. ಇದೇ ವೇಳೆ ಮಾತನಾಡಿದ ರವಿಚಂದ್ರನ್, “ಕೆಲವರಿಗೆ ಗುಂಡು ಹಾಕಿದರೆ ಮತ್ತು (ಅಮಲು) ಸಿಗುತ್ತೆ. ಪ್ರೀತಿಗಿಂತಲೂ ದೊಡ್ಡ ಮತ್ತು ಯಾವುದೂ ಇಲ್ಲ. “ಲವ್ ಮಾಕ್ಟೇಲ್’ ಚಿತ್ರದ ಕಥೆ ನೋವಿನಲ್ಲಿ ಕೊನೆ ಆಗಿತ್ತು. ಆ ನೋವಿಗೆ ಈಗ ಲವ್ ಮಾಕ್ಟೇಲ್-2′ ಸಿನಿಮಾದಲ್ಲಿ ಉತ್ತರ ಬೇಕು. ಮನುಷ್ಯ ಕೇವಲ ನೋವಿನಲ್ಲಿಯೇ ಬದುಕಲು ಸಾಧ್ಯವಿಲ್ಲ’ ಎಂದು ರವಿಚಂದ್ರನ್ ಹೇಳಿದರು.
ಇದನ್ನೂ ಓದಿ:‘ಕ್ರಾಂತಿ’ ಶೂಟಿಂಗ್ ಸೆಟ್ನಲ್ಲಿ ‘ಮೆಜೆಸ್ಟಿಕ್’ ಸೆಲೆಬ್ರೆಶನ್
“ಲವ್ ಮಾಕ್ಟೇಲ್-2′ ಚಿತ್ರಕ್ಕೆ ಡಾರ್ಲಿಂಗ್ ಕೃಷ್ಣ ನಿರ್ದೇಶನ ಮಾಡಿದ್ದಾರೆ. ಮಿಲನಾ ನಾಗರಾಜ್ ಬಂಡವಾಳ ಹೂಡಿದ್ದಾರೆ. ಚಿತ್ರದ ಕಲಾವಿದರು ಮತ್ತು ತಂತ್ರಜ್ಞರು ಈ ಸಂದರ್ಭದಲ್ಲಿ ಹಾಜರಿದ್ದು, “ಲವ್ ಮಾಕ್ಟೇಲ್-2′ ಬಗ್ಗೆ ತಮ್ಮ ಅನಿಸಿಕೆ, ಅಭಿಪ್ರಾಯ ಹಂಚಿಕೊಂಡರು.